2 ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್‌ ಇದೀಗ ಮೂರನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಕೆಕೆಆರ್‌ ತಂಡದ ಬಲ ಹಾಗೂ ದೌರ್ಬಲ್ಯದ ವಿಶ್ಲೇಷಣೆ ಇಲ್ಲಿದೆ ನೋಡಿ. 

ಬೆಂಗಳೂರು(ಏ.06): ಕಳೆದ ಆವೃತ್ತಿಯಲ್ಲಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಪ್ಲೇ-ಆಫ್‌ಗೇರುವ ಅವಕಾಶದಿಂದ ವಂಚಿತಗೊಂಡಿದ್ದ ಕೋಲ್ಕತಾ ನೈಟ್‌ರೈಡ​ರ್ಸ್‌, ಈ ವರ್ಷ ಪ್ರಶಸ್ತಿ ರೇಸ್‌ನಲ್ಲಿ ಮುನ್ನುಗ್ಗುವ ಉತ್ಸಾಹದಲ್ಲಿದೆ. ವಿಶ್ವಕಪ್‌ ವಿಜೇತ ನಾಯಕ ಇಯಾನ್‌ ಮೊರ್ಗನ್‌ ತಂಡ ಮುನ್ನಡೆಸಲಿದ್ದ, ಶುಭ್‌ಮನ್‌ ಗಿಲ್‌ ಹಾಗೂ ಆ್ಯಂಡ್ರೆ ರಸೆಲ್‌ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.

ಪ್ರಾಬಲ್ಯ: ಕೆಕೆಆರ್‌ನ ಬಲವೆಂದರೆ ಭಾರತೀಯ ತಾರೆಗಳು. ಪ್ರಮುಖವಾಗಿ ಗಿಲ್‌, ದಿನೇಶ್‌ ಕಾರ್ತಿಕ್‌, ನಿತೀಶ್‌ ರಾಣಾ, ಪ್ರಸಿದ್ಧ್ ಕೃಷ್ಣ, ವರುಣ್‌ ಚಕ್ರವರ್ತಿ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಟಿ20 ಮಾದರಿಯಲ್ಲಿ ಈ ಆಟಗಾರರು ಅನುಭವ ಹೊಂದಿದ್ದಾರೆ. ಇವರೊಂದಿಗೆ ಮಾರ್ಗನ್‌, ರಸೆಲ್‌, ನರೈನ್‌, ಶಕೀಬ್‌, ಕಮಿನ್ಸ್‌, ಫಗ್ರ್ಯೂಸನ್‌, ಸೀಫರ್ಟ್‌, ಬೆನ್‌ ಕಟ್ಟಿಂಗ್‌ರಂತಹ ವಿದೇಶಿ ತಾರೆಯರ ಬಲವೂ ತಂಡಕ್ಕಿದೆ.

IPL 2021 ರಾಯಲ್ಸ್‌ ಲಕ್‌ ಬದಲಿಸ್ತಾರಾ ಮೋರಿಸ್, ಸ್ಟೋಕ್ಸ್?

ದೌರ್ಬಲ್ಯ: ಕಳೆದ ಆವೃತ್ತಿಯಲ್ಲಿ ರಸೆಲ್‌ ಬ್ಯಾಟಿಂಗ್‌ನಲ್ಲಿ ಭಾರೀ ವೈಫಲ್ಯ ಕಂಡಿದ್ದರು. ಹೀಗಾಗಿ ಅವರ ಮೇಲೆ ಒತ್ತಡವಿದೆ. ವಿದೇಶಿ ಆಟಗಾರರ ಆಯ್ಕೆಯಲ್ಲಿ ತಂಡಕ್ಕೆ ಗೊಂದಲ ಎದುರಾಗಲಿದೆ. ಕಮಿನ್ಸ್‌, ಶಕೀಬ್‌, ನರೈನ್‌, ಫಗ್ರ್ಯೂಸನ್‌, ಕಟ್ಟಿಂಗ್‌ ನಡುವೆ ಒಂದು ಸ್ಥಾನಕ್ಕೆ ಪೈಪೋಟಿ ಏರ್ಪಡಬಹುದು. ದಿನೇಶ್‌ ಕಾರ್ತಿಕ್‌ ಸ್ಥಿರತೆ ಕಂಡುಕೊಳ್ಳದಿದ್ದರೆ ತಂಡದ ಸಂಯೋಜನೆಯಲ್ಲಿ ಸಮಸ್ಯೆ ಎದುರಾಗಲಿದೆ.

ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌

ಶುಭ್‌ಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ನಿತೀಶ್‌ ರಾಣಾ, ದಿನೇಶ್‌ ಕಾರ್ತಿಕ್‌, ಇಯಾನ್‌ ಮೊರ್ಗನ್‌, ಆ್ಯಂಡ್ರೆ ರಸೆಲ್‌, ಶಕೀಬ್‌ ಅಲ್‌ ಹಸನ್‌, ಪ್ಯಾಟ್‌ ಕಮಿನ್ಸ್‌, ಪ್ರಸಿದ್ಧ್ ಕೃಷ್ಣ, ವರುಣ್‌ ಚಕ್ರವರ್ತಿ, ಹರ್ಭಜನ್‌/ಶಿವಂ ಮಾವಿ.