ಮುಂಬೈ(ಏ.16): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವೈರಸ್ ಹರಡದಂತೆ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಸೋಂಕು ಹತೋಟಿಗೆ ಬರುತ್ತಿಲ್ಲ. ಇದೀಗ ಸೋಂಕಿತರ ಸಂಖ್ಯೆ 12ಸಾವಿರಕ್ಕೇರಿಕೆಯಾಗಿದೆ. ಇತ್ತ ಕೇಂದ್ರ ಸರ್ಕಾರ ಲಾಕ್‌ಡೌನ್ ವಿಸ್ತರಿಸಿದೆ. ಇದೀಗ ಮೇ.3ರ ವರೆಗೆ ಲಾಕ್‌ಡೌನ್ ವಿಸ್ತರಣೆಯಾಗಿದೆ. ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ಇದೀಗ ಬಿಸಿಸಿಐ ಕೂಡ ಐಪಿಎಲ್ ಆಯೋಜನೆ ಕುರಿತು ತನ್ನ ನಿರ್ಧಾರ ಪ್ರಕಟಿಸಿದೆ.

12 ಸಾವಿರ ಡಾಕ್ಟರ್‌ಗಳ ಜತೆ ಸಮಾಲೋಚನೆ ನಡೆಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್

ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಐಪಿಎಲ್ ಆಯೋಜನೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕೊರೋನಾ ವೈರಸ್ ಹತೋಟಿಗೆ ಬರುವ ವರೆಗೆ ಟೂರ್ನಿ ಆಯೋಜನೆ ಕುರಿತು ಯಾವುದೇ ಚಿಂತನೆಯಿಲ್ಲ. ಬಿಸಿಸಿಐ ಎಲ್ಲರ ಆರೋಗ್ಯದ ಕುರಿತು ಕಾಳಜಿ ವಹಿಸುತ್ತದೆ. ಬಿಸಿಸಿಐ, ಫ್ರಾಂಚೈಸಿ, ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ ವಾಹನಿ ಎಲ್ಲರೂ ಜೊತೆಯಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊರೋನಾ ಹತೋಟಿಗೆ ಬರುವ ವರೆಗೆ ಐಪಿಎಲ್ ಆಯೋಜನೆ ಇಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧೋನಿ ಅಪರೂಪದ ವಜ್ರ, ನಿವೃತ್ತಿಗೆ ಒತ್ತಡ ಹೇರಬೇಡಿ ಎಂದ ಇಂಗ್ಲೆಂಡ್ ಮಾಜಿ ನಾಯಕ!...

ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ಬಿಸಿಸಿಐ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ವಿವಿದ ಇಲಾಖೆ ಜೊತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ಬಿಸಿಸಿಐ ತಿಳಿಸಿದೆ.

ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡಾಟಕೂಟಗಳು ರದ್ದಾಗಿದೆ. ಕೊರೋನಾ ಭಾರತಕ್ಕೆ ಹರಡಿದ ಆರಂಭದ ದಿನಗಳಲ್ಲಿ ಭಾರತ-ಸೌತ್ ಆಫ್ರಿಕಾ ನಡುವಿನ ಸರಣಿ ರದ್ದಾಗಿತ್ತು. ಇದಾದ ಬಳಿಕ ಐಪಿಎಲ್ ಮುಂದೂಡಲಾಗಿತ್ತು. ಇದೀಗ ಐಪಿಎಲ್ ತಾತ್ಕಾಲಿಕ ರದ್ದು ಮಾಡಲಾಗಿದೆ.