ಮೊಹಮ್ಮದ್ ಶಮಿಗೆ ಬದಲಿ ಆಟಗಾರನನ್ನೂ ಬಿಸಿಸಿಐ ಇನ್ನೂ ಹೆಸರಿಸಿಲ್ಲ. ಭಾರತ ‘ಎ’ ತಂಡ ಕೂಡ ದ.ಆಫ್ರಿಕಾ ಪ್ರವಾಸದಲ್ಲಿದ್ದು, ಆ ತಂಡದಲ್ಲಿರುವ ವೇಗಿಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಮುಂಬೈ(ಡಿ.17): ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲ್ಲಲು ಕಾಯುತ್ತಿರುವ ಭಾರತಕ್ಕೆ, ಮುಂಬರುವ 2 ಪಂದ್ಯಗಳ ಸರಣಿಯಲ್ಲಿ ಅನುಭವಿ ವೇಗಿ ಮೊಹಮದ್‌ ಶಮಿಯ ಸೇವೆ ಲಭ್ಯವಾಗುವುದಿಲ್ಲ. ಮೊಣಕಾಲು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಶಮಿ ಸರಣಿಯಿಂದ ಹೊರಬಿದ್ದಿದ್ದಾರೆ. 

ಮೊಹಮ್ಮದ್ ಶಮಿಗೆ ಬದಲಿ ಆಟಗಾರನನ್ನೂ ಬಿಸಿಸಿಐ ಇನ್ನೂ ಹೆಸರಿಸಿಲ್ಲ. ಭಾರತ ‘ಎ’ ತಂಡ ಕೂಡ ದ.ಆಫ್ರಿಕಾ ಪ್ರವಾಸದಲ್ಲಿದ್ದು, ಆ ತಂಡದಲ್ಲಿರುವ ವೇಗಿಗಳ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಡಿಸೆಂಬರ್ 26ರಿಂದ ಆರಂಭಗೊಳ್ಳಲಿದ್ದು, ಪಂದ್ಯಕ್ಕೆ ಸೆಂಚುರಿಯನ್ ಆತಿಥ್ಯ ವಹಿಸಲಿದೆ. 2ನೇ ಪಂದ್ಯ ಜನವರಿ 3ರಿಂದ ಕೇಪ್‌ಟೌನ್‌ನಲ್ಲಿ ನಡೆಯಲಿದೆ.ಇನ್ನೊಂದೆಡೆ ದಕ್ಷಿಣ ಆಫ್ರಿಕಾಕ್ಕೂ ಗಾಯಾಳುಗಳ ಸಮಸ್ಯೆ ಎದುರಾಗಿದ್ದು, ತಾರಾ ವೇಗಿ ಕಗಿಸೋ ರಬಾಡ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನವೆನಿಸಿದೆ.

ವಿಜಯ್‌ ಹಜಾರೆ ಟ್ರೋಫಿ: ಹರ್ಯಾಣಕ್ಕೆ ಒಲಿದ ಚೊಚ್ಚಲ ಪ್ರಶಸ್ತಿ

ಇನ್ನು ವೇಗದ ಬೌಲಿಂಗ್‌ ಆಲ್ರೌಂಡರ್‌ ದೀಪಕ್‌ ಚಹರ್‌ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ. ಅವರ ಬದಲು ಆಕಾಶ್‌ ದೀಪ್‌ರನ್ನು ಬಿಸಿಸಿಐ ತಂಡಕ್ಕೆ ಆಯ್ಕೆ ಮಾಡಿದೆ. 

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯಕ್ಕೆ ನ್ಯೂಯಾರ್ಕ್‌ನಲ್ಲಿ ಸಿದ್ಧತೆ

ನವದೆಹಲಿ: 2024ರ ಟಿ20 ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಮೊದಲ ಬಾರಿಗೆ ಟೂರ್ನಿಗೆ ಆತಿಥ್ಯ ವಹಿಸಲಿರುವ ಅಮೆರಿಕ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಮೆರಿಕದ 3 ನಗರಗಳಲ್ಲಿ ಪಂದ್ಯಗಳು ನಡೆಯಲಿದ್ದು, ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನದ ಪಂದ್ಯಕ್ಕೆ ನ್ಯೂಯಾರ್ಕ್ ಆತಿಥ್ಯ ವಹಿಸಲಿದೆ. 

