ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್, ಕ್ರಿಕೆಟ್ ದೇವರ ಕಾಲಿಗೆ ಬಿದ್ದಿದ್ಯಾಕೆ?
* ಕ್ರಿಕೆಟ್ ದೇವರ ಕಾಲಿಗೆ ಬೀಳ್ತಿರೋದ್ಯಾಕೆ..?
*ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್
* ಲೆಜೆಂಡ್ ಸಚಿನ್ ಆಶೀರ್ವಾದ ಪಡೆದಿದ್ದ ಸಿಕ್ಸರ್ ಕಿಂಗ್ ಯುವಿ
ಮುಂಬೈ, (ಏ.17) : ಕ್ರಿಕೆಟ್ ದಂತಕಥೆ, ಗಾಡ್ ಆಫ್ ಕ್ರಿಕೆಟರ್, ಮಾಸ್ಟರ್ ಬ್ಲಾಸ್ಟರ್ ಅಂತೆಲ್ಲಾ ಕರೆಸಿಕೊಳ್ಳೋ ಸಚಿನ್ ತೆಂಡುಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 9 ವರ್ಷ ಕಳೆದಿವೆ. ಸಚಿನ್ ಅಂದ್ರೆ ಒಂದು ಎಮೋಷನ್, ಸಚಿನ್ ಅಂದ್ರೆ ಒಂದು ಶಕ್ತಿ, ಸಚಿನ್ ಅಂದ್ರೆ ಲವ್ ಹಾಗೂ ಸಚಿನ್ ಅಂದ್ರೆ ಅಭಿಮಾನ. 20 ದಶಕಗಳ ಕ್ರಿಕೆಟ್ ಜೆರ್ನಿಯಲ್ಲಿ ಅಭಿಮಾನಿಗಳು ಇವರನ್ನ ದೇವರಂತೆ ಪೂಜಿಸಿದ ಅನೇಕ ಉದಾಹರಣೆಗಳನ್ನ ನೋಡಿದ್ದೇವೆ. ಮೈದಾನಕ್ಕೆ ನುಗ್ಗಿ ನಮಸ್ಕರಿಸಿದ್ದ ಅನೇಕ ಘಟನೆಗೆ ಕ್ರಿಕೆಟ್ ಲೋಕ ಸಾಕ್ಷಿಯಾಗಿದೆ.
ನಿಜಕ್ಕೂ ಕ್ರಿಕೆಟ್ ದೇವರು ಇಂತಹ ಅಭಿಮಾನ, ಗೌರವಕ್ಕೆ ಅರ್ಹರು. ಇಂತಹ ಅಭಿಮಾನಕ್ಕೆ ಶತಕಗಳ ಶತಕ ರಾಜ ಈಗಲೂ ಈಗಲೂ ಅರ್ಹರಾಗಿದ್ದಾರೆ. ತೆಂಡುಲ್ಕರ್ ಮೇಲಿಟ್ಟ ಜಗತ್ತಿನ ಪ್ರೀತಿ ಮತ್ತೊಮ್ಮೆ ಅನಾವರಣಗೊಂಡಿದೆ.
ಖದರ್ ಕಳೆದುಕೊಂಡ IPL, 14 ವರ್ಷದ ಐಪಿಎಲ್ ಯಶಸ್ವಿ ಓಟಕ್ಕೆ ಬಿತ್ತಾ ಬ್ರೇಕ್..?
ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್:
ಹೌದು, ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಕೋಚ್ ಜಾಂಟಿ ರೋಡ್ಸ್ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದ ಬಳಿಕ ಈ ಘಟನೆ ನಡೆದಿದೆ. ಎರಡು ಟೀಮ್ಸ್ ಪ್ಲೇಯರ್ಸ್ ಪರಸ್ಪರ ಹಸ್ತಲಾಘವ ಮಾಡುತ್ತಿರುವ ವೇಳೆ ಮುಂಬೈ ತಂಡದ ಮೆಂಟರ್ ಅವರ ಪಾದವನ್ನ ಜಾಂಟಿ ರೋಡ್ಸ್ ಸ್ಪರ್ಶಿಸಿ ಆಶೀರ್ವಾದ ಪಡೆದರು. ವಯಸ್ಸಿನಲ್ಲಿ ಜಾಂಟಿ ಸಚಿನ್ಗಿಂತ ನಾಲ್ಕು ವರ್ಷ ದೊಡ್ಡವರು. ಅದನ್ನ ಲೆಕ್ಕಿಸಿದೇ ಸಚಿನ್ ನಮಸ್ಕರಿಸಿದ್ದಾರೆ. ಇವರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಲೆಜೆಂಡ್ ಸಚಿನ್ ಆಶೀರ್ವಾದ ಪಡೆದಿದ್ದ ಸಿಕ್ಸರ್ ಕಿಂಗ್ ಯುವಿ:
ಇನ್ನು ಜಾಂಟಿ ರೋಡ್ಸ್ ಮಾತ್ರವಲ್ಲ ಟೀಮ್ ಇಂಡಿಯಾದ ಅನೇಕ ಕ್ರಿಕೆಟರ್ಸ್ ಕೂಡ ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಸಿಕ್ಸರ್ ಕಿಂಗ್ ಖ್ಯಾತಿಯ ಯುವಿಗೆ ಸಚಿನ್ ಅಂದ್ರೆ ಪಂಚಪ್ರಾಣ. ಇವರು ಅನೇಕ ಬಾರಿ ಗುರುವಿಗೆ ನಮಸ್ಕರಿಸಿ ಪುನೀತರಾಗಿದ್ದಾರೆ.
ಇವರಷ್ಟೇ ಅಲ್ಲದೇ ವಿರೇಂದ್ರ ಸೆಹ್ವಾಗ್, ವಿನೋದ್ ಕಾಂಬ್ಳಿ ಹಾಗೂ ಸುನೀಲ್ ಗವಾಸ್ಕರ್ ಕೂಡ ಸಚಿನ್ಗೆ ನಮಸ್ಕರಿಸಿದ ಉದಾಹರಣೆಗಳಿವೆ...........ಒಟ್ಟಿನಲ್ಲಿ ಆರಂಭದಲ್ಲೇ ಹೇಳಿದಂತೆ ಒನ್ಸ್ ಗಾಡ್ ಆಫ್ ಕ್ರಿಕೆಟರ್, ಆಲ್ವೇಸ್ ಗಾಡ್ಆಫ್ ಕ್ರಿಕೆಟರ್ ಅನ್ನೋದು ಜಾಂಟಿ, ಸಚಿನ್ಗೆ ನಮಸ್ಕರಿಸಿದ ಬಳಿಕ ಮಗದೊಮ್ಮೆ ಪ್ರೂವ್ ಆಗಿದೆ.