Asianet Suvarna News Asianet Suvarna News

ಟೀಮ್‌ ಇಂಡಿಯಾ ಕ್ರಿಕೆಟಿಗನ ತಂದೆ ನಾಪತ್ತೆ, ಪೊಲೀಸರಿಗೆ ದೂರು!

ಭಾರತೀಯ ಕ್ರಿಕೆಟಿಗನೊಬ್ಬರ ತಂದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕ್ರಿಕೆಟಿಗ ದೂರು ಕೂಡ ದಾಖಲು ಮಾಡಿದ್ದಾರೆ. ಕೇದಾರ್ ಜಾಧವ್ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರೋಡ್ ಪ್ರದೇಶದ ನಿವಾಸಿಗಳು. ಕೇದಾರ್ ಜಾಧವ್ 2020 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದು, ಆ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ.

Indian cricketer Kedar Jadhav Father Missing player made this appeal san
Author
First Published Mar 27, 2023, 11:30 PM IST

ಮುಂಬೈ (ಮಾ.27):ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೇದಾರ್ ಜಾಧವ್ ಅವರ ತಂದೆ ಮಹದೇವ್ ಸೋಪಾನ್ ಜಾಧವ್ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕ್ರಿಕೆಟಿಗ ಮಾರ್ಚ್ 27 ರಂದು (ಸೋಮವಾರ) ಪುಣೆ ನಗರದ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಕೇದಾರ್ ಜಾಧವ್ ವರದಿ ಸಲ್ಲಿಸಿದ ನಂತರ, ಪೊಲೀಸರು ಆತನ 75 ವರ್ಷದ ಅವರ ತಂದೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಾಪತ್ತೆಯಾದ ವರದಿಯ ಪ್ರಕಾರ, ಕೇದಾರ್ ಜಾಧವ್ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರೋಡ್ ಪ್ರದೇಶದ ನಿವಾಸಿಗಳು. ಮಹದೇವ್ ಜಾಧವ್ ಮಾರ್ಚ್ 27 ರಂದು ಮುಂಜಾನಾ ಯಾರಿಗೂ ಮಾಹಿತಿ ನೀಡದೇ ಮನೆಯಿಂದ ಹೊರಹೋಗಿದ್ದಾರೆ. ಆ ಬಳಿಕ ಮನೆಗೆ ವಾಪಸಾಗಿಲ್ಲ. ಮಾಹಿತಿಯ ಪ್ರಕಾರ, ಮಹದೇವ್‌ ಜಾಧವ್‌ 5 ಅಡಿ 6 ಇಂಚು ಎತ್ತರವಿದ್ದಾರೆ. ಅವರ ಮುಖದ ಎಡಭಾಗದಲ್ಲಿ ಶಸ್ತ್ರಚಿಕಿತ್ಸೆಯ ಗುರುತು ಇದೆ. ನಾಪತ್ತೆಯಾಗುವ ಸಮಯದಲ್ಲಿ ಬಿಳಿ ಅಂಗಿ, ಬೂದು ಬಣ್ಣದ ಪ್ಯಾಂಟ್‌, ಕಪ್ಪು ಚಪ್ಪಲಿ ಹಾಗೂ ಸ್ವೆಟರ್‌ ರೀತಿಯ ಬಟ್ಟೆಯನ್ನು ಧರಿಸಿದ್ದರು ಎಂದು ತಿಳಿಸಲಾಗಿದೆ.

