ಅಡಿಲೇಡ್‌ ಟೆಸ್ಟ್‌ಗೂ ಮುನ್ನ ಭಾರತದ ಅಭ್ಯಾಸ ವೇಳೆ ಅಭಿಮಾನಿಗಳ ಹುಚ್ಚಾಟ!

ಅಡಿಲೇಡ್‌ನಲ್ಲಿ ಅಭ್ಯಾಸದ ವೇಳೆ ಭಾರತೀಯ ಕ್ರಿಕೆಟಿಗರ ಮೇಲೆ ಅಭಿಮಾನಿಗಳ ಹುಚ್ಚಾಟ ನಡೆದಿದೆ. ಅಭಿಮಾನಿಗಳ ಗದ್ದಲ, ಅನುಚಿತ ವರ್ತನೆಯಿಂದ ಬೇಸತ್ತ ಭಾರತ ತಂಡ ಕ್ರಿಕೆಟ್ ಆಸ್ಟ್ರೇಲಿಯಾ ಬಳಿ ದೂರು ನೀಡಿದೆ. ಇದರಿಂದಾಗಿ ಮುಂದಿನ ಪಂದ್ಯಗಳ ಅಭ್ಯಾಸದ ವೇಳೆ ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Indian Players Harassed and Body Shamed During Practice in Australia Ahead of Adelaide Test kvn

ಅಡಿಲೇಡ್: ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟಿಗರ ಮೇಲೆ ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಕ್ರೇಜ್‌ ಇದೆ. ಭಾರತೀಯರು ಕ್ರೀಡಾಂಗಣದಲ್ಲಿದ್ದಾಗ, ಅಭ್ಯಾಸ ನಿರತರಾಗಿದ್ದಾಗ ಅಥವಾ ಪ್ರಯಾಣದ ವೇಳೆ ಅಭಿಮಾನಿಗಳು ಜೈಕಾರ ಕೂಗುವುದು, ಫೋಟೋಗೆ ಹಾತೊರೆಯುವುದು ಈಗ ಸಾಮಾನ್ಯ ಸಂಗತಿ. ಆದರೆ ಬುಧವಾರ ಇದು ಅತಿರೇಕಕ್ಕೆ ಹೋಗಿದ್ದು, ಹುಚ್ಚಾಟ ನಡೆಸಿದ್ದಾರೆ. 

ಆಸ್ಟ್ರೇಲಿಯಾ ಸರಣಿಯ 2ನೇ ಟೆಸ್ಟ್‌ಗೂ ಮುನ್ನ ಅಡಿಲೇಡ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದಾಗ ಅಭಿಮಾನಿಗಳು ಮನ ಬಂದಂತೆ ವರ್ತಿಸಿದ್ದಾರೆ. ಸುಮಾರು 3,000ಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣ ಬಳಿ ನೆರೆದಿದ್ದು, ಆಟ ಅಭ್ಯಾಸದ ದೃಶ್ಯಗಳನ್ನು ಫೇಸ್‌ಬುಕ್ ಲೈವ್ ಮಾಡುತ್ತಾ, ಜೋರಾಗಿ ಕಿರುಚಾಡುತ್ತಾ ಆಟಗಾರಿಗೆ ತೊಂದರೆ ನೀಡಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಆಟಗಾರರನ್ನು ಹೀಯಾಳಿಸಿ ಅನುಚಿತ ವರ್ತನೆ ತೋರಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಅಭಿಮಾನಿಯೋರ್ವ ಆಟಗಾರನಿಗೆ ಗುಜರಾತಿ ಭಾಷೆಯಲ್ಲಿ ಹಾಯ್ ಹೇಳುವಂತೆ ಪದೇ ಪದೇ ಒತ್ತಾಯಿಸಿದ್ದಾನೆ. ರೋಹಿತ್ ಶರ್ಮಾ, ರಿಷಭ್ ಪಂತ್‌ಗೆ ಸಿಕ್ಸರ್ ಸಿಡಿಸುವಂತೆಯೂ ಬೊಬ್ಬೆ ಹಾಕಿ ತೊಂದರೆ ನೀಡಿದ್ದಾರೆ. ಜೊತೆಗೆ, ಆಟಗಾರರು ಔಟಾದಾಗ ಅಥವಾ ಚೆಂಡು ಬಿಟ್ಟಾಗ ಅಭಿಮಾನಿಗಳು ವ್ಯಂಗ್ಯವಾಡಿದ್ದಾಗಿ ವರದಿಯಾಗಿದೆ.

ICC Champions Trophy: ಪಾಕಿಸ್ತಾನದ ಮರ್ಯಾದೆ ಕಳೆದ ಭಾರತ, ನೆರೆ ರಾಷ್ಟ್ರಕ್ಕೆ ಬಿಸಿಸಿಐ ಮತ್ತೊಂದು ಶಾಕ್!