ರೋಹಿತ್‌ಗೆ ನಾಯಕತ್ವದಿಂದ ಗೇಟ್‌ಪಾಸ್ ಬೆನ್ನಲ್ಲೇ ಕಂಗಾಲಾದ ಸೂರ್ಯ-ಬುಮ್ರಾ..! ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್

ಇಲ್ಲಿನ ಕ್ರೀಡಾಂಗಣದಲ್ಲಿ 32,000 ಆಸನ ಸಾಮರ್ಥ್ಯವಿರುವ ತಾತ್ಕಾಲಿಕ ಪ್ರೇಕ್ಷಕರ ಗ್ಯಾಲರಿಯನ್ನು ಅಮೆರಿಕದ ಕ್ರಿಕೆಟ್‌ ಸಂಸ್ಥೆ ಸಿದ್ಧಪಡಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನ್ಯೂಯಾರ್ಕ್‌ನಲ್ಲಿ 7 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದವರಿದ್ದು, 1 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿಯರಿದ್ದಾರೆ. ಈ ಕಾರಣಕ್ಕೆ ಭಾರತ-ಪಾಕ್‌ ಪಂದ್ಯವನ್ನು ನ್ಯೂಯಾರ್ಕ್‌ನಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಷರತ್ತು ಹಾಕಿ ಮುಂಬೈ ತಂಡ ಸೇರಿದ ಹಾರ್ದಿಕ್‌?

ನವದೆಹಲಿ: ನಾಯಕನ್ನಾಗಿ ಮಾಡುವುದಾದರೆ ಮಾತ್ರ ಗುಜರಾತ್‌ ಜೈಂಟ್ಸ್‌ ತಂಡ ಬಿಟ್ಟು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರುವುದಾಗಿ ಹಾರ್ದಿಕ್‌ ಪಾಂಡ್ಯ ಷರತ್ತು ಹಾಕಿದ್ದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ತಮ್ಮ ತಂಡಕ್ಕೆ ಬರುವಂತೆ ಮುಂಬೈ ಮಾಲಿಕರು ಸಂಪರ್ಕಿಸಿದಾಗ, ಹಾರ್ದಿಕ್‌ ನಾಯಕತ್ವಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ಒಪ್ಪಿದ ತಂಡದ ಮಾಲಿಕ ಆಕಾಶ್‌ ಅಂಬಾನಿ, ಏಕದಿನ ವಿಶ್ವಕಪ್‌ ಆರಂಭಗೊಳ್ಳುವ ಮೊದಲೇ ರೋಹಿತ್‌ ಶರ್ಮಾ ಜೊತೆ ಚರ್ಚಿಸಿ, ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು ಎನ್ನಲಾಗಿದೆ. ಇನ್ನು 2024ರ ಆವೃತ್ತಿ ಬಳಿಕ ಐಪಿಎಲ್‌ಗೆ ರೋಹಿತ್‌ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹಬ್ಬಿದೆ.

ನಾಯಕತ್ವ ಕೈತಪ್ಪಿದ್ದಕ್ಕೆ ಸೂರ್ಯಕುಮಾರ್‌ ಬೇಸರ?

ಮುಂಬೈ ಇಂಡಿಯನ್ಸ್‌ ಮಾಲಿಕರು ತಂಡದ ನಾಯಕತ್ವಕ್ಕೆ ತಮ್ಮನ್ನು ಪರಿಗಣಿಸದ್ದಕ್ಕೆ ಸೂರ್ಯಕುಮಾರ್‌ ಯಾದವ್ ಬೇಸರಗೊಂಡಿದ್ದಾರಾ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿದೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ಘೋಷಿಸಿದ ಬಳಿಕ ಸೂರ್ಯ ಟ್ವೀಟರ್‌ನಲ್ಲಿ ಒಡೆದ ಹೃದಯದ ಎಮೋಜಿ ಪೋಸ್ಟ್‌ ಮಾಡಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಳೆದ ತಿಂಗಳು ಹಾರ್ದಿಕ್‌ ಮುಂಬೈ ತಂಡಕ್ಕೆ ಸೇರ್ಪಡೆಗೊಂಡಾಗ, ಬೂಮ್ರಾ ಸಹ ಸಾಮಾಜಿಕ ತಾಣದಲ್ಲಿ ಮಾರ್ಮಿಕ ಸಂದೇಶವೊಂದನ್ನು ಹಂಚಿಕೊಂಡಿದ್ದರು.