ಹಾರ್ದಿಕ್ ಪಾಂಡ್ಯ ಕೈಗೆ ಹೋಗುತ್ತಾ ಟಿ20 ವಿಶ್ವಕಪ್ ನಾಯಕತ್ವ..? ಪಾಂಡ್ಯ ನಾಯಕತ್ವದಡಿ ಆಡಲು ರೋಹಿತ್ ರೆಡಿ
ಮುಂಬೈ ಇಂಡಿಯನ್ಸ್. ಅತಿಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡ.. ಗೆದ್ದ ಐದು ಟ್ರೋಫಿಯನ್ನೂ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲೇ ಗೆದ್ದಿದ್ದು ಅನ್ನೋದೇ ಮತ್ತೊಂದು ವಿಶೇಷ. ಹೌದು, 2008ರಿಂದ ಐಪಿಎಲ್ ಆಡುತ್ತಿದ್ದರೂ 2013ರವರೆಗೆ ಒಂದೂ ಒಂದು ಬಾರಿಯೂ ಚಾಂಪಿಯನ್ ಆಗಿರಲಿಲ್ಲ ಮುಂಬೈ ಇಂಡಿಯನ್ಸ್.
ಬೆಂಗಳೂರು(ಡಿ.17) ಹಾರ್ದಿಕ್ ಪಾಂಡ್ಯ ಅವರನ್ನ ಏಕಾಏಕಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಮಾಡಿಲ್ಲ. ರೋಹಿತ್ ಶರ್ಮಾ ಅವರನ್ನ ನಾಯಕತ್ವದಿಂದ ತೆಗೆದುಹಾಕಿಲ್ಲ. ಹಾಗಾದ್ರೆ ಈ ಘಟನೆಗಳು ಹಿಟ್ ಮ್ಯಾನ್ಗೆ ಮುಂಚೆಯೇ ಗೊತ್ತಿದ್ವಾ.? ಯೆಸ್ ಎನ್ನುತ್ತಿದೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ. ಹಾರ್ದಿಕ್ ಪಾಂಡ್ಯ ನಾಯಕತ್ವದ ಇನ್ಸೈಡ್ ಸ್ಟೋರಿ ಇಲ್ಲಿದೆ ನೋಡಿ.
ಮುಂಬೈ ಇಂಡಿಯನ್ಸ್. ಅತಿಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡ.. ಗೆದ್ದ ಐದು ಟ್ರೋಫಿಯನ್ನೂ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲೇ ಗೆದ್ದಿದ್ದು ಅನ್ನೋದೇ ಮತ್ತೊಂದು ವಿಶೇಷ. ಹೌದು, 2008ರಿಂದ ಐಪಿಎಲ್ ಆಡುತ್ತಿದ್ದರೂ 2013ರವರೆಗೆ ಒಂದೂ ಒಂದು ಬಾರಿಯೂ ಚಾಂಪಿಯನ್ ಆಗಿರಲಿಲ್ಲ ಮುಂಬೈ ಇಂಡಿಯನ್ಸ್. 2010ರಲ್ಲಿ ಫೈನಲ್ ಪ್ರವೇಶಿಸಿದ್ದೇ ದೊಡ್ಡ ಸಾಧನೆ. ಆದ್ರೆ 2013ರಲ್ಲಿ ರೋಹಿತ್ ಶರ್ಮಾ ಕಪ್ತಾನನಾದ್ಮೇಲೆ ಮುಂಬೈ ಮುಟ್ಟಿದ್ದೆಲ್ಲಾ ಚಿನ್ನವಾಯ್ತು. ಫೈನಲ್ ಪ್ರವೇಶಿಸಿದ ಐದು ಬಾರಿಯೂ ಐಪಿಎಲ್ ಟ್ರೋಫಿ ಗೆದ್ದಿತು. ಒಮ್ಮೆ ಚಾಂಪಿಯನ್ಸ್ ಲೀಗ್ ಅನ್ನೋ ಗೆದ್ದು ಬೀಗಿದೆ. ಇದೆಲ್ಲಾ ಸಾಧ್ಯವಾಗಿದ್ದು ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಿಂದ.
