Asianet Suvarna News Asianet Suvarna News

IND v WI 1st T20I : ಭಾರತದ ಗೆಲುವಿಗೆ ಸವಾಲಿನ ಗುರಿ

ನಿಕೋಲಸ್ ಪೂರನ್ ಅರ್ಧಶತಕ
ಚೊಚ್ಚಲ ಪಂದ್ಯದಲ್ಲಿಯೇ ಗಮನಸೆಳೆದ ರವಿ ಬಿಷ್ಣೋಯಿ
ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿಹಾಕಿದ ಭಾರತ
 

IndiavsWest Indies 1st T20I Nicholas Pooran Helps West Indies to Reach 157 san
Author
Bengaluru, First Published Feb 16, 2022, 9:04 PM IST

ಕೋಲ್ಕತ (ಫೆ. 16): ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟ ಮೊದಲ ಪಂದ್ಯದಲ್ಲಿಯೇ ಭರ್ಜರಿ ಬೌಲಿಂಗ್ ಮೂಲಕ ಗಮನಸೆಳೆದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ (Ravi Bishnoi), ಮಾಜಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ (West Indies) ತಂಡದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕಲು ನೆರವಾಗಿದ್ದಾರೆ. ಬೌಲರ್ ಗಳ ಭರ್ಜರಿ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ (Team India) ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 (T20) ಪಂದ್ಯದ ಗೆಲುವಿಗೆ ಸಾಧಾರಣ ಸವಾಲು ಪಡೆದುಕೊಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಕೋಲಸ್ ಪೂರನ್ (Nicholas Pooran) ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ 7 ವಿಕೆಟ್ ಗೆ 157 ರನ್ ಪೇರಿಸಲಷ್ಟೇ ಯಶ ಕಂಡಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ನಿಕೋಲಸ್ ಪೂರನ್ 43 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ನೊಂದಿಗೆ 61 ರನ್ ಬಾರಿಸಿ ಮಿಂಚಿದರು.

ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಬ್ರಾಂಡನ್ ಕಿಂಗ್ (4) ಅವರನ್ನು ಭುವನೇಶ್ವರ್ ಕುಮಾರ್ (Bhuvneshwar Kumar) ಮೊದಲ ಓವರ್ ನ 5ನೇ ಎಸೆತದಲ್ಲಿಯೇ ಡಗ್ ಔಟ್ ಗೆ ಸೇರಿಸಿದ್ದರು. ಬಳಿಕ ಕೈಲ್ ಮೇಯರ್ಸ್ ಗೆ  ಜೊತೆಯಾದ ನಿಕೋಲಸ್ ಪೂರನ್, 2ನೇ ವಿಕೆಟ್ ಗೆ 47 ರನ್ ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದ್ದರು. ಈ ವೇಳೆ ದಾಳಿಗಿಳಿದ ಚಾಹಲ್, ಮೇಯರ್ಸ್ ವಿಕೆಟ್ ಉರುಳಿಸಿದರು. ಬಳಿಕ ರೋಸ್ಟನ್ ಚೇಸ್ (4) ಹಾಗೂ ರೋವ್ ಮನ್ ಪಾವೆಲ್ (0) ವಿಕೆಟ್ ಅನ್ನು ಒಂದೇ ಓವರ್ ನಲ್ಲಿ ಉರುಳಿಸುವ ಮೂಲಕ ರವಿ ಬಿಷ್ಣೋಯಿ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. 74 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್, ಕೆಲ ಹೊತ್ತು ಆಧರಿಸಿದ ಅಕೇಲ್ ಹುಸೇನ್ (10) ತಂಡದ ಮೊತ್ತ 90ರ ಗಡಿ ದಾಟುವವರೆಗೂ ಕ್ರೀಸ್ ನಲ್ಲಿದ್ದರು. ದೀಪಕ್ ಚಹರ್ ಇವರ ವಿಕೆಟ್ ಉರುಳಿಸಿದಾಗ ವಿಂಡೀಸ್ ಇನ್ನೂ 100ರ ಗಡಿ ದಾಟಿರಲಿಲ್ಲ.


