ಮುಂಬೈ(ಏ.19):  ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 45 ರನ್ ಗೆಲುವು ದಾಖಲಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 2 ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಲಂಕರಿಸಿದೆ.

189 ರನ್‌ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಉತ್ತಮ ಆರಂಭ ಪಡೆಯಿತು. ಆದರೆ ಮನನ್ ವೋಹ್ರ ಆಟ 14 ರನ್‌ಗೆ ಅಂತ್ಯವಾಯಿತು. ನಾಯಕ ಸಂಜು ಸ್ಯಾಮ್ಸನ್ ಕೇವಲ 1 ರನ್  ಸಿಡಿಸಿ ಔಟಾದರು. ಆರಂಭಿಕ ಜೋಸ್ ಬಟ್ಲರ್ ಹಾಗೂ ಶಿವಂ ದುಬೆ ಜೊತೆಯಾಟ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಚೇತರಿಕೆ ನೀಡಿತು.

ಜೋಸ್ ಬಟ್ಲರ್ 49 ರನ್ ಸಿಡಿಸಿ ಔಟಾದರು. ಇತ್ತ ಶಿವಂ ದುಬೆ 17 ರನ್ ಗಳಿಸಿ ಔಟಾದರು. ಡೇವಿಡ್ ಮಿಲ್ಲರ್ ಹಾಗೂ ರಿಯಾನ್ ಪರಾಗ್ ಕೂಡ ಅಬ್ಬರಿಸಿಲಿಲ್ಲ. ರಾಹುಲ್ ಟಿವಾಟಿಯಾ 20 ರನ್ ಸಿಡಿದರೆ, ಕ್ರಿಸ್ ಮೊರಿಸ್ ಶೂನ್ಯ ಸುತ್ತಿದರು. 

ಅಂತಿಮ ಹಂತದಲ್ಲಿ ಜಯದೇವ್ ಉನದ್ಕಟ್ 17 ಎಸೆತದಲ್ಲಿ 24 ರನ್ ಸಿಡಿಸಿದರು. ಅದೆಷ್ಟೇ ಹೋರಾಡಿದರೂ ರಾಜಸ್ಥಾನಕ್ಕೆ ಗೆಲವು ಸಿಗಿಲ್ಲ. ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಸಿಡಿಸಿತು ಈ ಮೂಲಕ ಚೆನ್ನೈ 45 ರನ್ ಗೆಲುವು ಸಾಧಿಸಿತು. ಚೆನ್ನೈ ಪರ ಮೊಯಿನ್ ಆಲಿ 3, ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕುರನ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.