ಮುಂಬೈ(ಏ.15): ಸುಲಭ ಟಾರ್ಗೆಟ್ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತು. 148 ರನ್ ಡೇವಿಡ್ ಮಿಲ್ಲರ್ ಹಾಗೂ ಕ್ರಿಸ್ ಮೊರಿಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಂತಿಮ ಓವರ್‌ನ 4 ಎಸೆತದ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನ ದಡ ಸೇರಿತು.  ಈ ಮೂಲಕ ರಾಜಸ್ಥಾನ ರಾಯಲ್ಸ್ ಮೊದಲ ಗೆಲುವು ಕಂಡಿದೆ. ಇತ್ತ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಡೆಲ್ಲಿ ಸೋಲು ಕಂಡಿದೆ.

ಒಂದೇ ಓವರ್‌ನಲ್ಲಿ 3 ವಿಕೆಟ್‌: ಯಶಸ್ಸಿನ ಸೀಕ್ರೇಟ್‌ ಬಿಚ್ಚಿಟ್ಟ ಶಹಬಾಜ್‌ ಅಹಮದ್

ಗೆಲುವಿಗೆ 148 ರನ್ ಟಾರ್ಗೆಟ್ ಪಡೆದ ರಾಜಸ್ಥಾ ರಾಯಲ್ಸ್ ಕೂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. 148 ರನ್ ಸಂಜು ಸ್ಯಾಮ್ಸನ್ ಪಡೆಗೆ  ಸವಾಲಿನ ಮೊತ್ತ ಆಗಿರಲಿಲ್ಲ. ಆದರೆ ಜೋಸ್ ಬಟ್ಲರ್ ಹಾಗೂ ಮನನ್ ವೊಹ್ರಾ ಅಬ್ಬರಿಸಲಿಲ್ಲ. ಕಳೆದ ಪಂದ್ಯದಲ್ಲಿ ಸೆಂಚುರಿ ದಾಖಲಿಸಿದ ನಾಯಕ ಸಂಜು ಸ್ಯಾಮ್ಸನ್ ಈ ಬಾರಿ 4 ರನ್ ಸಿಡಿಸಿ ನಿರಾಸೆ ಅನುಭವಿಸಿದರು.

ಸ್ಯಾಮ್ಸನ್ ವಿಕೆಟ್ ಪತನ ರಾಜಸ್ಥಾನ ರಾಯಲ್ಸ್ ತಂಡಕ್ಕೆ ತೀವ್ರ ಹಿನ್ನಡೆ ತಂದಿತು. ಆದರೆ ಡೇವಿಡ್ ಮಿಲ್ಲರ್ ಹೋರಾಟ ರಾಜಸ್ಥಾನ ರಾಯಲ್ಸ್ ತಂಡದ ಗೆಲವಿನ ಆಸೆಯನ್ನು ಜೀವಂತವಾಗಿರಿಸಿತು. ಮಿಲ್ಲರ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ರಿಯಾನ್ ಪರಾಗ್ 2 ರನ್ ಸಿಡಿಸಿ ಔಟಾದರು.

ಇತ್ತ ಮಿಲ್ಲರ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಆದರೆ ರಾಹುಲ್ ಟಿವಾಟಿಯಾ 19 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಏಕಾಂಗಿ ಹೋರಾಟ ನೀಡಿದ ಡೇವಿಡ್ ಮಿಲ್ಲರ್ 62 ರನ್ ಸಿಡಿಸಿ ಔಟಾದರು. ಮಿಲ್ಲರ್ ವಿಕೆಟ್ ಪತನದ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ತಂಡದ ಆತಂಕ ಹೆಚ್ಚಾಯಿತು. ಗೆಲುವಿನ ಹಾದಿ ಮತ್ತಷ್ಟು ಕಠಿಣಗೊಂಡಿತು.

ರಾಜಸ್ಥಾನ ಗೆಲುವಿಗೆ ಅಂತಿಮ 12 ಎಸೆತದಲ್ಲಿ 27 ರನ್ ಅವಶ್ಯಕತೆ ಇತ್ತು. ಕ್ರಿಸ್ ಮೊರಿಸ್ ಹಾಗೂ ಜಯದೇವ್ ಉನಾದ್ಕಟ್ ಹೋರಾಟ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿಸಿತು. ಇತ್ತ ಡೆಲ್ಲಿ ತಂಡದ ಮೇಲೆ ಒತ್ತಡ ಹೆಚ್ಚಾಯಿತು.  ಮೊರಿಸ್ ಅಬ್ಬರಕ್ಕೆ ಡೆಲ್ಲಿ ಗೆಲುವಿಗೆ  ಅಂತಿಮ 4 ಎಸೆತದಲ್ಲಿ 4 ರನ್ ಬೇಕಿತ್ತು. ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಮೊರಿಸ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ರೋಚಕ 3 ವಿಕೆಟ್ ಗೆಲುವು ತಂದುಕೊಟ್ಟರು.

ಕ್ರಿಸ್ ಮೊರಿಸ್ 18 ಎಸೆತದಲ್ಲಿ 4 ಸಿಕ್ಸರ್ ನೆರವಿನಿಂದ ಅಜೇಯ 36 ರನ್ ಸಿಡಿಸಿದರು. ಇತ್ತ ಜಯದೇವ್ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ ಭರ್ಜರಿ ಕಮ್‌ಬ್ಯಾಕ್ ಮಾಡಿತು.