ಟೀಂ ಇಂಡಿಯಾಗೆ ಬೇಕಿದೆ ಯುವಿಯಂತ ಎಡಗೈ ಬ್ಯಾಟರ್.! ಇವರಲ್ಲಿ ಯಾರಿಗಿದೆ ಯುವಿ ಸ್ಥಾನ ತುಂಬಬಲ್ಲ ಸಾಮರ್ಥ್ಯ.?
ದಶಕಗಳ ಕಾಲ ಯಶಸ್ವಿಯಾಗಿ ಮುಂಬೈ ಇಂಡಿಯನ್ಸ್ ತಂಡವನ್ನ ಮುನ್ನಡೆಸಿದ್ದ ರೋಹಿತ್ ಶರ್ಮಾನನ್ನ ಏಕಾಏಕಿ ಕ್ಯಾಪ್ಟನ್ಸಿಯಿಂದ ಕಿಕೌಟ್ ಮಾಡಲಾಗಿದೆ. ಇದರಿಂದ ಬೇಸರಗೊಂಡ ಫ್ಯಾನ್ಸ್, ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಅನ್ ಫಾಲೋ ಮಾಡಿದ್ದಾರೆ. ಜಸ್ಟ್ ಒಂದು ಗಂಟೆಯಲ್ಲೇ ನಾಲ್ಕು ಲಕ್ಷ ಮಂದಿ ಅನ್ ಫಾಲೋ ಮಾಡಿರುವುದು ಆಘಾತಕಾರಿ. ಆದ್ರೆ ಇದರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯದ್ದು ಏನು ತಪ್ಪಿಲ್ಲ ಅನ್ನೋ ಸುದ್ದಿ ಹೊರಬಿದ್ದಿದೆ.
ಪಾಂಡ್ಯ ನಾಯಕತ್ವದಲ್ಲಿ ಆಡಲು ರೋಹಿತ್ ರೆಡಿ
ಐಪಿಎಲ್ ಟ್ರೇಡಿಂಗ್ ವಿಂಡೋ ಓಪನ್ ಇತ್ತಲ್ಲ.. ಆ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಹಾರ್ದಿಕ್ ಪಾಂಡ್ಯರನ್ನ ಸಂಪರ್ಕಿಸಿದೆ. ಮುಂಬೈ ತಂಡಕ್ಕೆ ವಾಪಾಸ್ ಬರುವಂತೆ ಅಹ್ವಾನಿಸಿದೆ. ಮುಂಬೈಗೆ ರಿಟರ್ನ್ ಆಗಬೇಕಾದ್ರೆ ಪಾಂಡ್ಯ ಕಂಡೀಶ್ ಹಾಕಿದ್ದಾರೆ. ಆ ಕಂಡೀಶನ್ನೇ ಕ್ಯಾಪ್ಟನ್ಸಿ. ಹೌದು, ನಾಯಕತ್ವ ನೀಡುವುದಾದ್ರೆ ಮುಂಬೈ ಇಂಡಿಯನ್ಸ್ಗೆ ವಾಪಾಸ್ ಬರ್ತಿನಿ ಎಂದು ಹಾರ್ದಿಕ್ ಅಭಯ ನೀಡಿದ್ದಾರೆ. ಅದರಂತೆ ರೋಹಿತ್ ಶರ್ಮಾ ಬಳಿ ಮಾತನಾಡಿದ ಮುಂಬೈ ಫ್ರಾಂಚೈಸಿ, ಟ್ರೇಡಿಂಗ್ ಮೂಲ್ಕ ಪಾಂಡ್ಯನನ್ನ ಮುಂಬೈ ಇಂಡಿಯನ್ಸ್ಗೆ ರಿಟರ್ನ್ ಮಾಡಿಕೊಂಡಿದೆ.
