Asianet Suvarna News Asianet Suvarna News

IPL 2021: ಹರ್ಷಲ್ ಪಟೇಲ್‌ಗೆ ಹ್ಯಾಟ್ರಿಕ್ ವಿಕೆಟ್, ಮುಂಬೈ ವಿರುದ್ಧ RCBಗೆ 54 ರನ್ ಗೆಲುವು!

  • ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಮುಂಬೈ ವಿರುದ್ಧ 54 ರನ್ ಗೆಲುವು ಸಾಧಿಸಿದ ಕೊಹ್ಲಿ ಸೈನ್ಯ
  • RCB vs MI ನಡುವಿನ IPL 2021 ಟೂರ್ನಿಯ 39ನೇ ಪಂದ್ಯ
IPL 2021 Royal Challengers Bengaluru beat Mumbai Indians by 54 runs in Dubai ckm
Author
Bengaluru, First Published Sep 26, 2021, 11:28 PM IST
  • Facebook
  • Twitter
  • Whatsapp

ದುಬೈ(ಸೆ.26): IPL 2021ರ ಎರಡನೇ ಭಾಗದಲ್ಲಿ ಸತತ 2 ಸೋಲು ಕಂಡು ನಿರಾಸೆ ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಇದೀಗ ಗೆಲುವಿನ ಲಯಕ್ಕೆ ಮರಳಿದೆ. ಮುಂಬೈ ಇಂಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ 54 ರನ್ ಗೆಲುವು ದಾಖಲಿಸಿದೆ. ಮುಂಬೈ ಇಂಡಿಯನ್ಸ್(Mumbai Indians) ಸತತ 3ನೇ ಸೋಲು ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.

ಈ ಪಂದ್ಯದಲ್ಲಿ RCB ವೇಗಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಪಟೇಲ್ ಐತಿಹಾಸಿಕ ಸಾಧನೆಯಿಂದ ಕೊಹ್ಲಿ ಸೈನ್ಯ ಸುಲಭವಾಗಿ ಗೆಲುವು ಸಾಧಿಸಿತು. ಆರ್‌ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 3ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಟೇಲ್ ಪಾತ್ರರಾಗಿದ್ದಾರೆ.

ಆರ್‌ಸಿಬಿ ಪರ ಹ್ಯಾಟ್ರಿಕ್ ವಿಕೆಟ್ ಸಾಧಕರು:

ಪ್ರವೀಣ್ ಕುಮಾರ್ vs ರಾಜಸ್ಥಾನ ರಾಯಲ್ಸ್, ಬೆಂಗಳೂರು 2010
ಸ್ಯಾಮ್ಯುಯೆಲ್ ಬದ್ರಿ vs ಮುಂಬೈ ಇಂಡಿಯನ್ಸ್, ಬೆಂಗಳೂರು 2017
ಹರ್ಷಲ್ ಪಟೇಲ್ vs ಮುಂಬೈ ಇಂಡಿಯನ್ಸ್, ದುಬೈ  2021 *

IPL 2021 ಎಂದೆಂದಿಗೂ ನಮ್ದು ಆರ್‌ಸಿಬಿಗೆ ಸಪೋರ್ಟ್ ಎಂದ ಕಿಚ್ಚ ಸುದೀಪ್..!

ಮುಂಬೈ ಇಂಡಿಯನ್ಸ್ ಗೆಲುವಿಗೆ 166 ರನ್ ಟಾರ್ಗೆಟ್ ಪಡೆದಿತ್ತು. 166 ರನ್ ಮುಂಬೈ ತಂಡಕ್ಕೆ ಬೃಹತ್ ಮೊತ್ತವೇನಲ್ಲ. ಆದರೆ ಮುಂಬೈ ಇಂಡಿಯನ್ಸ್ ಕಳೆದೆರಡು ಪಂದ್ಯದ ಪರ್ದರ್ಶನ ನೋಡಿದರೆ ಇದು ಸವಾಲಿನ ಗುರಿಯಾಗಿತ್ತು. ನಾಯಕ ರೋಹಿತ್ ಶರ್ಮಾ(Rohit Sharma) ಹಾಗೂ ಕ್ವಿಂಟನ್ ಡಿಕಾಕ್(Quinton de Kock) ಉತ್ತಮ ಆರಂಭ, ರಾಯಲ್ ಚಾಲೆಂಜರ್ಸ್ ಲೆಕ್ಕಾಚಾರವನ್ನು ಉಲ್ಟಾ ಮಾಡಿತು.

ಆರಂಭದಲ್ಲೇ ವಿಕೆಟ್ ಕಬಳಿಸುವ ಆರ್‌ಸಿಬಿ ಲೆಕ್ಕಾಚಾರಕ್ಕೆ ಕೊಂಚ ಹಿನ್ನಡೆಯಾಯಿತು. ಕಾರಣ ರೋಹಿತ್ ಹಾಗೂ ಡಿಕಾಕ್ ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟ ನೀಡಿದರು. ಡಿಕಾಕ್ 24 ರನ್ ಸಿಡಿಸಿ ಯಜುವೇಂದ್ರ ಚಹಾಲ್‌ಗೆ(Yuzvendra Chahal) ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಕಬಳಿಸಿದ ಆರ್‌ಸಿಬಿ ತಂಡದ ಜೋಶ್ ಇಮ್ಮಡಿಗೊಂಡಿತು.

