2024ರ ಐಪಿಎಲ್‌ಗೂ ಮುನ್ನ ಆರ್‌ಸಿಬಿಯಿಂದ ಸ್ಟಾರ್ ಪ್ಲೇಯರ್ ಔಟ್ ..!

ಶೆಹಬಾಜ್ ಅಹಮದ್, ಐಪಿಎಲ್‌ನಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಆದರೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶೆಹಬಾಜ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಕಳೆದ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಶೆಹಬಾಜ್ 10 ಪಂದ್ಯಗಳನ್ನಾಡಿ ಕೇವಲ 42 ರನ್ ಗಳನ್ನಷ್ಟೇ ಬಾರಿಸಿದ್ದರು.

IPL 2024 Sunrisers Hyderabad RCB trade Mayank Dagar and Shahbaz Ahmed ahead of auction kvn

ಬೆಂಗಳೂರು(ನ.26): 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಾಗಲೇ ಭರದ ಸಿದ್ದತೆಗಳು ನಡೆಯುತ್ತಿವೆ. ಹೀಗಿರುವಾಗಲೇ 2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಆಟಗಾರರ ಟ್ರೇಡಿಂಗ್ ಹಾಗೂ ರೀಟೈನ್ ಮತ್ತು ರಿಲೀಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಇಂದು ಆಟಗಾರರ ಟ್ರಾನ್ಸ್‌ಪರ್‌ಗೆ ಕಡೆಯ ದಿನವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಸ್ಟಾರ್ ಆಲ್ರೌಂಡರ್ ಶೆಹಬಾಜ್ ಅಹಮದ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್‌ಗೆ ನೀಡಿ ಆರೆಂಜ್ ಆರ್ಮಿಯಲ್ಲಿದ್ದ ಮಯಾಂಕ್ ಡಾಗರ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಶೆಹಬಾಜ್ ಅಹಮದ್, ಐಪಿಎಲ್‌ನಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಆದರೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶೆಹಬಾಜ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಕಳೆದ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಶೆಹಬಾಜ್ 10 ಪಂದ್ಯಗಳನ್ನಾಡಿ ಕೇವಲ 42 ರನ್ ಗಳನ್ನಷ್ಟೇ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಕೇವಲ ಒಂದು ವಿಕೆಟ್ ಕಬಳಿಸಿದ್ದರು. ರಜತ್ ಪಾಟೀದಾರ್ ಅನುಪಸ್ಥಿತಿಯಲ್ಲಿ ಶೆಹಬಾಜ್‌ಗೆ ಹೆಚ್ಚಿನ ಅವಕಾಶ ಸಿಕ್ಕಿದರೂ ಅದನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾಗಿದ್ದರು.

2020ರ ಐಪಿಎಲ್ ಟೂರ್ನಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಶೆಹಬಾಜ್ 39 ಐಪಿಎಲ್ ಪಂದ್ಯಗಳನ್ನಾಡಿ 14 ವಿಕೆಟ್ ಕಬಳಿಸಿದ್ದಾರೆ. 7 ರನ್ ನೀಡಿ 3 ವಿಕೆಟ್ ಕಬಳಿಸಿದ್ದು, ಬೌಲಿಂಗ್‌ನಲ್ಲಿ ವೈಯುಕ್ತಿಕ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ.

ಇನ್ನೊಂದೆಡೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿದ್ದ ಆಲ್ರೌಂಡರ್ ಮಯಾಂಕ್ ಡಾಗರ್ ಇದೀಗ ಆರ್‌ಸಿಬಿ ತೆಕ್ಕೆಗೆ ಬಂದಿದ್ದಾರೆ. ಈ ಮೊದಲು ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್‌) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮಯಾಂಕ್ ಡಾಗರ್ ಕೇವಲ 3 ಪಂದ್ಯಗಳನ್ನಾಡಿ ಒಂದು ವಿಕೆಟ್ ಕಬಳಿಸಿದ್ದರು.

Latest Videos
Follow Us:
Download App:
  • android
  • ios