Ind vs Zim ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ: ಸಂಜು ಸ್ಯಾಮ್ಸನ್‌ಗೆ ಸಿಗುತ್ತಾ ಸ್ಥಾನ..?
ಹರಾರೆ: ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆ ಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ, ಹಲವು ತಾರಾ ಆಟಗಾರರ ಅನುಪಸ್ಥಿತಿಯಲ್ಲಿಯೂ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದೆ. ಜಿಂಬಾಬ್ವೆ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ...
1. ಕೆ ಎಲ್ ರಾಹುಲ್: ಸಾಕಷ್ಟು ಗಾಯದ ಸಮಸ್ಯೆ ಬಳಿಕ ಫಿಟ್ನೆಸ್ ಸಾಧಿಸಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕನಾಗಿ ಹಾಗೂ ಆರಂಭಿಕನಾಗಿ ಯಶಸ್ಸು ಸಾಧಿಸಲು ರೆಡಿಯಾಗಿದ್ದಾರೆ.
2. ಶಿಖರ್ ಧವನ್: ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಏಕದಿನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದು, ರಾಹುಲ್ ಜತೆ ಭರ್ಜರಿ ಇನಿಂಗ್ಸ್ ಆರಂಭಿಸಲು ಗಬ್ಬರ್ ಸಿಂಗ್ ಎದುರು ನೋಡುತ್ತಿದ್ದಾರೆ.
3. ಶುಭ್‌ಮನ್ ಗಿಲ್: ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಬಲಗೈ ಅಗ್ರಕ್ರಮಾಂಕದ ಬ್ಯಾಟರ್ ಗಿಲ್, ಜಿಂಬಾಬ್ವೆ ಎದುರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
4. ದೀಪಕ್ ಹೂಡಾ: ಐಪಿಎಲ್ ಬಳಿಕ ಟೀಂ ಇಂಡಿಯಾಗೆ ಭರ್ಜರಿ ಎಂಟ್ರಿಕೊಟ್ಟಿರುವ ದೀಪಕ್ ಹೂಡಾ ಒಳ್ಳೆಯ ಫಾರ್ಮ್‌ನಲ್ಲಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಡುತ್ತಿದ್ದಾರೆ. ಹೂಡಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ.
Sanju Samson
5. ಸಂಜು ಸ್ಯಾಮ್ಸನ್: ಕೇರಳ ಮೂಲದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ವಿಂಡೀಸ್ ಎದುರು ಸಾಧಾರಣ ಪ್ರದರ್ಶನ ತೋರಿದ್ದು, ಜಿಂಬಾಬ್ವೆ ಎದುರು ಮೊದಲ ಪಂದ್ಯದಲ್ಲಿ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
Image credit: Getty
6. ಶಾರ್ದೂಲ್ ಠಾಕೂರ್: ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್ ಆಲ್ರೌಂಡರ್ ರೂಪದಲ್ಲಿ ತಂಡಕ್ಕೆ ಆಸರೆಯಾಗುವ ಸಾಧ್ಯತೆಯಿದ್ದು, ಬಹುತೇಕ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
7. ಅಕ್ಷರ್ ಪಟೇಲ್: ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್, ಟೀಂ ಇಂಡಿಯಾಗೆ ಮತ್ತೋರ್ವ ಉಪಯುಕ್ತ ಆಲ್ರೌಂಡ್ ಆಯ್ಕೆಯಾಗಬಲ್ಲರು. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚುವ ಕ್ಷಮತೆ ಅಕ್ಷರ್ ಪಟೇಲ್‌ಗಿದೆ.
8. ದೀಪಕ್ ಚಹರ್: ಕೆ ಎಲ್ ರಾಹುಲ್ ಅವರಂತೆಯೇ ದೀರ್ಘಕಾಲದ ಬಿಡುವಿನ ಬಳಿಕ ವೇಗಿ ದೀಪಕ್ ಚಹರ್ ಭಾರತ ತಂಡ ಕೂಡಿಕೊಂಡಿದ್ದು, ಜಿಂಬಾಬ್ವೆ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಕಮ್‌ಬ್ಯಾಕ್ ಮಾಡಲು ಕಾತರರಾಗಿದ್ದಾರೆ.
9. ಕುಲ್ದೀಪ್ ಯಾದವ್: ಕಳೆದ ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್ ತಂಡದ ಪರ ಏಕದಿನ ಪಂದ್ಯವನ್ನಾಡಿದ್ದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್, ತಜ್ಞ ಸ್ಪಿನ್ನರ್ ಆಗಿ ಜಿಂಬಾಬ್ವೆ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ
Image credit: Getty
10. ಮೊಹಮ್ಮದ್ ಸಿರಾಜ್: ಭುವನೇಶ್ವರ್ ಕುಮಾರ್ , ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್, ಟೀಂ ಇಂಡಿಯಾ ವೇಗದ ದಾಳಿಯ ಪಡೆಯನ್ನು ಮುನ್ನಡೆಸಲಿದ್ದಾರೆ. ಸಿರಾಜ್, ಜಿಂಬಾಬ್ವೆ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
11. ಪ್ರಸಿದ್ದ್ ಕೃಷ್ಣ: ಕರ್ನಾಟಕದ ನೀಳಕಾಯದ ವೇಗಿ ಮೊಹಮ್ಮದ್ ಸಿರಾಜ್, ವಿಂಡೀಸ್ ಎದುರಿನ ಸರಣಿಯಲ್ಲಿ ಸಾಧಾರಣ ಪ್ರದರ್ಶನ ತೋರಿದ್ದರು. ಸಾಕಷ್ಟು ವೇಗದ ಬೌಲಿಂಗ್ ಮಾಡುವ ಕ್ಷಮತೆ ಹೊಂದಿರುವ ಪ್ರಸಿದ್ದ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.