19ನೇ ಆವೃತ್ತಿಯ ವಿಜಯ್‌ ಹಜಾರೆ ಟೂರ್ನಿಯ ಫೈನಲ್‌ನಲ್ಲಿಂದು ಬಲಷ್ಠ ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳು ಕಾದಾಡುತ್ತಿದ್ದು, ಪ್ರಶಸ್ತಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.14): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ಪ್ರಶಸ್ತಿಗಾಗಿ ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳು ಸೆಣಸಲಿವೆ. 

ಅತ್ಯದ್ಭುತ ಲಯದಲ್ಲಿರುವ ಮುಂಬೈ ನಾಯಕ ಪೃಥ್ವಿ ಶಾ ಮೇಲೆ ಟೀಂ ಇಂಡಿಯಾ ಆಯ್ಕೆಗಾರರು ಕಣ್ಣಿಟ್ಟಿದ್ದು, ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಟೂರ್ನಿಯಲ್ಲಿ 754 ರನ್‌ ಕಲೆಹಾಕಿರುವ ಪೃಥ್ವಿ ಫೈನಲ್‌ ಪಂದ್ಯದಲ್ಲೂ ಅಬ್ಬರಿಸುವ ಗುರಿ ಇಟ್ಟುಕೊಂಡಿದ್ದಾರೆ.

ವಿಜಯ್‌ ಹಜಾರೆ ಟೂರ್ನಿ: ಕರ್ನಾಟಕದ ಫೈನಲ್‌ ಕನಸು ಭಗ್ನ..!

ಮತ್ತೊಂದೆಡೆ ಯುವ ನಾಯಕ ಕರಣ್‌ ಶರ್ಮಾ ಉತ್ತರ ಪ್ರದೇಶ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದು, ಎಲ್ಲರ ನಿರೀಕ್ಷೆಗೂ ಮೀರಿ ತಂಡ ಫೈನಲ್‌ ಪ್ರವೇಶಿಸಿದೆ. ಪೃಥ್ವಿ ಶಾ ಅಬ್ಬರದಲ್ಲಿ ಮುಂಬೈನ ಇತರ ಬ್ಯಾಟ್ಸ್‌ಮನ್‌ಗಳ ಅಸ್ಥಿರ ಪ್ರದರ್ಶನ ಅಷ್ಟಾಗಿ ಗುರುತಿಸಿಕೊಳ್ಳದಿದ್ದರೂ, ತಂಡಕ್ಕಿದು ಫೈನಲ್‌ನಲ್ಲಿ ಸಮಸ್ಯೆಯಾಗಬಹುದು. ಬೌಲಿಂಗ್‌ ವಿಭಾಗದಲ್ಲೂ ಮುಂಬೈ ತೀರಾ ಬಲಿಷ್ಠವಾಗೇನೂ ಇಲ್ಲ. ಮುಂಬೈ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದ್ದರೂ, ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

Scroll to load tweet…

ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವು ಗುಜರಾತ್‌ ವಿರುದ್ದ 5 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಫೈನಲ್‌ ಪ್ರವೇಶಿಸಿದ್ದರೆ, ಮತ್ತೊಂದೆಡೆ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ತಂಡವನ್ನು ಮಣಿಸಿ ಮುಂಬೈ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