IPL 2021: ಮದುವೆಗೂ ಮುನ್ನ ತಂದೆಯಾಗುತ್ತಿದ್ದಾರೆ ಕೆಕೆಆರ್‌ನ ಈ ಸ್ಟಾರ್ ಕ್ರಿಕೆಟಿಗ..!
ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡದ ಮಾರಕ ವೇಗಿ ಪ್ಯಾಪ್ ಕಮಿನ್ಸ್ ಸದ್ಯದಲ್ಲಿಯೇ ತಂದೆಯಾಗಲಿದ್ದಾರೆ. ಕಮಿನ್ಸ್ ಭಾವಿ ಪತ್ನಿ ಬೆಕೆ ಬೋಸ್ಟನ್ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾನುವಾರವಷ್ಟೇ(ಮೇ.09) ಕಮಿನ್ಸ್ ಹಾಗೂ ಭಾವಿ ಪತ್ನಿ ಬೆಕೆ ಬೋಸ್ಟನ್‌ಗೆ ಕೋಲ್ಕತ ನೈಟ್ ರೈಡರ್ಸ್ ಫ್ರಾಂಚೈಸಿ ಟ್ವೀಟ್ ಮೂಲಕ ಶುಭಕೋರಿತ್ತು. ಕೆಲವು ದಿನಗಳ ಹಿಂದಷ್ಟೇ ಬೆಕೆ ಬೋಸ್ಟನ್ ಕಡಲ ಕಿನಾರೆಯಲ್ಲಿ ತಮ್ಮ ಬೇಬಿ ಬಂಪ್ಸ್‌ನೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಕಮಿನ್ಸ್ ಹಾಗೂ ಬೆಕೆ ಬೋಸ್ಟನ್ ಕುರಿತಾದ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ ನೋಡಿ.
ಕೆಕೆಆರ್ ತಂಡದಿಂದ ಶುಭಹಾರೈಕೆ:
ವಿಶ್ವ ತಾಯಂದಿರ ದಿನ(ಮೇ.09)ದಂದೇ ಕೋಲ್ಕತ ನೈಟ್ ರೈಡರ್ಸ್ ಫ್ರಾಂಚೈಸಿ ಅಡ್ವಾನ್ಸ್ ಆಗಿ ಕಮಿನ್ಸ್ ಭಾವಿ ಪತ್ನಿಗೆ ಟ್ವೀಟ್ ಮೂಲಕ ಶುಭಾಶಯ ಕೋರಿದೆ. ತಾಯಂದಿರ ದಿನದಂದೇ ಎಂತಹ ಸಂತೋಷದ ಸುದ್ದಿಯಿದು ಎಂದು ಕೆಕೆಆರ್ ಟ್ವೀಟ್ ಮಾಡಿದೆ.
2014ರಿಂದಲೂ ಜತೆಯಾಟಗಿದ್ದಾರೆ ಕಮಿನ್ಸ್-ಬೆಕೆ:
ಆಸ್ಟ್ರೇಲಿಯಾ ಸ್ಟಾರ್ ವೇಗಿ ಕಮಿನ್ಸ್ ಗೆಳತಿ ಬೆಕೆ ಬೋಸ್ಟನ್ ಇಂಗ್ಲೆಂಡ್ ದೇಶದವರು. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಸಾಂಪ್ರಾದಾಯಿಕ ಎದುರಾಳಿಗಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಪ್ರೀತಿಗೆ ಜಾತಿ, ಧರ್ಮ, ಗಡಿಯ ಹಂಗಿಲ್ಲ ಎನ್ನುವಂತೆ ಈ ಜೋಡಿ ಒಂದಾಗಿದೆ. 2014ರಲ್ಲಿ ಬೆಕೆ ಬೋಸ್ಟನ್ ವೇಗಿ ಕಮಿನ್ಸ್ ಜತೆಗಿರುವ ಫೋಟೋವನ್ನು ಮೊಟ್ಟಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ತಮ್ಮ ಗೆಳೆತನವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.
