Asianet Suvarna News Asianet Suvarna News

Ind vs Zim: ಇಂದಿನಿಂದ ಭಾರತ-ಜಿಂಬಾಬ್ವೆ ಏಕದಿನ ಕದನ

* ಭಾರತ-ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ
* ಸಾಕಷ್ಟು ಬಿಡುವಿನ ಬಳಿಕ ಟೀಂ ಇಂಡಿಯಾ ಕೂಡಿಕೊಂಡಿರುವ ಕೆ ಎಲ್ ರಾಹುಲ್
* ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ ಟೀಂ ಇಂಡಿಯಾ

India vs Zimbabwe KL Rahul led Team India take on Zimbabwe in 1st ODI in Harare kvn
Author
Bengaluru, First Published Aug 18, 2022, 10:33 AM IST

ಹರಾರೆ(ಆ.18): ಸುದೀರ್ಘ ಅವಧಿಯ ಬಳಿಕ ಭಾರತ ತಂಡಕ್ಕೆ ಮರಳಿರುವ ಕನ್ನಡಿಗ ಕೆ.ಎಲ್‌.ರಾಹುಲ್‌ಗೆ ಲಯ ಹಾಗೂ ಫಿಟ್ನೆಸ್‌ ಸಾಬೀತುಪಡಿಸುವ ಸವಾಲು ಎದುರಾಗಿದ್ದು, ಗುರುವಾರದಿಂದ ಆರಂಭವಾಗಲಿರುವ ಜಿಂಜಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಅವರು ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಸರಣಿಯ ಎಲ್ಲಾ ಪಂದ್ಯಗಳಿಗೂ ಹರಾರೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

2022ರ ಐಪಿಎಲ್‌ ಬಳಿಕ ಗಾಯಗೊಂಡು, ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ರಾಹುಲ್‌ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಲು ಈ ಸರಣಿ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೇ ಹಲವು ನಾಯಕರ ಮಧ್ಯೆ ನಾಯಕತ್ವದ ಅಗ್ನಿಪರೀಕ್ಷೆಗೂ ಅವರು ಒಳಗಾಗಲಿದ್ದಾರೆ. ಈ ಸರಣಿಯಲ್ಲಿ ಅವರು ಶಿಖರ್‌ ಧವನ್‌ ಜೊತೆ ಆರಂಭಿಕನಾಗಿ ಕಣಕ್ಕಿಳಿಲಿದ್ದಾರೆ. 

ಋುತುರಾಜ್‌ ಗಾಯಕ್ವಾಡ್‌, ಶುಭ್‌ಮನ್‌ ಗಿಲ್‌ ಜೊತೆ ರಾಹುಲ್‌ ತ್ರಿಪಾಠಿ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದು, ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಲು ಹೋರಾಡಬೇಕಿದೆ. ಅಕ್ಷರ್‌ ಪಟೇಲ್‌ ಆಲ್ರೌಂಡ್‌ ಹೊಣೆ ನಿಭಾಯಿಸಲಿದ್ದು, ಸ್ಪಿನ್ನರ್‌ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌ ಹಾಗೂ ಮೊದಲ ಬಾರಿ ತಂಡಕ್ಕೆ ಆಯ್ಕೆಯಾಗಿರುವ ಶಾಬಾಜ್‌ ಅಹ್ಮದ್‌ ನಡುವೆ ಪೈಪೋಟಿ ಇದೆ. ಕನ್ನಡಿಗ ಪ್ರಸಿದ್‌್ಧ ಕೃಷ್ಣ, ಮೊಹಮದ್‌ ಸಿರಾಜ್‌, ದೀಪಕ್‌ ಚಹರ್‌, ಆವೇಶ್‌ ಖಾನ್‌ ವೇಗ ಬೌಲಿಂಗ್‌ಗೆ ಬಲ ಒದಗಿಸಲಿದ್ದಾರೆ.

Ind vs Zim ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ: ಸಂಜು ಸ್ಯಾಮ್ಸನ್‌ಗೆ ಸಿಗುತ್ತಾ ಸ್ಥಾನ..?

ಇನ್ನು, ತವರಿನಲ್ಲಿ ಜಿಂಬಾಬ್ವೆ ತಂಡ ಇತ್ತೀಚೆಗಷ್ಟೇ ಬಾಂಗ್ಲಾದೇಶವನ್ನು ಮಣಿಸಿದ್ದು, ತುಂಬು ಆತ್ಮವಿಶ್ವಾಸದಲ್ಲಿದೆ. 3 ಪಂದ್ಯಗಳಲ್ಲಿ ಎರಡು ಬಾರಿ 290+ ರನ್‌ ಗುರಿ ಬೆನ್ನತ್ತಿ ಗೆದ್ದಿರುವ ಜಿಂಬಾಬ್ವೆಗೆ ಮತ್ತೊಮ್ಮೆ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯ ಪ್ರದರ್ಶಿಸುವ ಅವಕಾಶವಿದೆ. ಎಲ್ಲಾ ಮಾದರಿಯಲ್ಲೂ ಬಲಿಷ್ಠವಾಗಿ ತೋರುತ್ತಿರುವ ಭಾರತಕ್ಕೆ ಆತಿಥೇಯರು ಆಘಾತ ನೀಡಿದರೂ ಅಚ್ಚರಿಯಿಲ್ಲ.

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 63 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಪ್ರವಾಸಿ ಟೀಂ ಇಂಡಿಯಾ ಸಹಜವಾಗಿಯೇ ಸ್ಪಷ್ಟ ಮೇಲುಗೈ ಸಾಧಿಸಿದೆ. 63 ಪಂದ್ಯಗಳ ಪೈಕಿ ಭಾರತ ಕ್ರಿಕೆಟ್ ತಂಡವು 51 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, ಜಿಂಬಾಬ್ವೆ ತಂಡವು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 2 ಪಂದ್ಯಗಳು ಟೈ ಆಗಿದ್ದವು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕೆ ಎಲ್ ರಾಹುಲ್‌(ನಾಯಕ), ಶಿಖರ್ ಧವನ್‌, ಶುಭ್‌ಮನ್‌ ಗಿಲ್‌, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಸಂಜು ಸ್ಯಾಮ್ಸನ್‌, ಅಕ್ಷರ್‌ ಪಟೇಲ್, ದೀಪಕ್‌ ಚಹಾರ್, ಕುಲ್ದೀಪ್‌ ಯಾದವ್,  ಪ್ರಸಿದ್‌್ಧ ಕೃಷ್ಣ, ಮೊಹಮ್ಮದ್ ಸಿರಾಜ್‌

ಜಿಂಬಾಬ್ವೆ: ರೆಗಿಸ್‌ ಚಕಬ್ವಾ(ನಾಯಕ), ಚಿವಂಗ, ಇನೊಸೆಂಟ್‌, ವೆಸ್ಲಿ, ರಜಾ, ಜೊಂಗ್ವಿ, ಶುಂಭಾ, ರಾರ‍ಯನ್‌ ಬಲ್‌ರ್‍, ವಿಕ್ಟರ್‌, ರಿಚರ್ಡ್‌, ಮಸಕಜ

ಸ್ಥಳ: ಹರಾರೆ
ಸಮಯ: ಮಧ್ಯಾಹ್ನ 12.45ಕ್ಕೆ
ನೇರಪ್ರಸಾರ: ಸೋನಿ

Follow Us:
Download App:
  • android
  • ios