ಮಹದೇವ್ ಜಾಧವ್ ಮರಾಠಿ ಮಾತನಾಡುತ್ತಾರೆ ಮತ್ತು ಅವರು ತಮ್ಮ ಬಲಗೈ ಬೆರಳುಗಳಲ್ಲಿ ಎರಡು ಚಿನ್ನದ ಉಂಗುರಗಳನ್ನು ಧರಿಸಿದ್ದರು ಎಂದು ಹೇಳಲಾಗುತ್ತದೆ. ಅವರ ಬಳಿ ಯಾವುದೇ ಮೊಬೈಲ್‌ ಫೋನ್‌ಗಳಿಲ್ಲ.  38 ವರ್ಷದ ಕೇದಾರ್ ಜಾಧವ್ ಅವರು ತಮ್ಮ ತಂದೆಯ ಫೋಟೋ ಮತ್ತು ಫೋನ್ ಸಂಖ್ಯೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಅಲ್ಲಿಯೂ ಕೆಲ ವಿವರಗಳನ್ನು ನೀಡಿದ್ದಾರೆ.

Indian cricketer Kedar Jadhav Father Missing player made this appeal san

ಐಪಿಎಲ್‌ ಮಾದರಿಯಲ್ಲಿ ದೇಶದಲ್ಲಿ ಆರಂಭವಾಗಲಿದೆ ಟೇಕ್ವಾಂಡೋ ಲೀಗ್‌!

ಅಲಂಕಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಸಹನೆ ನೇತೃತ್ವದ ತಂಡ ಮಹದೇವ್ ಜಾಧವ್‌ಗಾಗಿ ಹುಡುಕಾಟ ಆರಂಭಿಸಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ಖಚಿತಪಡಿಸಿದ್ದಾರೆ. ಮಹದೇವ್ ಜಾಧವ್ ಬಗ್ಗೆ ಯಾವುದೇ ರೀತಿಯ ಮಾಹಿತಿ ದೊರೆತಲ್ಲಿ ಅವರು ತಕ್ಷಣ ಪುಣೆ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಹಿರಿಯ ಅಧಿಕಾರಿ ಜನರಿಗೆ ಮನವಿ ಮಾಡಿದ್ದಾರೆ.

BCCI Central Contract: ಮುಗಿಯಿತಾ ಟೀಂ ಇಂಡಿಯಾದ ಈ 7 ಕ್ರಿಕೆಟಿಗರ ವೃತ್ತಿಬದುಕು..?

2014ರಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಕೇದಾರ್‌ ಜಾಧವ್‌ ಈವರೆಗೂ ಟೀಮ್‌ ಇಂಡಿಯಾ ಪರವಾಗಿ 73 ಏಕದಿನ ಪಂದ್ಯಗಳನ್ನು ಆಡಿದ್ದು, 42.09ರ ಸರಾಸರಿಯಲ್ಲಿ 1389 ರನ್‌ ಬಾರಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್‌ ರೇಟ್‌ 101.60 ಆಗಿದೆ. ಕೇದಾರ್‌ ಜಾದವ್‌ 2 ಶತಕ ಹಾಗೂ 6 ಅರ್ಧಶತಕಗಳನ್ನು ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ್ದಾರೆ.

ತಮ್ಮ ಸ್ಪಿನ್‌ ಬೌಲಿಂಗ್‌ ಮೂಲಕವೂ ಮ್ಯಾಜಿಕ್‌ ಮಾಡಿರುವ ಅವರು ಈವರೆಗೂ 27 ವಿಕೆಟ್‌ ಉರುಳಿಸಿದ್ದಾರೆ. 2015ರಲ್ಲಿ ಜಿಂಬಾಬ್ವೆ ವಿರುದ್ಧ ಆಡುವ ಮೂಲಕ ಅವರ ಅಂತಾರಾಷ್ಟ್ರೀಯ ಟಿ20 ಜೀವನ ಆರಂಭವಾಗಿತ್ತು. ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಕೇದಾರ್ ಜಾಧವ್ 20.33ರ ಸರಾಸರಿಯಲ್ಲಿ 122 ರನ್ ಗಳಿಸಿದ್ದರು. ಕೇದಾರ್ ತನ್ನ ಕೊನೆಯ ಪಂದ್ಯವನ್ನು ಫೆಬ್ರವರಿ 2020 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು.
 

Follow Us:
Download App:
  • android
  • ios