ಜೀ ಕನ್ನಡದ ಸರಿಗಮಪ ಶೋ ಮೂಲಕ ಜನಪ್ರಿಯರಾದ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಮಗುವಿನೊಂದಿಗಿನ ಇತ್ತೀಚಿನ ರೀಲ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಗಳು, ಅನುಶ್ರೀ ಅವರು ಬೇಗ ಮದುವೆಯಾಗಿ ತಮ್ಮದೇ ಮಗುವಿನೊಂದಿಗೆ ಇಂತಹ ರೀಲ್ಸ್ ಮಾಡುವುದನ್ನು ನೋಡಲು ಕಾತುರರಾಗಿದ್ದಾರೆ.

ಸರಿಗಮಪ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಆಂಕರ್‌ ಅನುಶ್ರೀ ಇತ್ತೀಚೆಗೆ ತಮ್ಮ ಜನ್ಮದಿನವನ್ನು ಜೀ ಕನ್ನಡದ ವೇದಿಕೆಯಲ್ಲಿಯೇ ಆಚರಿಸಿಕೊಂಡಿದ್ದರು. ಇದಕ್ಕೂ ಮುನ್ನ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ತೆರಳಿದ್ದ ಅನುಶ್ರೀ ಅಮೃತಸ್ನಾನವನ್ನೂ ಮುಗಿಸಿ ಬಂದಿದ್ದಾರೆ. ಇನ್ನೊಂದೆಡೆ ಅನುಶ್ರೀ ಅವರ ವೈಯಕ್ತಿಕ ಜೀವನ ಕೂಡ ಸದಾಕಾಲ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಪ್ರತಿ ಬಾರಿ ಅನುಶ್ರೀ ಸೋಶಿಯಲ್‌ ಮೀಡಿಯಾದಲ್ಲಿ ಲೈವ್‌ಗೆ ಬಂದಾಗಲೂ, ಅಥವಾ ಯಾವುದೇ ಹೊಸ ಪೋಸ್ಟ್‌ ಮಾಡಿದ್ರೂ ಜನ ಮೊದಲಿಗೆ ಕೇಳೋದು ಮದುವೆ ಯಾವಾಗ ಅಂತಾ. ಅನುಶ್ರೀ ಪಾಲಿಗೂ ಈ ಪ್ರಶ್ನೆಗಳು ಹೊಸದೇನೂ ಅಲ್ಲ. ಕೆಲವೊಮ್ಮೆ ಉತ್ತರ ನೀಡುವ ಆಕೆ ಇನ್ನೂ ಕೆಲವೊಮ್ಮೆ ಮೌನಕ್ಕೆ ಜಾರುತ್ತಾರೆ. ಮದುವೆಯಾಗುವ ಉದ್ದೇಶ ಇದ್ದರೂ, ತಮ್ಮ ಯೋಚನೆಗೆ ತಕ್ಕ ಹುಡುಗ ಸಿಗುವವರೆಗೂ ಕಾಯುತ್ತೇನೆ ಎನ್ನುವ ಆಲೋಚನೆ ಅವರಲ್ಲಿದೆ.

ಮಂಗಳವಾರ ಇನ್ಸ್‌ಟಾಗ್ರಾಮ್‌ನಲ್ಲಿ ಮಗುವಿನೊಂದಿಗೆ ಇರುವ ರೀಲ್ಸ್ಅನ್ನು ಅನುಶ್ರೀ ಪೋಸ್ಟ್‌ ಮಾಡಿದ್ದಾರೆ. ಇತ್ತೀಚೆಗೆ ಟ್ರೆಂಡಿಂಗ್‌ ಆಗಿರುವ ಅಂಶವನ್ನು ರೀಲ್ಸ್‌ನಲ್ಲಿ ಅವರು ಮಾಡಿದ್ದಾರೆ. 'ಮಗುವಿನ ನಗು ... ಟ್ರೆಂಡಿಂಗ್ ಹಾಡಿಗೆ ಮೆರುಗು..' ಎಂದು ಅವರು ಬರೆದುಕೊಂಡಿದ್ದಾರೆ.

