ವಿಜಯ್ ಹಜಾರೆ ಟ್ರೋಫಿ: ಹರ್ಯಾಣಕ್ಕೆ ಒಲಿದ ಚೊಚ್ಚಲ ಪ್ರಶಸ್ತಿ
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ 12 ರನ್‌ಗೆ 3 ವಿಕೆಟ್ ಕಳೆದುಕೊಂಡರೂ, ಅಭಿಜಿತ್ ತೋಮರ್ (106), ಕುನಾಲ್ ಸಿಂಗ್ (79) ಆಸರೆಯಾದರು. ಇವರಿಬ್ಬರ ನಡುವೆ 5ನೇ ವಿಕೆಟ್‌ಗೆ 121 ರನ್ ಜೊತೆಯಾಟ ಮೂಡಿಬಂತು.
ರಾಜ್‌ಕೋಟ್(ಡಿ.17): 2023ರ ವಿಜಯ್ ಹಜಾರೆ ರಾಷ್ಟ್ರೀಯ ಚಾಂಪಿಯನ್ ಆಗಿ ಹರ್ಯಾಣ ಹೊರಹೊಮ್ಮಿದೆ. ತಂಡಕ್ಕಿದು ಚೊಚ್ಚಲ ಪ್ರಶಸ್ತಿ. ಶನಿವಾರ ನಡೆದ ಫೈನಲ್‌ನಲ್ಲಿ ರಾಜಸ್ಥಾನ ವಿರುದ್ಧ ಹರ್ಯಾಣ 30 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಹರ್ಯಾಣ 50 ಓವರಲ್ಲಿ 8 ವಿಕೆಟ್‌ಗೆ 287 ರನ್ ಗಳಿಸಿತು. ಅಂಕಿತ್ ಕುಮಾರ್ 88, ಅಶೋಕ್ ಮೆನಾರಿಯಾ 70 ರನ್ ಗಳಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ 12 ರನ್‌ಗೆ 3 ವಿಕೆಟ್ ಕಳೆದುಕೊಂಡರೂ, ಅಭಿಜಿತ್ ತೋಮರ್ (106), ಕುನಾಲ್ ಸಿಂಗ್ (79) ಆಸರೆಯಾದರು. ಇವರಿಬ್ಬರ ನಡುವೆ 5ನೇ ವಿಕೆಟ್‌ಗೆ 121 ರನ್ ಜೊತೆಯಾಟ ಮೂಡಿಬಂತು. ಆದರೆ ರಾಜಸ್ಥಾನ 56 ರನ್‌ಗೆ ಕೊನೆಯ 7 ವಿಕೆಟ್ ಕಳೆದುಕೊಂಡಿತು. 48 ಓವರಲ್ಲಿ 257ಕ್ಕೆ ಆಲೌಟ್ ಆಯಿತು. ಹರ್ಷಲ್ ಪಟೇಲ್ ಹಾಗೂ ಸುಮಿತ್ ಕುಮಾರ್ ತಲಾ 3 ವಿಕೆಟ್ ಕಿತ್ತರು.
Haryana lifts the Vijay Hazare Trophy...!!!pic.twitter.com/AjZzkFDCsc
— Mufaddal Vohra (@mufaddal_vohra) December 16, 2023
ಭಾರತ ಅತಿದೊಡ್ಡ ಜಯದ ದಾಖಲೆ!
ನವಿ ಮುಂಬೈ: ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಭಾರತ 347 ರನ್‌ಗಳ ಗೆಲುವು ಸಾಧಿಸುವ ಮೂಲಕ, ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ಗೆಲುವಿನ ದಾಖಲೆ ಬರೆದಿದೆ. ಗೆಲ್ಲಲು 479 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್, 2ನೇ ಇನ್ನಿಂಗ್ಸಲ್ಲಿ ಕೇವಲ 131 ರನ್‌ಗೆ ಆಲೌಟ್ ಆಯಿತು.
