ಐಪಿಎಲ್ 2021: ಪ್ರತಿ ತಂಡದ ಪ್ಲೇ-ಆಫ್ ಲೆಕ್ಕಾಚಾರ ಹೇಗೆ?
ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಯುಎಇ ಚರಣದ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಭಾಗ 2 ಆರಂಭವಾಗಲಿದ್ದು, ಎಲ್ಲಾ ತಂಡಗಳು ಪ್ಲೇ ಆಫ್‌ಗೇರಲು ಸಕಲ ರಣತಂತ್ರಗಳನ್ನು ರೂಪಿಸಿದೆ. ಸದ್ಯ ಯಾವ ತಂಡಗಳು ಎಷ್ಟು ಪಂದ್ಯಗಳನ್ನು ಜಯಿಸಿದರೆ ಫ್ಲೇ ಆಫ್‌ಗೇರಲಿದೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಡೆಲ್ಲಿ ಕ್ಯಾಪಿಟಲ್ಸ್- ಪಂದ್ಯ ಬಾಕಿ: 06, ಬೇಕಿರುವ ಗೆಲುವು: 02
8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಾಕಿಯಿರುವ 6 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ ಸಾಕು ಪ್ಲೇ-ಆಫ್‌ಗೆ ಪ್ರವೇಶ ಸಿಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್- ಪಂದ್ಯ ಬಾಕಿ: 07, ಬೇಕಿರುವ ಗೆಲುವು: 03
2020ರಲ್ಲಿ ಕಳಪೆ ಆಟವಾಡಿದ್ದ ಚೆನ್ನೈ, ಈ ವರ್ಷ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ನೇ ಸ್ಥಾನದಲ್ಲಿದೆ. 7 ಪಂದ್ಯ ಬಾಕಿ ಇದ್ದು, ಕನಿಷ್ಠ 3ರಲ್ಲಿ ಗೆದ್ದರೆ ದಾಖಲೆಯ 11ನೇ ಬಾರಿಗೆ ಪ್ಲೇ-ಆಫ್‌ಗೇರಲಿದೆ.
ಆರ್‌ಸಿಬಿ- ಪಂದ್ಯ ಬಾಕಿ: 7, ಬೇಕಿರುವ ಗೆಲುವು: 03
ಸತತ 4 ಗೆಲುವುಗಳೊಂದಿಗೆ ಟೂರ್ನಿ ಆರಂಭಿಸಿದ ಕೊಹ್ಲಿ ಪಡೆ, 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 3ನೇ ಸ್ಥಾನದಲ್ಲಿದೆ. ಬಾಕಿ ಇರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಸಿಗಲಿದೆ.
ಮುಂಬೈ ಇಂಡಿಯನ್ಸ್- ಪಂದ್ಯ ಬಾಕಿ: 07, ಬೇಕಿರುವ ಗೆಲುವು: 04
ಆರಂಭದಲ್ಲಿ ಎಡವಿದರೂ ಪುಟಿದೆದ್ದ ಹಾಲಿ ಚಾಂಪಿಯನ್ ಮುಂಬೈ, 7 ಪಂದ್ಯಗಳಲ್ಲಿ 4 ಗೆಲುವು ಕಂಡು 4ನೇ ಸ್ಥಾನದಲ್ಲಿದೆ. ಉಳಿದಿರುವ 7 ಪಂದ್ಯಗಳಲ್ಲಿ 4 ಗೆಲುವು ಸಾಧಿಸಬೇಕಿದೆ.
ರಾಜಸ್ಥಾನ ರಾಯಲ್ಸ್ - ಪಂದ್ಯ ಬಾಕಿ: 07, ಬೇಕಿರುವ ಗೆಲುವು: 04
ಸಂಜು ಸ್ಯಾಮ್ಸನ್ ಪಡೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡ ಕೆಲ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಬಾಕಿ ಇರುವ 7 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಲೇ ಬೇಕಿದೆ.
ಪಂಜಾಬ್ ಕಿಂಗ್ಸ್- ಪಂದ್ಯ ಬಾಕಿ: 06, ಬೇಕಿರುವ ಗೆಲುವು: 05
ರಾಹುಲ್ ನೇತೃತ್ವದ ಪಂಜಾಬ್ ಅತ್ಯುತ್ತಮ ತಂಡ ಹೊಂದಿದ್ದರೂ ಉತ್ತಮ ಆಟವಾಡುವಲ್ಲಿ ಎಡವಿದೆ. 8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಬಾಕಿ ಇರುವ 6ರಲ್ಲಿ 5 ಪಂದ್ಯ ಗೆಲ್ಲಬೇಕಿದೆ.
ಕೋಲ್ಕತಾ ನೈಟ್ರೈಡರ್ಸ್- ಪಂದ್ಯ ಬಾಕಿ: 07, ಬೇಕಿರುವ ಗೆಲುವು: 05
ಕೆಕೆಆರ್ ತಂಡದ ಪ್ಲೇ-ಆಫ್ ಹಾದಿಯೂ ಬಹಳ ಕಠಿಣವಾಗಿದೆ. ತಂಡ 7ನೇ ಸ್ಥಾನದಲ್ಲಿದ್ದು, ಬಾಕಿ ಇರುವ 7 ಪಂದ್ಯಗಳಲ್ಲಿ ಕನಿಷ್ಠ 5ರಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಸನ್ರೈಸರ್ಸ್ ಹೈದರಾಬಾದ್- ಪಂದ್ಯ ಬಾಕಿ: 07, ಬೇಕಿರುವ ಗೆಲುವು: 06
7 ಪಂದ್ಯಗಳಲ್ಲಿ ಕೇವಲ 1 ಗೆಲುವು ಕಂಡಿರುವ ಸನ್ರೈಸರ್ಸ್ ಕೊನೆ ಸ್ಥಾನದಲ್ಲಿದೆ. ವಿಲಿಯಮ್ಸನ್‌ರ ತಂಡ ಪ್ಲೇ-ಆಫ್‌ಗೇರಬೇಕಿದ್ದರೆ ಬಾಕಿ ಇರುವ 7 ಪಂದ್ಯಗಳಲ್ಲಿ 6ರಲ್ಲಿ ಗೆಲ್ಲಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.