ದೆಹಲಿ(ಡಿ.30): ಐಪಿಎಲ್ ಹರಾಜು ಮುಗಿದ ಬಳಿಕ ಇದೀಗ ಅಭಿಮಾನಿಗಳು ಟೂರ್ನಿ ಆರಂಭಕ್ಕಾಗಿ ಕಾಯುತ್ತಿದ್ದಾರೆ. ಇದೀಗ 2020ರ ಐಪಿಎಲ್ ಟೂರ್ನಿ ಮಾರ್ಚ್ 29ರಂದು ಆರಂಭವಾಗಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಕಣಕ್ಕಿಳಿಯಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೇಳಿದೆ. 

ಇದನ್ನೂ ಓದಿ: ಈ ಐವರು RCB ತಂಡದಲ್ಲಿದ್ದರು ಎಂದರೆ ನೀವು ನಂಬಲೇಬೇಕು..!

ಡೆಲ್ಲಿ ಕ್ಯಾಪಿಟಲ್ಸ್ ಪ್ರಕಾರ, ಮಾರ್ಚ್ 29ಕ್ಕೆ 2020ರ ಐಪಿಎಲ್ ಪಂದ್ಯ ಆರಂಭವಾಗಲಿದೆ ಎಂದಿದೆ. ಹೀಗಾದಲ್ಲಿ ಕೆಲ ವಿದೇಶಿ ಆಟಗಾರರು ಐಪಿಎಲ್ ಉದ್ಘಾಟನಾ ಹಾಗೂ ಕೆಲ ಪಂದ್ಯದಿಂದ ಮಿಸ್ ಆಗಲಿದ್ದಾರೆ. ಕಾರಣ ಆಸ್ಟ್ರೇಲಿಯಾ, ನ್ಯೂಜಿಲೆಂಡ್ , ಶ್ರೀಲಂಕಾ ಹಾಗೂ ಇಂಗ್ಲೆಂಡ್ ಕ್ರಿಕೆಟಿಗರು ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಮಾರ್ಚ್ 29ಕ್ಕೆ ಅಂತ್ಯವಾಗಲಿದೆ. ಇನ್ನು ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಈ ನಾಲ್ಕು ತಂಡದ ಆಟಗಾರರು ಎಪ್ರಿಲ್ 1 ರಿಂದ ಐಪಿಎಲ್ ಟೂರ್ನಿಗೆ ಲಭ್ಯವಾಗಲಿದ್ದಾರೆ.

ಇದನ್ನೂ ಓದಿ: IPL 2020: ಇಲ್ಲಿದೆ ಕೊಹ್ಲಿ ಸೇರಿದಂತೆ RCB ಕ್ರಿಕೆಟಿಗರ ಸ್ಯಾಲರಿ ಲಿಸ್ಟ್!

ಈಗಾಗಲೇ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಈ ಎರಡು ಸರಣಿಗಳ ಕುರಿತು ಗಮನ ಹರಿಸಿದೆ. ಹೀಗಾಗಿ ಎಪ್ರಿಲಿಲ್ 1 ರಿಂದ ಐಪಿಎಲ್ ಟೂರ್ನಿ ಆಯೋಜಿಸಲು ಪ್ಲಾನ್ ರೆಡಿ ಮಾಡಿದೆ. ಇದುವರೆಗೂ ಐಪಿಎಲ್ ಗವರ್ನಿಂಗ್ ಗೌನ್ಸಿಲ್ ಅಥವಾ ಬಿಸಿಸಿಐ ಅಧೀಕೃತ ದಿನಾಂಕ ಪ್ರಕಟಿಸಿಲ್ಲ.  ಆದರೆ ಡೆಲ್ಲಿ ಕ್ಯಾಪಿಟಲ್ಸ್ ಮಾರ್ಚ್ 29 ಎಂದಿದೆ.