ಮುಂಬೈ(ಏ.06): ವೈಯಕ್ತಿಕ ಕಾರಣ ನೀಡಿ ಈ ವರ್ಷದ ಐಪಿಎಲ್‌ನಿಂದ ಹಿಂದೆ ಸರಿದ ಆಸ್ಪ್ರೇಲಿಯಾದ ವೇಗದ ಬೌಲರ್‌ ಜೋಸ್ ಹೇಜಲ್‌ವುಡ್‌ ಬದಲಿಗೆ ಬೇರೆ ಬೌಲರ್‌ ಸೇರ್ಪಡೆಗೊಳಿಸಿಕೊಳ್ಳಲು ಚೆನ್ನೈ ಸೂಪರ್‌ ಕಿಂಗ್ಸ್‌ ಪರದಾಡುತ್ತಿದೆ. 

ಕೋವಿಡ್‌ ಭೀತಿಯಿಂದ ಮುಂಬೈನಲ್ಲಿ ಆಡಲು ವಿದೇಶಿ ವೇಗಿಗಳು ಹಿಂದೇಟು ಹಾಕುತ್ತಿದ್ದಾರೆ. ಧೋನಿ ನೇತೃತ್ವದ ತಂಡ ತನ್ನ ಮೊದಲ 5 ಪಂದ್ಯಗಳನ್ನು ಮುಂಬೈನಲ್ಲಿ ಆಡಲಿದೆ. ಚೆನ್ನೈ ತಂಡದ ಪ್ರಸ್ತಾಪವನ್ನು ಆಸ್ಪ್ರೇಲಿಯಾದ ವೇಗಿ ಬಿಲ್ಲಿ ಸ್ಟ್ಯಾನ್‌ಲೇಕ್‌, ಇಂಗ್ಲೆಂಡ್‌ ವೇಗಿ ರೀಸ್‌ ಟಾಪ್ಲೆ ಸೇರಿ ಇನ್ನೂ ಕೆಲ ವಿದೇಶಿ ಬೌಲರ್‌ಗಳು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಸದ್ಯಕ್ಕೆ ಬದಲಿ ಆಟಗಾರನ ಹುಡುಕಾಟವನ್ನು ನಿಲ್ಲಿಸಲು ತಂಡ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

IPL 2021: ಸಿಎಸ್‌ಕೆ ತಂಡಕ್ಕೆ ಆಘಾತ, ಕೊನೇ ಕ್ಷಣದಲ್ಲಿ ಧೋನಿ ಟೀಂ ತೊರೆದ ಸ್ಟಾರ್ ವೇಗಿ..!

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಏಪ್ರಿಲ್ 09ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಡಲಿವೆ. ಇನ್ನು ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಏಪ್ರಿಲ್‌ 10ರಂದು ಡೆಲ್ಲಿ ಕ್ಯಾಪಿಟಲ್‌ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.