ಚೆನ್ನೈ(ನ.14): ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್  ಅತ್ಯಂತ ಬಲಿಷ್ಠ ತಂಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಂ.ಎಸ್.ಧೋನಿ ನಾಯಕತ್ವದ CSK ತಂಡಕ್ಕೆ ತಮಿಳುನಾಡು ಮಾತ್ರವಲ್ಲ, ವಿಶ್ವದೆಲ್ಲಡೆ ಅಭಿಮಾನಿಗಳಿದ್ದಾರೆ. ಈ ತಂಡದಲ್ಲಿ ಪ್ರತಿ ಬದಲಾವಣೆಯನ್ನೂ ಅಭಿಮಾನಿಗಳು ಕುತೂಹಲದಿಂದ ಗಮನಿಸುತ್ತಾರೆ. ಇದೀಗ ಇದೇ CSK ತಂಡ ಐವರು ಆಟಗಾರರಿಗೆ ಗೇಟ್‌ಪಾಸ್ ನೀಡಲು ಮುಂದಾಗಿದೆ.

ಇದನ್ನೂ ಓದಿ: IPL 2020 ಟ್ರೆಡಿಂಗ್: ತಂಡ ಬದಲಾಯಿಸಿದ ಆಟಗಾರರ ಫುಲ್ ಲಿಸ್ಟ್!

ಐಪಿಎಲ್ ಹರಾಜಿಗೂ ಮೊದಲು ಐವರು ಕ್ರಿಕೆಟಿಗರನನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ CSK, ನಾಳೆ(ನ.15) ಆಟಗಾರರನ್ನು ರಿಲೀಸ್ ಮಾಡುವುದಾಗಿ ಸ್ಪಷ್ಟಪಡಿಸಿದೆ. ಆದರೆ ಯಾವ ಆಟಗಾರರನ್ನು ಕೈಬಿಡಲಿದೆ ಅನ್ನೋ ಸುಳಿವು ನೀಡಿಲ್ಲ.

ಇದನ್ನೂ ಓದಿ: IPL 2020: ಕನ್ನಡಿಗರ ತಂಡವಾಗಿ ಬದಲಾದ ಕಿಂಗ್ಸ್ ಇಲೆವನ್ ಪಂಜಾಬ್..!

CSK ತಂಡ:
ಎಂ.ಎಸ್.ಧೋನಿ(ನಾಯಕ), ಹರ್ಭಜನ್ ಸಿಂಗ್, ಶೇನ್ ವ್ಯಾಟ್ಸನ್, ಡ್ವೇನ್ ಬ್ರಾವೋ, ಸುರೇಸ್ ರೈನಾ, ರವೀಂದ್ರ ಜಡೇಜಾ, ಅಂಬಾಟಿ ರಾಯುಡು, ಇಮ್ರಾನ್ ತಾಹೀರ್, ಫಾಫ್ ಡುಪ್ಲೆಸಿಸ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಮುರಳಿ ವಿಜಯ್, ಕರಣ್ ಶರ್ಮಾ, ಮೋಹಿತ್ ಶರ್ಮಾ, ಧ್ರುವ ಶೊರೆ, ಸ್ಕಾಟ್ ಕಗ್ಲಿಜಿನ್ ಮೋನು ಕುಮಾರ್, ಮಿಚೆಲ್ ಸ್ಯಾಂಟ್ನರ್, ಚೈತನ್ಯ ಬಿಶ್ನೂ, ನ ಜಗದೀಶನ್, ರುತುರಾಜ್ ಗಾಯಕ್ವಾಡ್, ಕೆಎಂ ಆಸೀಫ್