Asianet Suvarna News Asianet Suvarna News

ಮನೆ ಸೇರಿದ ಐಪಿಎಲ್‌ನ ಎಲ್ಲಾ ತಂಡಗಳ ಆಟಗಾರರು

* 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಆಟಗಾರರು ಮನೆ ಸೇರಿದ್ದಾರೆ.

* ಕೋವಿಡ್ ಕಾರಣದಿಂದ ಅನಿರ್ದಿಷ್ಟಾವಧಿವರೆಗೆ ಐಪಿಎಲ್ ಟೂರ್ನಿ ಮುಂದೂಡಿಕೆ

* ಎಲ್ಲಾ 8 ಐಪಿಎಲ್‌ ತಂಡಗಳ  ಆಟಗಾರರು ಸುರಕ್ಷಿತವಾಗಿ ಮನೆಗೆ

IPL 2021 All Cricket Team Members reach Home Safely kvn
Author
New Delhi, First Published May 10, 2021, 9:15 AM IST

ನವದೆಹಲಿ(ಮೇ.10): ಕೋವಿಡ್‌ನಿಂದಾಗಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಎಲ್ಲಾ 8 ತಂಡಗಳ ಬಹುತೇಕ ಆಟಗಾರರು ಸುರಕ್ಷಿತವಾಗಿ ಮನೆ ತಲುಪಿದ್ದಾರೆ. 

ತಮ್ಮ ತಮ್ಮ ಆಟಗಾರರ ವಿವರಗಳನ್ನು ತಂಡಗಳು ಸಾಮಾಜಿಕ ತಾಣಗಳಲ್ಲಿ ಬಹಿರಂಗಪಡಿಸಿವೆ. ಬಹುತೇಕ ಎಲ್ಲಾ ತಂಡಗಳ ವಿದೇಶಿ ಆಟಗಾರರು ಸಹ ತಮ್ಮ ತಮ್ಮ ದೇಶಗಳಿಗೆ ತಲುಪಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಸೋಂಕಿಗೆ ತುತ್ತಾಗಿರುವ ಆಟಗಾರರಿಗೆ ಚಿಕಿತ್ಸೆ ಮುಂದುವರಿದಿದೆ.

ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿ ತಮ್ಮೆಲ್ಲ ಆಟಗಾರರು ಸುರಕ್ಷಿತವಾಗಿ ಮನೆ ಸೇರಿದ್ದಾರೆ ಎಂದು ಟ್ವೀಟ್‌ ಮೂಲಕ ಖಚಿತ ಪಡಿಸಿದೆ. ಅದೇ ರೀತಿ ನ್ಯೂಜಿಲೆಂಡ್‌ ಮೂಲದ ಎಲ್ಲಾ ಆಟಗಾರರು ಸಹಾ ಕಿವೀಸ್‌ಗೆ ಕಾಲಿಟ್ಟಿದ್ದಾರೆ. ಅದರೆ ಕೋವಿಡ್‌ ಸೋಂಕು ದೃಢಪಟ್ಟ ಬೆನ್ನಲ್ಲೇ ಕೆಕೆಆರ್ ತಂಡದ ಟಿಮ್ ಸೈಫರ್ಟ್‌ ಇನ್ನೂ ನ್ಯೂಜಿಲೆಂಡ್ ವಿಮಾನ ಹತ್ತಿಲ್ಲ.

ಐಪಿಎಲ್ ಭಾಗ 2 ಭಾರತದಲ್ಲಿ ಡೌಟ್‌: ಸೌರವ್‌ ಗಂಗೂಲಿ

ಬಯೋ ಬಬಲ್‌ನೊಳಗೆ ಕೋವಿಡ್ 19 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಮೇ 04ರಂದು ಬಿಸಿಸಿಐ ಅನಿರ್ದಿಷ್ಟಾವಧಿಗೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದೂಡಿದೆ. ಮೇ 03ರಂದು ಬಯೋ ಬಬಲ್‌ನೊಳಗಿದ್ದ ಕೆಕೆಆರ್‌ ತಂಡದ ಸಂದೀಪ್ ವಾರಿಯರ್ ಹಾಗೂ ವರುಣ್‌ ಚಕ್ರವರ್ತಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಮೇ 04ರಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೃದ್ದಿಮಾನ್‌ ಸಾಹಗೆ ಕೋವಿಡ್ ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ತಡ ಮಾಡದೇ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
 

Follow Us:
Download App:
  • android
  • ios