1998ರಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 309 ರನ್‌ಗಳಿಂದ ಗೆದ್ದಿದ್ದು ದಾಖಲೆಯಾಗಿ ಉಳಿದಿತ್ತು. ಅದನ್ನು ಹರ್ಮನ್‌ಪ್ರೀತ್ ಕೌರ್ ಪಡೆ ಮುರಿದಿದೆ. ಅಲ್ಲದೇ, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಭಾರತಕ್ಕೆ 15 ಟೆಸ್ಟ್‌ಗಳಲ್ಲಿ ಇದು ಮೊದಲ ಟೆಸ್ಟ್ ಗೆಲುವು. ಈ ಗೆಲುವು, ಮುಂದಿನ ವಾರ ಆಸ್ಟ್ರೇಲಿಯಾ ವಿರುದ್ಧ ಆರಂಭಗೊಳ್ಳಲಿರುವ ಪಂದ್ಯಕ್ಕೂ ಮುನ್ನ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ದಕ್ಷಿಣ ಆಫ್ರಿಕಾ ಒನ್‌ಡೇ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ, ಇಂದು ಮೊದಲ ಪಂದ್ಯ
2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 186 ರನ್ ಗಳಿಸಿದ್ದ ಭಾರತ, ಶನಿವಾರ ಬ್ಯಾಟಿಂಗ್ ಮುಂದುವರಿಸದಿರಲು ನಿರ್ಧರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತೀಯರ ಶಿಸ್ತುಬದ್ಧ ದಾಳಿಯ ಎದುರು ಇಂಗ್ಲೆಂಡ್ ನಲುಗಿತು. ಭೋಜನ ವಿರಾಮಕ್ಕೂ ಮೊದಲೇ ಪ್ರವಾಸಿ ತಂಡದ ಇನ್ನಿಂಗ್ಸ್‌ಗೆ ತೆರೆ ಬಿತ್ತು. ಕೇವಲ 27.3 ಓವರ್ ಬ್ಯಾಟ್ ಮಾಡಿದ ಇಂಗ್ಲೆಂಡ್, 131 ರನ್‌ಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದ ದೀಪ್ತಿ ಶರ್ಮಾ, 2ನೇ ಇನ್ನಿಂಗ್ಸಲ್ಲೂ 4 ವಿಕೆಟ್ ಕಿತ್ತರು. ವೇಗಿ ಪೂಜಾ ವಸ್ತ್ರಕರ್‌ಗೆ 3, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ಗೆ 2, ರೇಣುಕಾ ಸಿಂಗ್‌ಗೆ 1 ವಿಕೆಟ್ ಸಿಕ್ಕಿತು.
ಸ್ಕೋರ್: ಭಾರತ 428 ಹಾಗೂ 186/6 ಡಿ.,
ಇಂಗ್ಲೆಂಡ್ 136 ಹಾಗೂ 131/10 (ನೈಟ್ 21, ಡೀನ್ 20*, ದೀಪ್ತಿ 4-32, ಪೂಜಾ 3-23)
ಪಂದ್ಯಶ್ರೇಷ್ಠ: ದೀಪ್ತಿ ಶರ್ಮಾ
ರೋಹಿತ್‌ಗೆ ನಾಯಕತ್ವದಿಂದ ಗೇಟ್‌ಪಾಸ್ ಬೆನ್ನಲ್ಲೇ ಕಂಗಾಲಾದ ಸೂರ್ಯ-ಬುಮ್ರಾ..! ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್
ಆಸೀಸ್ ವಿರುದ್ಧ ಟೆಸ್ಟ್‌ಗೆ ಶುಭಾ ಅನುಮಾನ
ನವಿ ಮುಂಬೈ: ಇಂಗ್ಲೆಂಡ್ ವಿರುದ್ಧ ಶನಿವಾರ ಮುಕ್ತಾಯಗೊಂಡ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಕರ್ನಾಟಕದ ಶುಭಾ ಸತೀಶ್, ಡಿ.21ರಿಂದ 24ರ ವರೆಗೂ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ನಲ್ಲಿ ಆಡುವುದು ಅನುಮಾನವೆನಿಸಿದೆ. ಕೈಬೆರಳು ಮುರಿದುಕೊಂಡಿರುವ ಶುಭಾ, 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲಿಲ್ಲ. ಅವರು ಯಾವಾಗ ಗಾಯಗೊಂಡರು ಎನ್ನುವ ಮಾಹಿತಿಯನ್ನು ಬಿಸಿಸಿಐ ತಿಳಿಸಿಲ್ಲ.