ಪಾಂಡ್ಯ ನಾಯಕತ್ವದಲ್ಲಿ ರೋಹಿತ್ ಆಡಲು ಗ್ರೀನ್ ಸಿಗ್ನಲ್ ಸಹ ನೀಡಿದ್ದಾರೆ. ಅಲ್ಲಿಗೆ ರೋಹಿತ್ ಅವರನ್ನ ಕೇಳಿಯೇ ಫ್ರಾಂಚೈಸಿ ಪಾಂಡ್ಯನನ್ನ ರಿಟರ್ನ್ ಮಾಡಿಕೊಂಡು ಕ್ಯಾಪ್ಟನ್ ಮಾಡಿದೆ. ಇದನ್ನೆಲ್ಲಾ ನೋಡುತ್ತಿದ್ದರೆ, ರೋಹಿತ್ ಶರ್ಮಾ, ಈ ಸೀಸನ್ ಐಪಿಎಲ್ ಆಡಿ ಫ್ರಾಂಚೈಸಿ ಲೀಗ್ಗೆ ಗುಡ್ ಬೈ ಹೇಳಿದ್ರೂ ಆಶ್ಚರ್ಯವಿಲ್ಲ. ಆದ್ರೂ ಸೋಷಿಯಲ್ ಮೀಡಿಯಾದಲ್ಲಿ ಪಾಂಡ್ಯ ವಿರುದ್ಧ ಮುಂಬೈ ಫ್ಯಾನ್ಸ್ ವಾಗ್ದಾಳಿ ಮಾಡುತ್ತಿದ್ದಾರೆ.
2022ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಸೋತ್ಮೇಲೆ ಟಿ20 ಕ್ಯಾಪ್ಟನ್ಸಿ ಹಾರ್ದಿಕ್ ಪಾಂಡ್ಯ ಪಾಲಾಯ್ತು. ಆದ್ರೆ ಅವರು ಇಂಜುರಿಯಾಗಿರೋದ್ರಿಂದ ಸೂರ್ಯ ಕ್ಯಾಪ್ಟನ್ ಆಗಿದ್ದಾರೆ ಅಷ್ಟೆ. ಈಗ ಅವರೇ ಟಿ20 ವಿಶ್ವಕಪ್ನಲ್ಲೂ ನಾಯಕರಾಗಿರ್ತಾರೆ ಅನ್ನಲಾಗ್ತಿದೆ. ರೋಹಿತ್ ಶರ್ಮಾ ಅವರನ್ನ ಟಿ20 ವಿಶ್ವಕಪ್ಗೆ ಸೆಲೆಕ್ಟ್ ಮಾಡಿದ್ರೂ ಪಾಂಡ್ಯನೇ ನಾಯಕನಾಗಿ ಮುಂದುವರೆಯುತ್ತಾರೆ. ಕೊಹ್ಲಿ, ರೋಹಿತ್, ರಾಹುಲ್ ಎಲ್ಲರೂ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಆಡಬೇಕು. ಈ ಮೂವರನ್ನ ಟಿ20 ವಿಶ್ವಕಪ್ನಿಂದ ಡ್ರಾಪ್ ಮಾಡಿದ್ರೂ ಆಶ್ಚರ್ಯವಿಲ್ಲ. ಒಟ್ನಲ್ಲಿ ಈಗ ಹಾರ್ದಿಕ್ ಪಾಂಡ್ಯ ದುನಿಯಾ ಸ್ಟಾರ್ಟ್ ಆಗಿದೆ. ಆದ್ರೆ ಅದು ಎಲ್ಲಿಯವರೆಗೂ ಅನ್ನೋದು ಮಾತ್ರ ಗೊತ್ತಿಲ್ಲ. ಯಾಕಂದ್ರೆ ಪಾಂಡ್ಯ ಆಡಿದಕ್ಕಿಂತ ಇಂಜುರಿಯಾಗಿದ್ದೇ ಜಾಸ್ತಿ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್