IPL 2021 ಚೆಂದಕ್ಕಿಂತ ಚೆಂದ : ಇಲ್ಲಿವೆ ನೋಡಿ ಟಾಪ್‌ 10 CSK ಕ್ರಿಕೆಟಿಗರ ಸುಂದರ ಮಡದಿಯರು..!

ಅಬ್ಬರಿಸಲು ಆರಂಭಿಸಿದ ರೋಹಿತ್ ಶರ್ಮಾ 43 ರನ್ ಸಿಡಿಸಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು. ಇದು ಆರ್‌ಸಿಬಿ ತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ತುಂಬಿತು. ಇದರ ಬೆನ್ನಲ್ಲೇ ಇಶಾನ್ ವಿಕೆಟ್ ಕೂಡ ಪತನಗೊಂಡಿತು. ಕಿಶನ್ 9 ರನ್ ಸಿಡಿಸಿ ಔಟಾದರು. ಸತತ ವೈಫಲ್ಯ ಅನುಭವಿಸುತ್ತಿರುವ ಕ್ರುನಾಲ್ ಪಾಂಡ್ಯ ಕೇವಲ 5 ರನ್ ಸಿಡಿಸಿ ಮತ್ತೆ ನಿರಾಸೆ ಅನುಭವಿಸಿದರು.

RCB ಬೌಲಿಂಗ್ ದಾಳಿಗೆ ಮುಂಬೈ ಇಂಡಿಯನ್ಸ್ ತತ್ತರಿಸಿತು. ಸೂರ್ಯಕುಮಾರ್ ಯಾದವ್ 8 ರನ್ ಸಿಡಿಸಿ ಔಟಾದರು. 97 ರನ್‌ಗೆ ಮುಂಬೈ ಇಂಡಿಯನ್ಸ್ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಮುಂಬೈ ಇಂಡಿಯನ್ಸ್ ಗೆಲುವಿಗೆ ಅಂತಿಮ 30 ಎಸೆತದಲ್ಲಿ 67 ರನ್ ಅವಶ್ಯಕತೆ ಇತ್ತು. ಕೀರನ್ ಪೋಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಮೇಲೆ ಒತ್ತಡ ಹೆಚ್ಚಾಯಿತು.

IPL 2021: ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷರಾಗಿ KBC ಸ್ಪರ್ಧಿಗೆ ಅಚ್ಚರಿ ನೀಡಿದ ರೋಹಿತ್ ಶರ್ಮಾ!

ಪೋಲಾರ್ಡ್ 7, ಹಾರ್ದಿಕ್ ಪಾಂಡ್ಯ ಕೇವಲ 3 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್ ಚಹಾರ್ ಹಾಗೂ ಜಸ್ಪ್ರೀತ್ ಬುಮ್ರಾ ಕೂಡ ಅಬ್ಬರಿಸಲಿಲ್ಲ. ಆ್ಯಡಮ್ ಮಿಲ್ನೆ ವಿಕೆಟ್ ಪತನದ ಮೂಲಕ ಮುಂಬೈ ಇಂಡಿಯನ್ಸ್ 18.1 ಓವರ್‌ಗಳಲ್ಲಿ 111 ರನ್‌ಗೆ ಆಲೌಟ್ ಆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು 54 ರನ್ ಭರ್ಜರಿ ಗೆಲುವು ಕಂಡಿತು. ಆರಂಭಿಕ 2 ಸೋಲಿನ ಬಳಿಕ ಆರ್‌ಸಿಬಿ ಗೆಲುವಿನ ಲಯಕ್ಕೆ ಮರಳಿತು. ಆದರೆ ಮುಂಬೈ ಹ್ಯಾಟ್ರಿಕ್ ಸೋಲು ಕಂಡಿದೆ.  

ಅಂಕಪಟ್ಟಿ:
ಮುಂಬೈ ಇಂಡಿಯನ್ಸ್ ವಿರುದ್ಧದ 54 ರನ್ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆವೃತ್ತಿಯಲ್ಲಿ 6 ನೇ ಗೆಲುವು ದಾಖಲಿಸಿತು. ಇದರೊಂದಿಗೆ 12 ಅಂಕಗಳನ್ನು ಸಂಪಾದಿಸಿತು. ಅಂಕಪಟ್ಟಿಯಲ್ಲಿ ಆರ್‌ಸಿಬಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆರ್‌ಸಿಬಿ 3ನೇ ಸ್ಥಾನದಲ್ಲಿದೆ. ಆದರೆ ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ 7ನೇ ಸ್ಥಾನಕ್ಕೆ ಕುಸಿದಿದೆ. 10 ಪಂದ್ಯದಲ್ಲಿ 4 ಗೆಲುವು ದಾಖಲಿಸಿರುವ ಮುಂಬೈ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ. ಇತ್ತ ಆರ್‌ಸಿಬಿ ಪ್ಲೇ ಆಫ್ ಸುಗಮಗೊಳ್ಳುತ್ತಿದೆ

Follow Us:
Download App:
  • android
  • ios