* ಹೋಟೆಲ್‌ ಕ್ವಾರಂಟೈನ್‌ ಮುಗಿಸಿ ಮನೆ ಸೇರಿಕೊಂಡ ಆಸ್ಟ್ರೇಲಿಯಾ ಕ್ರಿಕೆಟಿಗರು* 14ನೇ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದ 38 ಆಸೀಸ್‌ ಮಂದಿ* ಮಾಲ್ಡೀವ್ಸ್‌ನಿಂದ ಸಿಡ್ನಿಗೆ ಬಂದಿಳಿದು ಕ್ವಾರಂಟೈನ್‌ಗೆ ಒಳಗಾಗಿದ್ದ ಆಸೀಸ್‌ ಆಟಗಾರರು ಹಾಗೂ ಸಿಬ್ಬಂದಿ 

ಮೆಲ್ಬರ್ನ್‌(ಮೇ.31): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬರೋಬ್ಬರಿ 2 ತಿಂಗಳುಗಳ ಕಾಲ ತಮ್ಮ ಕುಟುಂಬದವರಿಂದ ದೂರವೇ ಉಳಿದಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರು, ಕೋಚ್‌, ಸಹಾಯಕ ಸಿಬ್ಬಂದಿಗಳು ಹಾಗೂ ವೀಕ್ಷಕ ವಿವರಣೆಗಾರರು ಸಿಡ್ನಿಯಲ್ಲಿ ಕಡ್ಡಾಯ ಕ್ವಾರಂಟೈನ್ ಮುಗಿಸಿ ಇಂದು(ಮೇ.31) ತಮ್ಮ ತಮ್ಮ ಮನೆಗಳಿಗೆ ವಾಪಾಸ್ಸಾಗಿದ್ದಾರೆ.

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಬಯೋ ಬಬಲ್‌ನೊಳಗೆ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ 19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬಿಸಿಸಿಐ, ಮಿಲಿಯನ್‌ ಡಾಲರ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಇನ್ನು ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧವನ್ನು ಹೇರಿತ್ತು. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್‌, ರಿಕಿ ಪಾಂಟಿಂಗ್, ಮೈಕಲ್ ಸ್ಲೇಟರ್, ಗ್ಲೆನ್‌ ಮ್ಯಾಕ್ಸ್‌ವೆಲ್ ಸೇರಿದಂತೆ 38 ಮಂದಿ ಮಾಲ್ಡೀವ್ಸ್‌ಗೆ ತೆರಳಿ, ಅಲ್ಲಿ ಮತ್ತೆ 2 ವಾರಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು.

ಐಪಿಎಲ್ 2021: 'ಆಸ್ಟ್ರೇಲಿಯಾ ಆಟಗಾರರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ'

ಇನ್ನು ಕೋಲ್ಕತ ನೈಟ್‌ ರೈಡರ್ಸ್‌ ವೇಗಿ ಪ್ಯಾಟ್‌ ಕಮಿನ್ಸ್‌ ಪತ್ನಿ ಬೆಕೆ ಪ್ರಗ್ನೆಂಟ್ ಆಗಿದ್ದು, ಕ್ವಾರಂಟೈನ್‌ ಮುಗಿಸಿ ಮನೆಗೆ ಬಂದ ಪತಿ ಕಮಿನ್ಸ್‌ ಅವರನ್ನು ಬಿಗಿದಪ್ಪಿ, ಚುಂಬಿಸಿ ಮನೆಗೆ ಸ್ವಾಗತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

IPL 2021: ಮದುವೆಗೂ ಮುನ್ನ ತಂದೆಯಾಗುತ್ತಿದ್ದಾರೆ ಕೆಕೆಆರ್‌ನ ಈ ಸ್ಟಾರ್ ಕ್ರಿಕೆಟಿಗ..!

Scroll to load tweet…
Scroll to load tweet…
Scroll to load tweet…

ಅದೇ ರೀತಿ ಬಿಡುವಿದ್ದಾಗೆಲ್ಲಾ ಕುಟಂಬದ ಜತೆ ಹೆಚ್ಚು ಕಾಲ ಕಳೆಯುವ ಆಸೀಸ್‌ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್ ತಮ್ಮ ಕುಟುಂಬ ಸೇರಿಕೊಂಡಿರುವ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ 

Scroll to load tweet…