ಮುಂಬೈ(ನ.14): ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಫ್ರಾಂಚೈಸಿಗಳು ಆಟಗಾರರ ಹರಾಜಿಗೆ ಸಜ್ಜಾಗುತ್ತಿದೆ. ಇದರ ಮೊದಲ ಹಂತವಾಗಿ  ಆಟಗಾರರ ಟ್ರೇಡಿಂಗ್ ನಡೆಯುದಿದೆ. ಹಲವು ಆಟಗಾರರನ್ನು  ಟ್ರೇಡ್ ಮೂಲಕ ತಂಡಗಳು ಖರೀದಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹಾರಿದರೆ ಟ್ರೆಂಟ್ ಬೋಲ್ಟ್ ಮುಂಬೈ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: 3 ಹೊಸ ನಗರಗಳಲ್ಲಿ IPL ಪಂದ್ಯ ಆಯೋಜನೆ?

ಡಿಸೆಂಬರ್ 17 ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಈ ಬಾರಿ ಕೋಲ್ಕತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ನವೆಂಬರ್ 14ರ ಒಳಗೆ ಆಟಗಾರರ ವಿನಿಮಯ ನಡೆಸಬೇಕು. ಹೀಗಾಗಿ ಅಳೆ ತೂಗಿ ಆಟಗಾರರ ವಿನಿಮಯ ಮಾಡಿರುವ ಫ್ರಾಂಚೈಸಿ ಇದೀಗ ಹರಾಜು ಎದುರುನೋಡುತ್ತಿದೆ.

ಇದನ್ನೂ ಓದಿ: ತಂಡದಲ್ಲಿ ಮಹತ್ತರ ಬದಲಾವಣೆ ಇದೆ ಎಂದ CSK !

ಇಲ್ಲೀವರೆಗೆ ಟ್ರೇಡ್ ಮೂಲಕ ತಂಡ ಬದಲಾಸಿದ ಆಟಗಾರರು!

ಕ್ರಿಕೆಟಿಗ ದೇಶ ವೇತನ ಎಲ್ಲಿಂದ ಎಲ್ಲಿಗೆ
ಅಜಿಂಕ್ಯ ರಹಾನೆ ಭಾರತ 8 ಕೋಟಿ ರಾಜಸ್ಥಾನ ಡೆಲ್ಲಿ
ಮಯಾಂಕ್ ಮಾರ್ಕಂಡೆ ಭಾರತ 1.4 ಕೋಟಿ ಮುಂಬೈ ಡೆಲ್ಲಿ
ಶೆರ್ಫಾನೆ ರುದ್‌ಪೋರ್ಡ್ ವಿಂಡೀಸ್ 6.2 ಕೋಟಿ ಡೆಲ್ಲಿ ಮುಂಬೈ
ಆರ್ ಅಶ್ವಿನ್ ಭಾರತ 7.2 ಕೋಟಿ ಪಂಜಾಬ್ ಡೆಲ್ಲಿ
ಜೆ ಸುಚಿತ್ ಭಾರತ 10 ಲಕ್ಷ ಡೆಲ್ಲಿ  ಪಂಜಾಬ್
ಟ್ರೆಂಟ್ ಬೊಲ್ಡ್ ಕಿವಿಸ್ 2.2 ಕೋಟಿ ಡೆಲ್ಲಿ ಮುಂಬೈ
ಕೆ ಗೌತಮ್ ಭಾರತ 6.2 ಕೋಟಿ ರಾಜಸ್ಥಾನ ಪಂಜಾಬ್
ಅಂಕಿತ್ ರಜಪೂತ್ ಭಾರತ 3 ಕೋಟಿ ಪಂಜಾಬ್ ರಾಜಸ್ಥಾನ