ಭಾರತ-ಪಾಕ್ ವಿಶ್ವಕಪ್ ಟಿಕೆಟ್ ಮಾರಾಟ ಇಂದು: ಬೆಂಗ್ಳೂರು ಪಂದ್ಯದ ಟಿಕೆಟ್ ಸೋಲ್ಡೌಟ್!
ಭಾರತ-ಪಾಕ್ ಪಂದ್ಯದ ಟಿಕೆಟ್‌ಗೂ ಭಾರೀ ಬೇಡಿಕೆ ಏರ್ಪಡಲಿದ್ದು, ಮಾರಾಟ ಶುರುವಾದ ಕೆಲವೇ ನಿಮಿಷಗಳಲ್ಲೇ ಸಂಪೂರ್ಣ ಮಾರಾಟವಾಗುವ ನಿರೀಕ್ಷೆ ಇದೆ. ಇನ್ನು, ಭಾರತ ಹೊರತುಪಡಿಸಿ ಇತರ ತಂಡಗಳ ಪಂದ್ಯಗಳ ಟಿಕೆಟ್‌ಗಳೂ ಕೂಡಾ ಈಗಾಗಲೇ ಬಹುತೇಕ ಮಾರಾಟಗೊಂಡಿವೆ.
ಅಹಮದಾಬಾದ್(ಸೆ.03): ಭಾರತ ಹಾಗೂ ಪಾಕಿಸ್ತಾನ ನಡುವೆ ಅ.14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನ ಬಹುನಿರೀಕ್ಷಿತ ಪಂದ್ಯದ ಟಿಕೆಟ್ ಮಾರಾಟ ಭಾನುವಾರ ಆರಂಭವಾಗಲಿದೆ. ಈಗಾಗಲೇ ಅಹಮದಾಬಾದ್ ಹೊರತುಪಡಿಸಿ ಉಳಿದೆಲ್ಲಾ ಕ್ರೀಡಾಂಗಣಗಳಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್ ಮಾರಾಟ ಶುರುವಾಗಿದ್ದು, ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.
ಭಾರತ-ಪಾಕ್ ಪಂದ್ಯದ ಟಿಕೆಟ್‌ಗೂ ಭಾರೀ ಬೇಡಿಕೆ ಏರ್ಪಡಲಿದ್ದು, ಮಾರಾಟ ಶುರುವಾದ ಕೆಲವೇ ನಿಮಿಷಗಳಲ್ಲೇ ಸಂಪೂರ್ಣ ಮಾರಾಟವಾಗುವ ನಿರೀಕ್ಷೆ ಇದೆ. ಇನ್ನು, ಭಾರತ ಹೊರತುಪಡಿಸಿ ಇತರ ತಂಡಗಳ ಪಂದ್ಯಗಳ ಟಿಕೆಟ್‌ಗಳೂ ಕೂಡಾ ಈಗಾಗಲೇ ಬಹುತೇಕ ಮಾರಾಟಗೊಂಡಿವೆ.
ಬೆಂಗ್ಳೂರು ಪಂದ್ಯದ ಟಿಕೆಟ್ ಸೋಲ್ಡೌಟ್!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ.12ಕ್ಕೆ ನಡೆಯಬೇಕಿರುವ ಭಾರತ ಹಾಗೂ ನೆದರ್‌ಲೆಂಡ್ಸ್ ನಡುವಿನ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಶನಿವಾರ ಸಂಜೆ ವೇಳೆಗೆ ಟಿಕೆಟ್‌ಗಳನ್ನು ಮಾರಾಟಕ್ಕಿಟ್ಟರೂ ಕೆಲ ಗಂಟೆಗಳಲ್ಲೇ ಖಾಲಿಯಾದವು. ಬೆಂಗಳೂರಿನಲ್ಲಿ ನಿಗದಿಯಾಗಿರುವ ಇನ್ನೂ 4 ಪಂದ್ಯಗಳ ಟಿಕೆಟ್‌ಗಳೂ ಸಂಪೂರ್ಣ ಮಾರಾಟಗೊಂಡಿವೆ.
ಅಭಿಮಾನಿಗಳಿಗೆ ನಿರಾಸೆ, ಮಳೆಯಿಂದ ಭಾರತ-ಪಾಕಿಸ್ತಾನ ಪಂದ್ಯ ರದ್ದು!
ಬಾಂಗ್ಲಾಕ್ಕೆ ಆಫ್ಘನ್ ವಿರುದ್ಧ ಮಾಡು ಇಲ್ಲ ಮಡಿ ಪಂದ್ಯ!
