ನವದೆಹಲಿ(ನ.14): ಐಪಿಎಲ್ ಟ್ರೆಡಿಂಗ್ ಇಂದು ಅಂತ್ಯವಾಗಲಿದೆ. ಬಳಿಕ ಆಟಾಗರರ ರಲೀಸ್‌ಗೆ ಮಾತ್ರ ಅವಕಾಶ. ಕಾರಣ ಡಿಸೆಂಬರ್ 17 ರಂದು 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಹರಾಜು ಪ್ರಕಿಯೆ ನಡೆಯಲಿದೆ. ಹೀಗಾಗಿ ಫ್ರಾಂಚೈಸಿಗಳು ಚುರುಕಿನ ಕಾರ್ಯಚರಣೆ ನಡೆಸುತ್ತಿದೆ. ಇದೀಗ ಸುದೀರ್ಘ ಕಾಲ ರಾಜಸ್ಥಾನ ರಾಯಲ್ಸ್ ಪರ ಆಡಿ, ತಂಡದ ನಾಯಕನಾಗಿ ಗಮನಸೆಳೆದಿದ್ದ ಅಜಿಂಕ್ಯ ರಹಾನೆ ತಂಡಕ್ಕೆ ಗುಡ್ ಬೈ ಹೇಲಿದ್ದಾರೆ.

ಇದನ್ನೂ ಓದಿ: IPL 2020: ಐವರು ಆಟಗಾರರಿಗೆ CSK ಗೇಟ್‌ಪಾಸ್!

ಐಪಿಎಲ್ ಟ್ರೇಡ್ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಆಟಗಾರ ಅಜಿಂಕ್ಯ ರಹಾನೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ರಾಜಸ್ಥಾನ ರಾಯಲ್ಸ್ ಪರ 100 ಟಿ20 ಪಂದ್ಯ ಹಾಗೂ 24 ಪಂದ್ಯಗಳಲ್ಲಿ ನಾಯಕನ ಜವಾಬ್ದಾರಿ ನಿರ್ವಹಿಸಿದ್ದ ರಹಾನೆ, 2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: IPL 2020 ಟ್ರೆಡಿಂಗ್: ತಂಡ ಬದಲಾಯಿಸಿದ ಆಟಗಾರರ ಫುಲ್ ಲಿಸ್ಟ್!

2011ರಿಂದ 2015 ಹಾಗೂ 2018 ರಿಂದ 2019ರ ವರೆಗೆ ರಾಜಸ್ಧಾನ ರಾಯಲ್ಸ್ ತಂಡದ ಪರ ಆಡಿದ್ದ ರಹಾನೆ ಇದೀಗ ತಂಡ ತೊರೆದು ಡೆಲ್ಲಿ ಸೇರಿಕೊಂಡಿದ್ದಾರೆ. ಡೆಲ್ಲಿ ತಂಡದಲ್ಲಿ ಟೀಂ ಇಂಡಿಯಾದ ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಪ್ರಮುಖ ಆಟಗಾರರು. ಈ ಸಾಲಿಗೆ ರಹಾನೆ ಸೇರ್ಪಡೆಯಾಗಿದ್ದಾರೆ.