Asianet Suvarna News Asianet Suvarna News

IPL 2021:ಬದಲಾವಣೆಗೆ ಮುಂದಾದ ರಾಜಸ್ಥಾನ, SRH ತಂಡದಲ್ಲಿ ಯಾರಿಗೆ ಸ್ಥಾನ?ಸಂಭಾವ್ಯ ಪ್ಲೇಯಿಂಗ್ 11!

  • IPL 2021 40ನೇ ಲೀಗ್ ಪಂದ್ಯ, 
  • ಪ್ಲೇ ಆಫ್ ಕನಸಿನಲ್ಲಿ RR, ಸೋಲಿನ ಅಂತರ ಕಡಿಮೆ ಮಾಡುತ್ತಾ SRH?
  • ಹೈದರಾಬಾದ್ ರಾಜಸ್ಥಾನ ಸಂಭಾವ್ಯ ಪ್ಲೇಯಿಂಗ್ 11
IPL 2021 league fight Sunrisers Hyderabad vs Rajasthan Royals probable playing 11 ckm
Author
Bengaluru, First Published Sep 27, 2021, 3:28 PM IST

ದುಬೈ(ಸೆ.27): IPL 2021ರ ಲೀಗ್ ಸುತ್ತಿನ ಹೋರಾಟ ರೋಚಕ ಘಟ್ಟ ತಲುಪುತ್ತಿದೆ. ಪ್ಲೇ ಆಫ್ ಸುತ್ತಿಗೇರಲು ತಂಡಗಳ ಕಸರತ್ತು ಹೆಚ್ಚಾಗುತ್ತಿದೆ. 40ನೇ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯ ಹಲವು ಕುತೂಹಲಕ್ಕೆ ಕಾರಣವಾಗಿದೆ. ಕಾರಣ ರಾಜಸ್ಥಾನದ ಪ್ಲೇ ಆಫ್ ಕನಸು ಜೀವಂತವಾಗಬೇಕಾದರೆ ಇಂದು ಗೆಲ್ಲಬೇಕು. ರಾಜಸ್ಥಾನ ಗೆಲುವು ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಡೆತ ನೀಡಲಿದೆ. ಹೀಗೆ ಒಂದು ಪಂದ್ಯದ ಫಲಿತಾಂಶ ಇತರ ತಂಡದ ಪ್ಲೇ ಆಫ್ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಇಂದಿನ ಪಂದ್ಯ ಕೇವಲ ರಾಜಸ್ಥಾನ ಹಾಗೂ ಹೈದರಾಬಾದ್ ಮಾತ್ರವಲ್ಲ, ಇತರ ತಂಡಗಳಿಗೂ ಮಹತ್ವದ್ದಾಗಿದೆ.

ಪಡಿಕ್ಕಲ್ ಕನ್ನಡಾಭಿಮಾನ: ನಾವು ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು!

ಇಂದಿನ ಹೋರಾಟಕ್ಕೆ ಯಾರು ಸ್ಥಾನ ಪಡೆಯಲಿದ್ದಾರೆ. ಯಾರಿಗೆ ಕೊಕ್ ನೀಡಲಾಗುತ್ತದೆ. ತಂಡದ ಗಾಯದ ಸಮಸ್ಯೆ ವಿವರ ಏನು? ಈ ಕುರಿತ ಹಲವು ಪ್ರಶ್ನೆಗಳಿಗೆ ಇಲ್ಲಿದೆ. ಉತ್ತರ. ಇಂದಿನ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ.

ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ 11:
ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಕೇದಾರ್ ಜಾದವ್, ಜೇಸನ್ ಹೋಲ್ಡರ್, ಅಬ್ದುಲ್ ಸಮಾದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹಮ್ಮದ್

IPL 2021: ಹರ್ಷಲ್ ಪಟೇಲ್‌ಗೆ ಹ್ಯಾಟ್ರಿಕ್ ವಿಕೆಟ್, ಮುಂಬೈ ವಿರುದ್ಧ RCBಗೆ 54 ರನ್ ಗೆಲುವು!

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಡೇವಿಡ್ ವಾರ್ನರ್ ಬಜಲು ಡೇಸನ್ ರಾಯ್‌ಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಇತ್ತ ಕೇದಾರ್ ಜಾಧವ್ ಬದಲು ವಿರಾಟ್ ಸಿಂಗ್ ಅಥವಾ ಪ್ರಿಯಂ ಗರ್ಗ್ ಅವಕಾಶ ಪಡೆಯು ಸಾಧ್ಯತೆ ಹೆಚ್ಚಿದೆ. ಇನ್ನುಳಿದಂತೆ ಹೆಚ್ಚಿನ ಬದಲಾವಣೆ ಮಾಡವು ಸಾಧ್ಯತೆಗಳಿಲ್ಲ.

