ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದ ಟೀಂ ಇಂಡಿಯಾ ಇದೀಗ 2ನೇ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.  

ತಿರುವನಂತಪುರಂ(ನ.26) ಭಾರತ ಹಾಗೂ ಆಸ್ಟ್ರೇಲಿಯಾ ಇದೀಗ ತಿರುವನಂತಪುರಂನಲ್ಲಿ ಮುಖಾಮುಖಿಯಾಗಿದೆ. ಮೊದಲ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿರುವ ಭಾರತ ಇದೀಗ 2ನೇ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾ ತಂಡದಲ್ಲಿ 2 ಮಹತ್ವದ ಬದಲಾವಣೆ ಮಾಡಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ತಂಡ ಸೇರಿಕೊಂಡಿದ್ದಾರ. ಇತ್ತ ಆ್ಯಡಮ್ ಜಂಪಾ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಭಾರತ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್, ಮುಕೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ 

ಟಿ ಶರ್ಟ್‌ನಲ್ಲಿ ಧೂಳು ಒರೆಸಿ ಅಭಿಮಾನಿ ಬೈಕ್‌ ಮೇಲೆ ಆಟೋಗ್ರಾಫ್ ಹಾಕಿದ ಧೋನಿ!

ಆಸ್ಟ್ರೇಲಿಯಾ ಪ್ಲೇಯಿಂಗ್ 11
ಸ್ಟೀವನ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ವೇಡ್, ಸೀನ್ ಅಬಾಟ್, ನಥನ್ ಎಲ್ಲಿಸ್, ಆ್ಯಡಮ್ ಜಂಪಾ, ತನ್ವೀರ್ ಸಂಘಾ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಮೊದಲ ಪಂದ್ಯದಲ್ಲೇ ರೋಚಕತೆ ಹೆಚ್ಚಿಸಿತ್ತು. ಅಂತಿಮ ಎಸೆತದಲ್ಲಿ ಭಾರತ ಗೆಲುವಿನ ಕೇಕೆ ಹಾಕಿತ್ತು. ಮೊದಲು ಬ್ಯಾಟ್ ಮಾಡಿದ ಆಸೀಸ್ ಕಲೆಹಾಕಿದ್ದು 3 ವಿಕೆಟ್‌ಗೆ ಬರೋಬ್ಬರಿ 208 ರನ್‌. ಜೋಶ್‌ ಇಂಗ್ಲಿಸ್‌ರ ಆರ್ಭಟ ಭಾರತೀಯ ಬೌಲರ್‌ಗಳನ್ನು ಮಂಕಾಗಿಸಿತು. ಆದರೆ ಬ್ಯಾಟರ್‌ಗಳು ಆರ್ಭಟಿಸಿ, ಆಸೀಸ್‌ಗೆ ಬಿಸಿ ಮುಟ್ಟಿಸಿದರು. ಸೂರ್ಯಕುಮಾರ್, ಇಶಾನ್‌ ಕಿಶನ್‌ ಆರ್ಭಟಿಸಿದರೂ ಬಳಿಕ ದಿಢೀರ್‌ ಕುಸಿತ ಕಂಡಿದ್ದರಿಂದ ಗೆಲುವಿಗೆ 19.5 ಓವರ್‌ ವರೆಗೂ ಕಾಯಬೇಕಾಯಿತು. ರಿಂಕು ಸಿಂಗ್‌ ತಮ್ಮ ಘನತೆಗೆ ತಕ್ಕ ಆಟವಾಡಿ ತಂಡವನ್ನು ದಡ ಸೇರಿಸಿದರು.

2024ರ ಐಪಿಎಲ್‌ಗೂ ಮುನ್ನ ಆರ್‌ಸಿಬಿಯಿಂದ ಸ್ಟಾರ್ ಪ್ಲೇಯರ್ ಔಟ್ ..!

ಋತುರಾಜ್‌ ಯಾವುದೇ ಎಸೆತ ಎದುರಿಸದೆ ಶೂನ್ಯಕ್ಕೆ ರನೌಟಾಗಿ ನಿರ್ಗಮಿಸಿದ ಬಳಿಕ, ಯಶಸ್ವಿ ಜೈಸ್ವಾಲ್‌(21) ಕೂಡಾ ಅವರ ಹಿಂದೆ ಪೆವಿಲಿಯನ್‌ ಸೇರಿದರು. 3ನೇ ವಿಕೆಟ್‌ಗೆ ಇಶಾನ್‌(39 ಎಸೆತದಲ್ಲಿ 58) ಜೊತೆ 112 ರನ್‌ ಸೇರಿಸಿದ ಸೂರ್ಯ ಆಕರ್ಷಕ ಹೊಡೆತಗಳ ಮೂಲಕ ತಂಡಕ್ಕೆ ಗೆಲುವು ಸುಲಭವಾಗಿಸಿದರು. 42 ಎಸೆತದಲ್ಲಿ 9 ಬೌಂಡರಿ, 4 ಸಿಕ್ಸರ್‌ನೊಂದಿಗೆ 80 ರನ್‌ ಸಿಡಿಸಿ ಗೆಲುವಿನ ಅಂಚಿನಲ್ಲಿ ನಿರ್ಗಮಿಸಿದರು. ರಿಂಕು ಸಿಂಗ್‌ (ಔಟಾಗದೆ 14 ಎಸೆತದಲ್ಲಿ 22 ರನ್‌) ಮತ್ತೆ ಫಿನಿಶರ್‌ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.