6 ವರ್ಷಗಳ ಬಳಿಕ ಎಂಗೇಜ್‌ಮೆಂಟ್ ಮಾಡಿಕೊಂಡ ಕ್ಯೂಟ್ ಕಪಲ್
ಬರೋಬ್ಬರಿ 6 ವರ್ಷಗಳ ಕಾಲ ಡೇಟಿಂಗ್ ನಡೆಸಿದ ಬಳಿಕ ಪ್ಯಾಟ್ ಕಮಿನ್ಸ್ 2020ರ ಫೆಬ್ರವರಿಯಲ್ಲಿ ಮದುವೆಯಾಗಲು ಬೆಕೆ ಬೋಸ್ಟನ್ ಅವರಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಬಳಿಕ ಫೆಬ್ರವರಿ ತಿಂಗಳಿನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ, ಆದರೆ ಇಲ್ಲಿಯ ತನಕ ಮದುವೆಯಾಗಿಲ್ಲ. ಇದೀಗ ಮದುವೆಗೂ ಮುನ್ನ ಕಮಿನ್ಸ್ ತಂದೆಯಾಗುತ್ತಿದ್ದಾರೆ.
ಸಖತ್ ಸ್ಟೈಲೀಷ್ ಆಗಿದ್ದಾರೆ ಕಮಿನ್ಸ್ ಭಾವಿ ಪತ್ನಿ
ಪ್ಯಾಟ್ ಕಮಿನ್ಸ್ ಭಾವಿ ಪತ್ನಿ ಬೆಕೆ ಬೋಸ್ಟನ್ ಸಖತ್ ಸ್ಟೈಲೀಷ್ ಆಗಿದ್ದಾರೆ. ಬೆಕೆ ಒಂದು ಶಾಪಿಂಗ್ ವೆಬ್‌ಸೈಟ್ ನಡೆಸುತ್ತಿದ್ದಾರೆ. ಈ ವೆಬ್‌ಸೈಟ್‌ನಲ್ಲಿ ಮಕ್ಕಳ ಬಟ್ಟೆ, ಬೆಡ್‌ಶೀಟ್‌ನಂತಹ ವಸ್ತುಗಳು ಸಿಗುತ್ತವೆ.
ಸೋಷಿಯಲ್ ಮೀಡಿಯಾ ಸ್ಟಾರ್ ಕಮಿನ್ಸ್ ಹಾಗೂ ಬೆಕೆ
ಪ್ಯಾಟ್ ಕಮಿನ್ಸ್‌ಗೆ ಸಮಯ ಸಿಕ್ಕಾಗಲೆಲ್ಲಾ ತಮ್ಮ ಕುಟುಂಬ ಹಾಗೂ ಭಾವಿ ಪತ್ನಿ ಬೆಕೆ ಬೋಸ್ಟನ್ ಜತೆ ಸಮಯ ಕಳೆಯುತ್ತಾರೆ. ಬೆಕೆ ಜತೆಗಿನ ಸಂತೋಷದಾಯಕ ಫೋಟೋಗಳನ್ನು ಕಮಿನ್ಸ್ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.
ಸದ್ಯ ಮಾಲ್ಡೀವ್ಸ್‌ನಲ್ಲಿದ್ದಾರೆ ಕಮಿನ್ಸ್:
ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೋವಿಡ್ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಇತರೆ ಆಟಗಾರರೊಂದಿಗೆ ಕಮಿನ್ಸ್ ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಮೇ.15ರವರೆಗೂ ಮಾಲ್ಡೀವ್ಸ್‌ನಲ್ಲೇ ಕ್ವಾರಂಟೈನ್‌ನಲ್ಲಿದ್ದು, ಇದಾದ ಬಳಿಕ ಆಸ್ಟ್ರೇಲಿಯಾಗೆ ವಿಮಾನವೇರಲಿದ್ದಾರೆ.
ಭಾರತದ ಕೋವಿಡ್ ಸಂಕಷ್ಟಕ್ಕೆ ನೆರವಾಗಿದ್ದ ಪ್ಯಾಟ್ ಕಮಿನ್ಸ್:
ಸದ್ಯ ಭಾರತ ಕೋವಿಡ್ ಎರಡನೇ ಅಲೆಯ ವಿರುದ್ದ ಹೋರಾಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ದೇಣಿಗೆ ನೀಡಲು ಮುಂದೆ ಬಂದ ಮೊದಲ ಕ್ರಿಕೆಟಿಗನೆಂದರೆ ಅದು ಪ್ಯಾಟ್ ಕಮಿನ್ಸ್. ಆಕ್ಸಿಜನ್ ಸಿಲೆಂಡರ್ ಖರೀದಿಸಲು ಭಾರತಕ್ಕೆ ಪ್ಯಾಟ್ ಕಮಿನ್ಸ್ ಸುಮಾರು 38 ಲಕ್ಷ ರುಪಾಯಿ ದೇಣಿಗೆ ನೀಡುವ ಇತರ ಆಟಗಾರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.