ಚಿಕ್ಕ ಮಗುವಿನಿಂದ ಕೆನ್ನೆಗೆ ಮುತ್ತಿಕ್ಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಕಾಮೆಂಟ್‌ ಮಾಡಿರುವ ಅವರ ಅಭಿಮಾನಿಗಳು, 'ನಿಮ್ಮ ಮಗುನ ಯಾವಾಗ್ ನೀವು ಈ ರೀತಿ ಆಟ ಆಡಿಸೋದು..' ಎಂದು ಬರೆದಿದ್ದಾರೆ.
'ಈ ವರ್ಷದ ಒಳಗೆ, ಇದೇ ಟ್ರೆಂಡ್‌ನ ನಿಮ್ ಹುಡ್ಗನ ಜೊತೆ ಮಾಡೋದ್ನಾ ನಾವೆಲ್ಲಾ ನೊಡ್ಬೇಕು ಅನ್ನೊದೇ ನಮ್ ಆಸೆ ಅನು ಅಕ್ಕ! guys ಏನಂತಿರಾ..' ಎಂದು ಬರೆದಿದ್ದಾರೆ. ನೀವು ಮದುವೆ ಆಗೋದು ಯಾವಾಗ? ನಿಮ್ಮ ಮಗು ಆಗೋದು ಯಾವಾಗ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

ಸುಸ್ತಾಗಿದೆ ರೆಸ್ಟ್‌ ತಗೋ ಅಂತ ಹೇಳೋ ಅಣ್ಣ ಬೇಕಿತ್ತು; ಹುಟ್ಟುಹಬ್ಬದಂದು ಕಣ್ಣೀರಿಟ್ಟ ಅನುಶ್ರೀ

ಅಕ್ಕ ನಿಮಗೆ ಅನಿಸಬಹುದು. ಏನು ಎಲ್ಲಾ ನನ್ನ ಮದುವೆ ಬಗ್ಗೆನೇ ಮಾತಾಡ್ತಾರೆ, ನಮ್ಮ ಅಮ್ಮನೇ ಏನೂ ಹೇಳಲ್ಲ ಇವರೆಲ್ಲ ಯಾರು ನನಗೆ ಮದುವೆ ಆಗು ಅಂತಾ ಹೇಳೋಕೆ ಅಂತಾ ಅನಿಸಬಹುದು. ಆದರೆ, ನಾವೆಲ್ಲಾ ನಿಮ್ಮ ಖುಷಿಯನ್ನ ಬಯಸುತ್ತೇವೆ. ನಿಮಗೆ ಒಳ್ಳೆಯದಾಗಲಿ ಅಕ್ಕ. ನೀವು ಎಷ್ಟು ಕಷ್ಟ ಪಟ್ಟಿದ್ದೀರಾ ಅಂತಾ ನಮಗೆಲ್ಲರಿಗೂ ಗೊತ್ತಿದೆ. ನಿಮಗೆ ಒಳ್ಳೆ ಹುಡುಗ ಸಿಕ್ಕಿ ಬೇಗ ಮದುವೆ ಆಗಲಿ ಅನ್ನೋದೇ ನಮ್ಮ ಆಸೆ. ನಿಮ್ಮ ನಿರೂಪಣೆ ನಿಮಗೆ ಅಷ್ಟೇ ಕೊನೆಯಾಗಬಾರದು. ನಿಮ್ಮ ಮಕ್ಕಳಿಗೂ ಗೊತ್ತಾಗಬೇಕು, ಕರ್ನಾಟಕದಲ್ಲಿ ನಿಮಗಿರೋ ಗತ್ತು. ಹಾಗಾಗಿ ಬೇಗ ಮದುವೆ ಆಗಿ. ಮುಂದೆ ನಿಮ್ಮ ಮಕ್ಕಳನ್ನ ನೋಡಿದಾಗ ನಾವು ಅಂದುಕೊಳ್ಳಬೇಕು. ಓಹ್‌ ಇದು ಅನುಶ್ರೀ ಅವರ ಮಕ್ಕಳು ಅಂತಾ. ಪ್ಲೀಸ್‌ ಕಾಮೆಂಟ್‌ ಓದಿದ್ರೆ ರಿಪ್ಲೈ ಮಾಡಿ ನಿಮಗೆ ಏನ್‌ ಅನ್ಸುತ್ತೆ ಒಂದು ವರ್ಡ್‌ಅಲ್ಲಿ ರಿಪ್ಲೈ ಮಾಡಿದೆ.

ಅನುಪಮಾ ಗೌಡ ಶೋಯಿಂದ ಹೊರ ನಡೆದ ಭವ್ಯಾ ಗೌಡ? ಕಾರಣ ಕೇಳಿ ಎಲ್ಲರೂ ಶಾಕ್

View post on Instagram