ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಬದ್ಧವೈರಿ ಪಾಕಿಸ್ತಾನ ವಿರುದ್ಧ 107 ರನ್ ಗಲುವು ಪಂದ್ಯ ಗೆದ್ದ ಬಳಿಕ ಮುದ್ದು ಕಂದನ ಜೊತೆ ಮಹಿಳಾ ಕ್ರಿಕೆಟಿಗ ಆಟ
ಮೌಂಟ್‌ಮಾಂಗನುಯಿ(ಮಾ.06): ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಶುಭಾರಂಭ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧ 107 ರನ್ ಗೆಲುವು ಸಾಧಿಸಿ ಟೂರ್ನಿಯಲ್ಲಿ ಅಧಿಪತ್ಯ ಸಾಧಿಸಿದೆ. ಪಂದ್ಯ ಗೆದ್ದ ಬಳಿಕ ಭಾರತ ಮಹಿಳಾ ಕ್ರಿಕೆಟಿಗರ ಹೃದಯಸ್ಪರ್ಶಿ ನಡೆ ಎಲ್ಲರ ಗಮನ ಸೆಳೆದಿದೆ. ಪಾಕಿಸ್ತಾನ ನಾಯಕಿ ಬಿಸ್ಮಾ ಮಾರೂಫ್ ಮುದ್ದು ಕಂದನ ಜೊತೆ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಕೆಲ ಹೊತ್ತು ಕಾಲ ಕಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯ ಗೆದ್ದ ಬಳಿಕ ಭಾರತ ಮಹಿಳಾ ತಂಡ ನೇರವಾಗಿ ಪಾಕಿಸ್ತಾನ ಡ್ರೆಸ್ಸಿಂಗ್ ರೂಂಗೆ ತೆರಳಿದೆ. ಕಾರಣ ಬಿಸ್ಮಾ ಮಾರೂಫ್ ಮುದ್ದು ಕಂದ. 6 ತಿಂಗಳ ಮುದ್ದು ಕಂದನ ಜೊತೆ ಕೆಲ ಹೊತ್ತು ಕಾಲ ಕಳೆಯಲು ಭಾರತ ವನಿತೆಯರು ತೆರಳಿದ್ದಾರೆ. ನಾಯಕಿ ತನ್ನ 6 ತಿಂಗಳ ಕಂದ ಫಾತಿಮಾ ಜೊತೆ ವಿಶ್ವಕಪ್ ಟೂರ್ನಿ ಆಡುತ್ತಿದ್ದಾರೆ. ಈ ಕಂದನ ಜೊತೆ ಕೆಲ ಹೊತ್ತು ಕಳೆದ ಭಾರತದ ವನಿತೆಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ICC Women's World Cup: ಪಾಕ್ ಬಗ್ಗುಬಡಿದು ಶುಭಾರಂಭ ಮಾಡಿದ ಭಾರತ
ಕಂದನ ಜೊತೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕ್ ನಾಯಕಿ ಮಾರೂಫ್ ಬದ್ಧತೆಗೆ ವಿಶ್ವದೆಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 6 ತಿಂಗಳ ಕಂದನ ಜೊತೆ ರಾಷ್ಟ್ರದ ಕರ್ತವ್ಯ ನಿಭಾಯಿಸುತ್ತಿರುವ ಮಾರೂಫ್‌ನ್ನು ಕ್ರಿಕೆಟ್ ದಿಗ್ಗಜರು ಶ್ಲಾಘಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 245 ರನ್ ಸಿಡಿಸಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ನೆರವಾದರು. 4 ವಿಕೆಟ್ ಕಬಳಿಸಿದರು. ಇದರೊಂದಿಗೆ ಪಾಕಿಸ್ತಾನ 137 ರನ್‌ಗೆ ಆಲೌಟ್ ಆಯಿತು.
ಇಂದಿನ ಪಂದ್ಯ ಸೇರಿದಂತೆ ಏಕದಿನದಲ್ಲಿ ಉಭಯ ತಂಡಗಳು ಈವರೆಗೆ 11 ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ 11 ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿದೆ. 2009, 2017ರ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಗೆದ್ದಿರುವ ಭಾರತ ಅಜೇಯ ಓಟ ಮುಂದುವರಿಸುವ ತವಕದಲ್ಲಿದೆ.
IPL 2022 ಬಹುನಿರೀಕ್ಷಿತ ಐಪಿಎಲ್ 2022 ವೇಳಾಪಟ್ಟಿ ಪ್ರಕಟ, ಮಾ.26ರಿಂದ ಟೂರ್ನಿ ಆರಂಭ!
ರೌಂಡ್ ರಾಬಿನ್ ಮಾದರಿಯ ಟೂರ್ನಿಯಲ್ಲಿ ಪ್ರತಿ ತಂಡಗಳು ಪರಸ್ಪರ ಒಮ್ಮೆ ಎದುರಾಗಲಿದ್ದು, ಕಳೆದ ಬಾರಿ ರನ್ನರ್-ಅಪ್ ಭಾರತಕ್ಕೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದೆ. ಅಗ್ರ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು, ಎ.3ಕ್ಕೆ ಕ್ರೈಸ್ಟ್‌ಚಚ್‌ರ್‍ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ. 6 ಬಾರಿ ಚಾಂಪಿಯನ್ ಆಸ್ಪ್ರೇಲಿಯಾ ಟೂರ್ನಿಯ ಯಶಸ್ವಿ ತಂಡ ಎನಿಸಿಕೊಂಡಿದ್ದು, ಇಂಗ್ಲೆಂಡ್ 4, ನ್ಯೂಜಿಲೆಂಡ್ 1 ಬಾರಿ ಪ್ರಶಸ್ತಿ ಗೆದ್ದಿದೆ.
ಚಾಂಪಿಯನ್ ಆಗುವ ತಂಡಕ್ಕೆ 10 ಕೋಟಿ ರು. ಬಹುಮಾನ
ಈ ಬಾರಿ ಚಾಂಪಿಯನ್ ಆಗುವ ತಂಡಕ್ಕೆ 1.32 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 9.94 ಕೋಟಿ ರು.), ರನ್ನರ್ ಅಪ್ ತಂಡಕ್ಕೆ 4.51 ಕೋಟಿ ರು. ಬಹುಮಾನ ಸಿಗಲಿದೆ. ಕಳೆದ ಬಾರಿ ಚಾಂಪಿಯನ್ ಆದ ತಂಡಕ್ಕೆ 4.99 ಕೋಟಿ ರು. ಬಹುಮಾನ ಸಿಕ್ಕಿತ್ತು. ಈ ಬಾರಿ ಪ್ರಶಸ್ತಿ ಮೊತ್ತವನ್ನು ಐಸಿಸಿ ದುಪ್ಪಟ್ಟಾಗಿಸಿದೆ.
31 ಪಂದ್ಯ
ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 31 ಪಂದ್ಯಗಳು ನಡೆಯಲಿವೆ.
08 ತಂಡಗಳು
ಪ್ರಶಸ್ತಿಗಾಗಿ ಒಟ್ಟು 8 ತಂಡಗಳು ಸೆಣಸಾಡಲಿವೆ
