Viral Video: ಟೀಮ್ ಇಂಡಿಯಾ ಥ್ರೋಡೌನ್ ಸ್ಪೆಷಲಿಸ್ಟ್ ಕನ್ನಡಿಗ ರಘುಗೆ ಹೋಟೆಲ್ ಎಂಟ್ರಿ ನಿರಾಕರಿಸಿದ ಪೊಲೀಸ್!
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯಕ್ಕಾಗಿ ಭಾರತೀಯ ತಂಡದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಮುಂತಾದವರು ನಾಗ್ಪುರಕ್ಕೆ ಬಂದಿಳಿದರು.

ನಾಗ್ಪುರ (ಫೆ.4): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ನಾಗ್ಪುರಕ್ಕೆ ಬಂದಿಳಿದ ಭಾರತೀಯ ತಂಡದ ಸದಸ್ಯರೊಬ್ಬರನ್ನು ಅಭಿಮಾನಿ ಎಂದು ಭಾವಿಸಿ ಪೊಲೀಸರು ತಡೆದ ಘಟನೆ ನಡೆದಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದ್ದು, ನಗರದ ರಾಡಿಸನ್ ಹೋಟೆಲ್‌ನಲ್ಲಿ ಮುಂಭಾಗ ಈ ಘಟನೆ ನಡೆದಿದೆ. ಭಾರತೀಯ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಕರ್ನಾಟಕ ಮೂಲದ ರಘು ಅವರನ್ನು ಭದ್ರತಾ ತಪಾಸಣೆ ವೇಳೆ ಪೊಲೀಸರು ತಡೆದರು. ತಾವು ಭಾರತೀಯ ತಂಡದ ಸದಸ್ಯ ಎಂದು ಹೇಳಿದರೂ ಪೊಲೀಸರು ರಘು ಅವರನ್ನು ಒಳಗೆ ಬಿಡಲಿಲ್ಲ. ಸ್ವಲ್ಪ ಗೊಂದಲದ ನಂತರ ತಮ್ಮ ತಪ್ಪು ಅರಿತ ಪೊಲೀಸರು ರಘು ಅವರನ್ನು ಹೋಟೆಲ್‌ಗೆ ಬಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಮುಂತಾದ ಭಾರತೀಯ ಆಟಗಾರರು ನಾಗ್ಪುರಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ತಂಡ ತಂಗಿರುವ ಹೋಟೆಲ್‌ಗೆ ಬಂದಾಗ ರಘು ಅವರನ್ನು ಪೊಲೀಸರು ತಡೆದರು.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಫೆ.6 ರಂದು ನಾಗ್ಪುರದಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆಯಾದ ಭಾರತ ತಂಡವೇ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಆಡಲಿದೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಹರ್ಷಿತ್ ರಾಣ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡಲಿದ್ದಾರೆ.
'ನಿಮ್ಮ ಮಗುನ ಯಾವಾಗ ಹೀಗೆ ಆಟ ಆಡಿಸೋದು..' ಆಂಕರ್ ಅನುಶ್ರೀಗೆ ಕೇಳಿದ ಫ್ಯಾನ್ಸ್!
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜ.
Viral: SP ಕಚೇರಿ ಎದುರಲ್ಲೇ ಚಹಾ ಅಂಗಡಿ ಹಾಕಿದ ಸಸ್ಪೆಂಡ್ ಆದ ಸಬ್ ಇನ್ಸ್‌ಪೆಕ್ಟರ್!