Asianet Suvarna News Asianet Suvarna News

ಟೀಂ ಇಂಡಿಯಾಗೆ ಹೊರೆಯಾದ ಸ್ಟಾರ್ ಕ್ರಿಕೆಟರ್..! ಗ್ರೂಪ್ ಹಂತದಲ್ಲಿ ಈತನ ಸಾಧನೆ ಶೂನ್ಯ..! ಆದ್ರೆ ಈತ ಕೊಹ್ಲಿಯಲ್ಲ

20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಹಲವು ಆಟಗಾರರು ಒಂದರಲ್ಲಿ ಫೇಲಾದ್ರೆ, ಮತ್ತೊಂದರಲ್ಲಿ ಮಿಂಚುತ್ತಿದ್ದಾರೆ. ರವೀಂದ್ರ ಜಡೇಜಾ ರಿಂದ ಮಾತ್ರ ತಂಡಕ್ಕೆ ಯಾವುದೇ ಲಾಭವಾಗಿಲ್ಲ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಮೂರರಲ್ಲೂ ಜಡ್ಡು ಫೇಲ್ ಆಗಿದ್ದಾರೆ.

India wait for Ravindra Jadeja to kick into high gear in T20 World Cup 2024 kvn
Author
First Published Jun 17, 2024, 12:57 PM IST

ನ್ಯೂಯಾರ್ಕ್‌: ಟಿ20 ವಿಶ್ವಕಪ್ ದಂಗಲ್‌ನಲ್ಲಿ ಟೀಂ ಇಂಡಿಯಾದ ಹಲವು ಆಟಗಾರರು ಒಂದರಲ್ಲಿ ಫೇಲಾದ್ರೆ, ಮತ್ತೊಂದರಲ್ಲಿ ಮಿಂಚುತ್ತಿದ್ದಾರೆ. ಆದ್ರೆ, ಈ  ಒಬ್ಬ  ಆಟಗಾರ ಮಾತ್ರ ಕಂಪ್ಲೀಟ್ ಸೈಲೆಂಟಾಗಿದ್ದಾನೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಮೂರರಲ್ಲೂ ಶೂನ್ಯ ಸುತ್ತಿದ್ದಾನೆ. ಯಾರು ಆಟಗಾರ ಅಂತೀರಾ..? ಈ ಸ್ಟೋರಿ ನೋಡಿ.

ಎಲ್ಲಾ ವಿಭಾಗಗಳಲ್ಲೂ ಆಲ್ರೌಂಡರ್ ಬಿಗ್ ಝೀರೋ..! 

ಪ್ರಸಕ್ತ ಟಿ20 ವಿಶ್ವಕಪ್ ಸಮರದಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆ ಮೂಲಕ ಸೂಪರ್ 8ರ ಘಟ್ಟಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಆದ್ರೆ, ಈ  ಸತತ ಗೆಲುವುಗಳ ನಡುವೆಯೂ ಹಲವು ಸಮಸ್ಯೆಗಳು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ರನ್ನು ಕಾಡುತ್ತಿವೆ. ಅದರಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾರ ಅಟ್ಟರ್ ಫ್ಲಾಫ್ ಶೋ ಕೂಡ ಒಂದು.

ಯೆಸ್, ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಹಲವು ಆಟಗಾರರು ಒಂದರಲ್ಲಿ ಫೇಲಾದ್ರೆ, ಮತ್ತೊಂದರಲ್ಲಿ ಮಿಂಚುತ್ತಿದ್ದಾರೆ. ರವೀಂದ್ರ ಜಡೇಜಾ ರಿಂದ ಮಾತ್ರ ತಂಡಕ್ಕೆ ಯಾವುದೇ ಲಾಭವಾಗಿಲ್ಲ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಮೂರರಲ್ಲೂ ಜಡ್ಡು ಫೇಲ್ ಆಗಿದ್ದಾರೆ. ಮೆಗಾ ಟೂರ್ನಿಯಲ್ಲಿ ಜಡೇಜಾ, ಅಬ್ಬರಿಸ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದ್ರೀಗ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿದೆ. ರೋಹಿತ್ ಪಡೆ ಗ್ರೂಪ್  ಸ್ಟೇಜ್ನಲ್ಲಿ ಗೆದ್ದ ಪಂದ್ಯಗಳಲ್ಲಿ  ಜಡೇಜಾರದ್ದು, ಝೀರೋ ಕಾಂಟ್ರಿಬ್ಯೂಷನ್ ಆಗಿದೆ.  

ಕೊನೆಗೂ ಗಂಭೀರ್ ಆ 'ಡಿಮ್ಯಾಂಡ್' ಒಪ್ಪಿಕೊಂಡ ಬಿಸಿಸಿಐ..! ಟೀಂ ಇಂಡಿಯಾ ಹೆಡ್‌ ಕೋಚ್ ಘೋಷಣೆಗೆ ಕ್ಷಣಗಣನೆ

3 ಪಂದ್ಯಗಳಾಡಿದ್ರು ಒಂದು ರನ್ ಇಲ್ಲ, ಒಂದು ವಿಕೆಟ್ ಇಲ್ಲ..!