ಈ ಎಲ್ಲದರ ನಡುವೆಯೂ ಒಂದು ಕಡೆ ಏಕಾಂಗಿಯಾಗಿ ಹೋರಾಟ ನಡೆಸಿದ್ದ ನಿಕೋಲಸ್ ಪೂರನ್ ಬಿರುಸಿನ ಬ್ಯಾಟಿಂಗ್ ನಡೆಸುವ ಮೂಲಕ ಅರ್ಧಶತಕ ಪೂರೈಸಿದರು. ಇವರಿಗೆ ನಾಯಕ ಕೀರನ್ ಪೊಲ್ಲಾರ್ಡ್ ಕೂಡ ಸಾಥ್ ನೀಡಿದರು. ತಂಡದ ಮೊತ್ತ 133 ರನ್ ಆಗಿದ್ದ ವೇಳೆ ಪೂರನ್ ನಿರ್ಗಮಿಸಿದರೂ, ಪೊಲ್ಲಾರ್ಡ್ ಹಾಗೂ ಓಡೆನ್ ಸ್ಮಿತ್ ವೆಸ್ಟ್ ಇಂಡೀಸ್ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

Yuzvendra Chahal : "ಪಾಜಿ, ನಿಂಬು ಕಟ್ಟಾ ಹೇ" ರೀಲ್ ಗೆ ಸಖತ್ ರೆಸ್ಪಾನ್ಸ್!
ಟಾಸ್ ಗೆದ್ದಿದ್ದ ಭಾರತ : ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಬುಧವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಐನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟಾಸ್‌ ವೇಳೆ ಮಾತನಾಡಿದ ರೋಹಿತ್, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಭಾರತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಲ್ಲದೆ, ಇಶಾನ್ ಕಿಶನ್ (Ishan Kishan) ತಮ್ಮೊಂದಿಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ ಎನ್ನುವುದನ್ನು ಖಚಿತಪಡಿಸಿದ್ದರು. ಮತ್ತೊಂದೆಡೆ, ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್ (Kieron Pollard) ಅವರು ಆಲ್ ರೌಂಡರ್ ಜೇಸನ್ ಹೋಲ್ಡರ್ (Jason Holder) ಗಾಯದ ಕಾರಣ ಈ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಅವರ ಸ್ಥಾನದಲ್ಲಿ ರೋಸ್ಟನ್ ಚೇಸ್ (Roston Chase 
) ಅವರು ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಹೇಳಿದ್ದರು.


ರವಿ ಬಿಷ್ಣೋಯಿ ಪಾದಾರ್ಪಣೆ: ಈ ಪಂದ್ಯದ ಮೂಲಕ ಭಾರತದ ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಜೋಧ್‌ಪುರ ಮೂಲದ 21 ವರ್ಷದ ಬಲಗೈ ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿಗೆ ಬಿಸಿಸಿಐ, ಮತ್ತು ಐಸಿಸಿ ಶುಭ ಹಾರೈಸಿದೆ. ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ (Yuzvendra Chahal) ಅವರು ಬಿಷ್ಣೋಯಿಗೆ ಕ್ಯಾಪ್ ನೀಡಿದರು.

ವೆಸ್ಟ್ ಇಂಡೀಸ್: 7 ವಿಕೆಟ್ ಗೆ 157 (ಪೂರನ್ 61, ಕೈಲ್ ಮೇಯರ್ಸ್ 31, ಪೊಲ್ಲಾರ್ಡ್ 24, ಹರ್ಷಲ್ ಪಟೇಲ್ 37ಕ್ಕೆ 2, ರವಿ ಬಿಷ್ಣೋಯಿ 17ಕ್ಕೆ 2)

 

Follow Us:
Download App:
  • android
  • ios