Asianet Suvarna News Asianet Suvarna News

ಮಾಲ್ಡೀವ್ಸ್‌ ರೆಸಾರ್ಟ್‌ನಲ್ಲಿ ವಾರ್ನರ್‌-ಸ್ಲೇಟರ್‌ ಫೈಟ್‌?

* ಕೋವಿಡ್‌ ಕಾರಣದಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

* ಮಾಲ್ಡೀವ್ಸ್‌ನಿಂದ ಆಸ್ಟ್ರೇಲಿಯಾ ವಿಮಾನ ವೇರಲು ಸಜ್ಜಾಗಿರುವ ಕಾಂಗರೂ ನಾಡಿನ ಆಟಗಾರರರು ಹಾಗೂ ಸಿಬ್ಬಂದಿ

* ಆಸೀಸ್‌ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್ ಹಾಗೂ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌ ನಡುವೆ ಫೈಟ್‌ ನಡೆದಿದೆ ಎನ್ನುವ ಆರೋಪ

IPL 2021 Australian Cricketer David Warner Michael Slater Deny Reports Of Fight In Maldives Bar kvn
Author
Malé, First Published May 10, 2021, 7:49 AM IST

ಮಾಲೆ(ಮೇ.10): ಆಸ್ಪ್ರೇಲಿಯಾದ ತಾರಾ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಹಾಗೂ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಮೈಕಲ್‌ ಸ್ಲೇಟರ್‌ ಇಲ್ಲಿನ ರೆಸಾರ್ಟ್‌ನ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿ ಹೊಡೆದಾಡಿರುವುದಾಗಿ ಆಸ್ಪ್ರೇಲಿಯನ್‌ ಮಾಧ್ಯಮವೊಂದು ಸುದ್ದಿ ಮಾಡಿದೆ. ಆದರೆ ಈ ಸುದ್ದಿಯನ್ನು ಇಬ್ಬರೂ ಕ್ರಿಕೆಟಿಗರು ಅಲ್ಲಗಳೆದಿದ್ದಾರೆ.

ಡೇವಿಡ್‌ ವಾರ್ನರ್ ಹಾಗೂ ನಾನು ಉತ್ತಮ ಸ್ನೇಹಿತರು. ನಾವಿಬ್ಬರು ಗಲಾಟೆ ಮಾಡುವ ಪ್ರಶ್ನೆಯೇ ಇಲ್ಲ. ಇದೊಂದು ರೀತಿಯ ಆಧಾರ ರಹಿತ ಗಾಳಿಸುದ್ದಿಯಷ್ಟೇ ಎಂದು ಮಿಲ್ ಬಜ್‌ ಪತ್ರಿಕೆಗೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸ್ಲೇಟರ್ ಸ್ಪಷ್ಟಪಡಿಸಿದ್ದಾರೆ. 

ಇನ್ನು ಡೇವಿಡ್ ವಾರ್ನರ್ ಕೂಡಾ ಇದೇ ಮಾತನ್ನು ಪುನರುಚ್ಚರಿಸಿದ್ದು, ಇವೆಲ್ಲಾ ಗಾಳಿಸುದ್ದಿಗಳು ಎಲ್ಲಿಂದ ಶುರುವಾಗುತ್ತದೆಯೋ ಗೊತ್ತಿಲ್ಲ. ನೀವು ಅಲ್ಲಿರದೇ ಅಥವಾ ಸೂಕ್ತ ಸಾಕ್ಷಿಯಿಲ್ಲದೇ ಏನೇನನ್ನೋ ಬರೆಯಬಾರದು. ಅಂತಹದ್ದೇನು ಘಟನೆ ನಡೆದಿಲ್ಲ ಎಂದು ಸನ್‌ರೈಸರ್ಸ್‌ ಹೈದರಾಬಾದ್ ಮಾಜಿ ನಾಯಕ ವಾರ್ನರ್ ತಿಳಿಸಿದ್ದಾರೆ.

ಇನ್ನುಳಿದ ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ನೀಡಲು ಒಲವು ತೋರಿದ ಶ್ರೀಲಂಕಾ

ಐಪಿಎಲ್‌ ಮುಂದೂಡಿಕೆಯಾದ ಕಾರಣ, ಆಸ್ಪ್ರೇಲಿಯಾದ ಆಟಗಾರರು, ಕೋಚ್‌ಗಳು, ವೀಕ್ಷಕ ವಿವರಣೆಗಾರರು ಸೇರಿ ಒಟ್ಟು 39 ಮಂದಿ ಮಾಲ್ಡೀವ್ಸ್‌ಗೆ ತೆರಳಿ, ಅಲ್ಲಿಂದ ಆಸ್ಪ್ರೇಲಿಯಾಗೆ ಪ್ರಯಾಣಿಸಲು ಕಾಯುತ್ತಿದ್ದಾರೆ.
 

Follow Us:
Download App:
  • android
  • ios