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11:
ಯಶಸ್ವಿ ಜೈಸ್ವಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಸಂಜು ಸಾಮ್ಸನ್, ಇವಿನ್ ಲಿವಿಸ್, ಮಹೀಪಾಲ್ ಲೊಮ್ರೊರ್, ರಿಯಾನ್ ಪರಾಗ್, ರಾಹುಲ್ ಟಿವಾಟಿಯಾ, ಕ್ರಿಸ್ ಮೊರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಾಫಿಜುರ್ ರಹಮಾನ್

ಪ್ಲೇ ಆಫ್ ಕನಸಿನಲ್ಲಿರುವ ರಾಜಸ್ಥಾನ ರಾಯಲ್ಸ್, ಡೇವಿಡ್ ಮಿಲ್ಲರ್ ಅಥವಾ ಇವಿನ್ ಲಿವಿಸ್ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯುವ ಸಾಧ್ಯತೆ ಇದೆ. ಇತ್ತ ಕ್ರಿಸ್ ಮೊರಿಸ್ ಅಥವಾ ತಬ್ರೈಜ್ ಶಮ್ಸಿ ಅವಕಾಶ ಪಡೆಯುವ ಸಾಧ್ಯತೆ ಇದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ ಇದುವರೆಗೆ ಕೇವಲ 1 ಗೆಲುವು ಸಾಧಿಸಿದೆ, ಇನ್ನುಳಿದ 8 ಪಂದ್ಯದಲ್ಲೂ ಮುಗ್ಗರಿಸಿದೆ. ಕೇವಲ 2 ಅಂಕ ಸಂಪಾದಿಸಿರುವ ಹೈದರಾಬಾದ್ ಇನ್ನುಳಿದಿರುವ 4 ಲೀಗ್ ಪಂದ್ಯ ಗೆದ್ದರೆ ಒಟ್ಟು 12 ಅಂಕ ಸಂಪಾದಿಸಲಿದೆ. ಹೀಗಾಗಿ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್ ಬಾಗಿಲು ಬಹುತೇಕ ಕ್ಲೋಸ್ ಆಗಿದೆ.  ಅಂಕಪಟ್ಟಿಯಲ್ಲಿ ಹೈದರಾಬಾದ್ ಅಂತಿಮ ಸ್ಥಾನದಲ್ಲಿದೆ.

ರಾಜಸ್ಥಾನ ರಾಯಲ್ಸ್ ಕತೆ ಹಾಗಲ್ಲ. 9 ಪಂದ್ಯದಲ್ಲಿ 4 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ರಾಜಸ್ಥಾನದ ನಂತ್ರದ ಸ್ಥಾನವನ್ನು ಮುಂಬೈ ಇಂಡಿಯನ್ಸ್ ಅಲಂಕರಿಸಿದೆ. ಇನ್ನುಳಿದ ಎಲ್ಲಾ ಪಂದ್ಯದಲ್ಲಿ ರಾಜಸ್ಥಾನ ಗೆಲುವು ಸಾಧಿಸಿದರೆ, ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಹೀಗಾದರೆ ಮುಂಬೈ ಇಂಡಿಯನ್ಸ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಇಬ್ಬರು ಸದ್ಯ 8 ಅಂಕ ಸಂಪಾದಿಸಿದೆ.

IPL 2021: ಜಡೇಜಾ ಹೀರೋ, ಕೆಕೆಆರ್ ಎದುರು ರೋಚಕ ಜಯ ಸಾಧಿಸಿದ ಸಿಎಸ್‌ಕೆ..!

ರಾಜಸ್ಥಾನ ಹಾಗೂ ಹೈದಾರಾಬಾದ್ ಮುಖಾಮುಖಿಯಲ್ಲಿ ಇಬ್ಬರು ಸಮಬಲ ಸಾಧಿಸಿದ್ದಾರೆ. 14 ಬಾರಿ ಎರಡು ತಂಡಗಳು ಮುಖಾಮುಖಿಯಾಗಿದೆ. 7 ಪಂದ್ಯ ಹೈದರಾಬಾದ್ ಗೆದ್ದರೆ, ಇನ್ನುಳಿದ 7 ಪಂದ್ಯ ರಾಜಸ್ಥಾನ ಗೆದ್ದಿದೆ. ಕಳೆದ 5 ಪಂದ್ಯದಲ್ಲಿ ರಾಜಸ್ಥಾನ 3 ಗೆಲುವು ಸಾಧಿಸಿದೆ. ಈ ಆಂಕಿ ಅಂಶ ರಾಜಸ್ಥಾನದ ಆತ್ಮವಿಶ್ವಾಸ ಹೆಚ್ಚಿಸಲಿದೆ. ಆದರೆ ದುಬೈನಲ್ಲಿ ಆಡಿದ 8 ಪಂದ್ಯದಲ್ಲಿ ರಾಜಸ್ಥಾನ ಗೆದ್ದಿರುವುದು ಕೇವಲ 2 ಪಂದ್ಯ ಮಾತ್ರ.

Follow Us:
Download App:
  • android
  • ios