. 'ಭಾರತದ ಅಭ್ಯಾಸ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿತ್ತು.ಆಸ್ಟ್ರೇಲಿಯಾ ತಂಡ ಅಭ್ಯಾಸ ನಡೆಸುತ್ತಿದ್ದಾಗ ಸುಮಾರು 70ರಷ್ಟು ಮಂದಿ ನೆಟ್ಸ್ ಬಳಿ ಇದ್ದರು. ಆದರೆ ಭಾರತೀಯರು ನೆಟ್‌ ಪ್ರಾಕ್ಟಿಸ್‌ ಮಾಡುತ್ತಿದ್ದಾಗ 3000ಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಇಷ್ಟು ಜನರನ್ನು ನಾವು ನಿರೀಕ್ಷಿಸಲಿರಲಿಲ್ಲ. ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್‌ರನ್ನು ಅಭಿಮಾನಿಗಳು ಸಂಪೂರ್ಣವಾಗಿ ಸುತ್ತುವರಿದಿದ್ದರು. ಆಟಗಾರರನ್ನು ಹೀಯಾಳಿಸಿ ಅನುಚಿತ ವರ್ತನೆ ತೋರಿದ್ದಾರೆ. ಜೋರಾಗಿ ಕಿರುಚಾಡುತ್ತಾ ತೊಂದರೆ ನೀಡಿದ್ದಾರೆ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. 

ತಂಡದಿಂದ ದೂರು: ಅಭಿಮಾನಿಗಳ ಹುಚ್ಚಾಟದಿಂದ ಬೇಸತ್ತ ಭಾರತ ತಂಡದ ಆಟಗಾರರು ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಂದಾಗಿ ತಮ್ಮ ಅಭ್ಯಾಸಕ್ಕೆ ತೊಂದರೆ ಉಂಟಾಗಿದ್ದು, ಏಕಾಗ್ರತೆ ಕಳೆದುಕೊಳ್ಳುವಂತಾಗಿದೆ ಎಂದು ದೂರಿದ್ದಾರೆ.

ಸರ್‌ ಡಾನ್ ಬ್ರಾಡ್ಮನ್‌ ಭಾರತ ವಿರುದ್ದ ಪಂದ್ಯದಲ್ಲಿ ಧರಿಸಿದ್ದ ಬ್ಯಾಗಿ ಗ್ರೀನ್ ₹2.63 ಕೋಟಿಗೆ ಹರಾಜು!

ಭಾರತದಲ್ಲಿ ಟಿ20, ಏಕದಿನ ಪಂದ್ಯಗಳಿದ್ದಾಗ ಮಾತ್ರ ನಮ್ಮ ಅಭ್ಯಾಸಕ್ಕೆ ಅಭಿಮಾನಿಗಳಿಗೆ ಪ್ರವೇಶವಿರುತ್ತವೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಅಭ್ಯಾಸ ವೀಕ್ಷಿಸುತ್ತಿದ್ದರು. ಆದರೆ ಅಡಿಲೇಡ್‌ನ ಅನುಭವ ವಿಭಿನ್ನವಾಗಿತ್ತು. ಅಡಿಲೇಡ್ ಟೆಸ್ಟ್ ವೇಳೆ ಮೊದಲ ದಿನ ಅಥವಾ ಎಲ್ಲಾ ದಿನಗಳಲ್ಲಿ ನಾವು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ನಿರೀಕ್ಷಿಸಬಹುದು. - ಕೆ.ಎಲ್.ರಾಹುಲ್ ಕ್ರಿಕೆಟಿಗ

ಭಾರತದ ಒತ್ತಡಕ್ಕೆ ಮಣಿದ ಕ್ರಿಕೆಟ್ ಆಸ್ಟ್ರೇಲಿಯಾ

ಅಡಿಲೇಡ್‌ನಲ್ಲಿ ಹುಚ್ಚಾಟ ನಡೆಸಿದ್ದಕ್ಕಾಗಿ ಇನ್ನು ಸರಣಿಯ ಯಾವುದೇ ಪಂದ್ಯದ ಅಭ್ಯಾಸದ ವೇಳೆಯೂ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡದಿರಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಕ್ರೀಡಾಂಗಣಕ್ಕೆ ಅಭಿಮಾನಿಗಳಿಗೆ ಪ್ರವೇಶವಿಲ್ಲದೆ ಅಥವಾ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಾಕ್ಟಿಸ್ ನಡೆಸಲು ಟೀಂ ಇಂಡಿಯಾ ಆಟಗಾರರು ನಿರ್ಧರಿಸಿದ್ದಾರೆ. ಅಲ್ಲದೆ, 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸಿಡ್ನಿಯಲ್ಲಿ ನಿಗದಿಯಾಗಿದ್ದ ಫ್ರಾನ್ಸ್‌ ಡೇ ಕಾರ್ಯಕ್ರಮವನ್ನೂ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios