ವಿರಾಟ್ ಕೊಹ್ಲಿ ಆಟೋಗ್ರಾಫ್ ಜೆರ್ಸಿ ಪಡೆದ ಬಾಬರ್ ಅಜಂ; ಉರಿದುಕೊಂಡ ವಾಸೀಂ ಅಕ್ರಂ..!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಕೇವಲ 191 ರನ್‌ಗಳಿಗೆ ಸರ್ವಪತನ ಕಂಡಿತು. ಟೀಂ ಇಂಡಿಯಾ ಪರ ಶಿಸ್ತುಬದ್ದ ದಾಳಿ ನಡೆದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.
ಅಹಮದಾಬಾದ್(ಅ.15): ಬದ್ದ ಎದುರಾಳಿ ಪಾಕಿಸ್ತಾನ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್ ಸುಲಭ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಜಿದ್ದಾಜಿದ್ದಿನ ಪಂದ್ಯವನ್ನು ನಿರೀಕ್ಷಿಸಿದ್ದರು. ಆದರೆ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಹೀನಾಯ ಸೋಲು ಅನುಭವಿಸಿತು.
ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಎಲ್ಲಾ ವಿಭಾಗದಲ್ಲೂ ಸಂಘಟಿತ ಪ್ರದರ್ಶನ ತೋರುವ ಮೂಲಕ ಪಾಕಿಸ್ತಾನ ವಿರುದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಗೆಲುವಿನ ಪರಂಪರೆಯನ್ನು ಮುಂದುವರೆಸಿತು. ಮೊದಲೇ ಭಾರತ ಎದುರು ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನಕ್ಕೆ ನಾಯಕ ಬಾಬರ್ ಅಜಂ ಮಾಡಿದ ಒಂದು ನಡೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಂದ್ಯ ಸೋಲಿನ ಬೆನ್ನಲ್ಲೇ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ಬಳಿ ಹೋಗಿ ಬಾಬರ್ ಅಜಂ, ಅವರ ಆಟೋಗ್ರಾಫ್‌ನ ಜೆರ್ಸಿಯನ್ನು ರಿಕ್ವೆಸ್ಟ್ ಮಾಡಿ ಪಡೆದುಕೊಂಡಿದ್ದು ಪಾಕ್ ಮಾಜಿ ನಾಯಕ ವಾಸೀಂ ಅಕ್ರಂ ಕೆಂಗಣ್ಣಿಗೆ ಗುರಿಯಾಗಿದೆ.
'ನಿಮಗೆ ಗೆಲ್ಲೋಕಂತೂ ಆಗಲ್ಲ, ಕನಿಷ್ಠ..': ಭಾರತ ಎದುರಿನ ಹೀನಾಯ ಸೋಲಿಗೆ ಕಣ್ಣೀರು ಹಾಕಿದ ಪಾಕ್ ಮಾಜಿ ನಾಯಕ..!
ಈ ಕುರಿತಂತೆ ಮಾಧ್ಯಮವೊಂದರಲ್ಲಿ ಮಾತನಾಡಿದ ವಾಸೀಂ ಅಕ್ರಂ, "ಸಾರ್ವಜನಿಕವಾಗಿ ಜೆರ್ಸಿಯನ್ನು ಪಡೆದುಕೊಂಡ ವಿಡಿಯೋವನ್ನು ನಾನು ನೋಡಿದೆ. ಅದನ್ನು ಮಾಡಲು ಇದು ಒಳ್ಳೆಯ ಸಮಯವಾಗಿರಲಿಲ್ಲ. ಒಂದು ವೇಳೆ ನಿಮಗೆ ಹಾಗೆ ಮಾಡಲೇಬೇಕು ಎಂದಿದ್ದರೆ, ನಿಮ್ಮ ಅಂಕಲ್ ಮಗನಿಗೆ ವಿರಾಟ್ ಕೊಹ್ಲಿಯ ಜೆರ್ಸಿ ಬೇಕಿದ್ದರೆ, ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಂಗೆ ಹೋಗಿ ಪಡೆದುಕೊಳ್ಳಬಹುದಿತ್ತು. ಅದನ್ನು ಬಿಟ್ಟು ಹೀಗೆ ಸಾರ್ವಜನಿಕವಾಗಿ ಕೊಹ್ಲಿಯಿಂದ ಜೆರ್ಸಿ ಪಡೆದದ್ದು ಸರಿಯಲ್ಲ" ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಕೇವಲ 191 ರನ್‌ಗಳಿಗೆ ಸರ್ವಪತನ ಕಂಡಿತು. ಟೀಂ ಇಂಡಿಯಾ ಪರ ಶಿಸ್ತುಬದ್ದ ದಾಳಿ ನಡೆದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.
World Cup 2023: 'ಜಯ್ ಶಾ' ಹೆಸರಿನ ವ್ಯಕ್ತಿಯಿಂದ ಟಿಕೆಟ್ ವಂಚನೆ..! ಮೋಸಗಾರ ಆರೆಸ್ಟ್..!
ಈ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ 19.5 ಓವರ್ ಬಾಕಿ ಇರುವಂತೆಯೇ 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಸ್ಪೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.