ಟಿ20 ಸಮರದಲ್ಲಿ ಜಡೇಜಾರದ್ದು ನಿಜಕ್ಕೂ ಶೂನ್ಯ ಸಾಧನೆ.ಗ್ರೂಪ್ ಸ್ಟೇಜ್ನಲ್ಲಿ ಆಡಿದ 3 ಪಂದ್ಯಗಳಿಂದ ಈತ ಒಂದೇ ಒಂದು ವಿಕೆಟ್ ಉರುಳಿಸಿಲ್ಲ. ಒಂದೇ ಒಂದು ರನ್ ಕೂಡ ಗಳಿಸಿಲ್ಲ. ಸಂಕಷ್ಟದಲ್ಲಿ ತಂಡದ ಕೈಹಿಡಿದಿಲ್ಲ. ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಜಡೇಜಾ ಟೀಮ್ ಇಂಡಿಯಾಗೆ ಕೈಕೊಟ್ರು. ಅಂದು 96 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ತಂಡ ಡೇಂಜರ್ ಝೋನ್ ತಲುಪಿತ್ತು. ಈ ವೇಳೆ ಕ್ರೀಸ್ಗಿಳಿದ ಬರೋಡಾ ಸ್ಟಾರ್, ಮೊದಲ ಎಸೆತದಲ್ಲೇ ಜಡೇಜಾ ಔಟಾಗಿ ನಿರಾಸೆ ಮೂಡಿಸಿದ್ರು. 

ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಸತತ ವೈಫಲ್ಯ,.! 

ಯೆಸ್, ಕಳೆದ ಕೆಲವರ್ಷಗಳಿಂದ ಜಡೇಜಾ ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇನ್ನು ಟಿ20 ವಿಶ್ವಕಪ್ನಲ್ಲಿ ಅವ್ರ ಸಾಧನೆ ತೀರಾ ಕಳಪೆಯಾಗಿದೆ. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳೇ ಸಾಕ್ಷಿಯಾಗಿದೆ. 

ಹೌದು, ಟಿ20 ವಿಶ್ವಕಪ್‌ನಲ್ಲಿ ಈವರೆಗು ಆಡಿದ 25 ಪಂದ್ಯಗಳ ಪೈಕಿ 10 ಇನ್ನಿಂಗ್ಸ್‌ಗಳಲ್ಲಿ ಜಡೇಜಾ ಬ್ಯಾಟ್ ಬೀಸಿದ್ದಾರೆ. ಆದ್ರೆ, ಗಳಿಸಿರೋದು 95 ಮಾತ್ರ. ಅದು ಕೂಡ 95.95ರ ಕಳಪೆ ಸ್ಟ್ರೈಕ್ರೇಟ್ನಲ್ಲಿ. 

ಈ ಹಿಂದಿನ ವಿಶ್ವಕಪ್ಗಳಲ್ಲಿ ಜಡೇಜಾ ಬೌಲಿಂಗ್ನಲ್ಲಾದ್ರೂ ಮಿಂಚುತ್ತಿದ್ರು. ಆದ್ರೆ, ಈ ಸಲ ಬೌಲಿಂಗ್ನಲ್ಲೂ ಕಂಪ್ಲೀಟ್ ಫೇಲ್ ಆಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ಆದ್ರೆ, ಮತ್ತೊಂದೆಡೆ ಮತ್ತೊಬ್ಬ ಎಡಗೈ ಸ್ಪಿನ್ ಆಲ್ರೌಂಡ್ ಆಕ್ಷರ್ ಮಾತ್ರ, ಚಾನ್ಸ್ ಸಿಕ್ಕಾಗೆಲ್ಲ ವಿಕೆಟ್ ಬೇಟೆಯಾಡ್ತಿದ್ದಾರೆ. 

ಸೂಪರ್ 8 ಮ್ಯಾಚ್ಗಳಲ್ಲಿ ಅಬ್ಬರಿಸ್ತಾರಾ ಜಡ್ಡು..? 

ನ್ಯೂಯಾರ್ಕ್‌ನ ಪಿಚ್ನಲ್ಲಿ ತಂಡದ ಮೇನ್ ಬ್ಯಾಟರ್ಸ್‌ ವಿಫಲರಾಗಿದ್ರು. ಅಂತದ್ರಲ್ಲಿ ಜಡೇಜಾ ವಿಫಲರಾಗಿದ್ದು ದೊಡ್ಡ ಸಂಗತಿಯೇನಲ್ಲ. ಆದ್ರೆ,  ಸೂಪರ್-8 ಮ್ಯಾಚ್ಗಳಲ್ಲಾದರು ಜಡೇಜಾ, ಮಿಂಚಬೇಕಿದೆ. ಇಲ್ಲದಿದ್ರೆ ಟೀಂ ಇಂಡಿಯಾಗೆ ಸಂಕಷ್ಟ ತಪ್ಪಿದ್ದಲ್ಲ. 

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

Latest Videos
Follow Us:
Download App:
  • android
  • ios