ಲಾಹೋರ್: ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿರುವ ಬಾಂಗ್ಲಾದೇಶ, ಏಷ್ಯಾಕಪ್ ಸೂಪರ್-4 ಹಂತ ಪ್ರವೇಶಿಸಬೇಕಿದ್ದರೆ ಭಾನುವಾರ ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಗ್ರೂಪ್ ಆಫ್ ಡೆತ್ ಎಂದೇ ಕರೆಸಿಕೊಳ್ಳುವ ‘ಬಿ’ ಗುಂಪಿನಲ್ಲಿ ಲಂಕಾ ಈಗಾಗಲೇ 1 ಪಂದ್ಯ ಗೆದ್ದು ಅಗ್ರಸ್ಥಾನದಲ್ಲಿದೆ. ಹೀಗಾಗಿ ಆಫ್ಘನ್ ವಿರುದ್ಧ ಗೆದ್ದರೆ ಮಾತ್ರ ಬಾಂಗ್ಲಾ ಸೂಪರ್-4 ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಮತ್ತೊಂದೆಡೆ ಆಫ್ಘನ್ ಕೂಡಾ ಜಯದ ನಿರೀಕ್ಷೆಯಲ್ಲಿದ್ದು, ಗೆದ್ದರೆ ಮುಂದಿನ ಹಂತ ಪ್ರವೇಶಿಸಲಿದೆ.
ಬಾಂಗ್ಲಾ ತಂಡ ತಮೀಮ್ ಇಕ್ಬಾಲ್, ಲಿಟನ್ ದಾಸ್ ಅನುಪಸ್ಥಿತಿಯಲ್ಲಿ ನಾಯಕ ಶಕೀಬ್, ಮುಷ್ಫಿಕರ್ ರಹೀಂ, ನಜ್ಮುಲ್ ಹೊಸೈನ್ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. ಅತ್ತ ಆಫ್ಘನ್‌ಗೆ ಗುರ್ಬಾಜ್, ಜದ್ರಾನ್ ಅಬ್ಬರದ ಬ್ಯಾಟಿಂಗ್, ರಶೀದ್ ಖಾನ್, ಮೊಹಮದ್ ನಬಿ ಆಲ್ರೌಂಡ್ ಪ್ರದರ್ಶನ ನಿರ್ಣಾಯಕವೆನಿಸಿದೆ.
ಟೀಂ ಇಂಡಿಯಾಗೆ ಸಾಧ್ಯವೇ ಇಲ್ಲ, 4 ಪದದಲ್ಲಿ 4 ವಿಕೆಟ್ ಪತನ ತಿವಿದ ಪಾಕಿಸ್ತಾನ ಪ್ರಧಾನಿ!
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಘಾಟಿ ಸುಬ್ರಮಣ್ಯ ದೇಗುಲಕ್ಕೆ ರಾಹುಲ್
ಭಾರತದ ತಾರಾ ಕ್ರಿಕೆಟಿಗ ಕೆ.ಎಲ್.ರಾಹುಲ್ ಏಷ್ಯಾಕಪ್‌ಗಾಗಿ ತಂಡ ಕೂಡಿಕೊಳ್ಳುವ ಮೊದಲು ತಮ್ಮ ಪತ್ನಿ ಜೊತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಮಣ್ಯ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸಣ್ಣ ಮಟ್ಟಿನ ಗಾಯದಿಂದಾಗಿ ತಂಡದ ಜೊತೆ ಶ್ರೀಲಂಕಾಕ್ಕೆ ತೆರಳದೆ ಬೆಂಗಳೂರಿನಲ್ಲೇ ಅಭ್ಯಾಸ ನಿರತರಾಗಿರುವ ರಾಹುಲ್, ಸೆ.4ರಂದು ತಂಡ ಕೂಡಿಕೊಳ್ಳಲಿದ್ದಾರೆ.
ಟಿ20: ಇಂಗ್ಲೆಂಡ್‌ಗೆ ಕಿವೀಸ್ ವಿರುದ್ಧ 95 ರನ್ ಗೆಲುವು
ಮ್ಯಾಂಚೆಸ್ಟರ್: ಬ್ಯಾಟಿಂಗ್‌ನಲ್ಲಿ ಮತ್ತೆ ಹೀನಾದ ಪ್ರದರ್ಶನ ತೋರಿದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 95 ರನ್ ಸೋಲನುಭವಿಸಿದೆ. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-0 ಮುನ್ನಡೆ ಪಡೆಯಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 4 ವಿಕೆಟ್‌ಗೆ 198 ರನ್ ಕಲೆಹಾಕಿತು. ಬೇರ್‌ಸ್ಟೋವ್(ಔಟಾಗದೆ 86), ಹ್ಯಾರಿ ಬ್ರೂಕ್(36 ಎಸೆತಗಳಲ್ಲಿ 67) ಕಿವೀಸ್ ಬೌಲರ್‌ಗಳನ್ನು ಚೆಂಡಾಡಿದರು. ಕಠಿಣ ಗುರಿ ಬೆನ್ನತ್ತಿದ ಕಿವೀಸ್ 13.5 ಓವರ್‌ಗಳಲ್ಲಿ 103ಕ್ಕೆ ಆಲೌಟಾಯಿತು. ಟಿಮ್ ಸೀಫರ್ಟ್(39) ಹೊರತುಪಡಿಸಿ ಇತರರು ಇಂಗ್ಲೆಂಡ್ ಬೌಲರ್‌ಗಳ ಮುಂದೆ ಮಂಡಿಯೂರಿದರು. ಗಸ್ ಆಟ್ಕಿನ್ಸನ್ 20ಕ್ಕೆ 4 ವಿಕೆಟ್ ಕಿತ್ತರು.