ಟೀಂ ಇಂಡಿಯಾಗೆ ಸಾಧ್ಯವೇ ಇಲ್ಲ, 4 ಪದದಲ್ಲಿ 4 ವಿಕೆಟ್ ಪತನ ತಿವಿದ ಪಾಕಿಸ್ತಾನ ಪ್ರಧಾನಿ!
ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ರೋಚಕತೆ ಹೆಚ್ಚಾಗಿದೆ. ಪಾಕ್ ದಾಳಿ ವಿರುದ್ದ ಭಾರತದ ಬ್ಯಾಟಿಂಗ್ ಪ್ರದರ್ಶನ ಟೀಕೆಗೆ ಗುರಿಯಾಗಿದೆ. ಇದರ ನಡುವೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಟೀಂ ಇಂಡಿಯಾವನ್ನು ತಿವಿದಿದ್ದಾರೆ. ಆರಂಭಿಕ 4 ವಿಕೆಟ್ ಪತನವನ್ನು ನಾಲ್ಕೇ ಪದದಲ್ಲಿ ಟೀಕಿಸಿದ್ದಾರೆ.
ಪಲ್ಲಕೆಲೆ(ಸೆ.02) ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಹಲವು ರೋಚಕ ತಿರುವುಗಳಿಗೆ ಸಾಕ್ಷಿಯಾಗಿದೆ. ಆರಂಭದಲ್ಲೇ 4 ವಿಕೆಟ್ ಪತನ, ಬಳಿಕ ಇಶಾನ್ ಕಿಶನ್ ಹಾಗೂ ಹಾರ್ಜಿಕ್ ಪಾಂಡ್ಯ ಇನ್ನಿಂಗ್ಸ್, ಮತ್ತೆ ವಿಕೆಟ್ ಪತನದಿಂದ ಭಾರತ 266 ರನ್‌ಗೆ ಆಲೌಟ್ ಆಗಿದೆ. ಪಾಕಿಸ್ತಾನ ಇನ್ನಿಂಗ್ಸ್ ಆರಂಭಿಸಲು ಮಳೆ ಅಡ್ಡಿಯಾದ ಕಾರಣ ಎರಡನೇ ಇನ್ನಿಂಗ್ಸ್ ವಿಳಂಬವಾಗಿದೆ. ಇತ್ತ ಟೀಂ ಇಂಡಿಯಾದ ವಿಕೆಟ್ ಪತನವನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವ್ಯಂಗ್ಯವಾಡಿದ್ದಾರೆ. ಶಹೀನ್ ಆಫ್ರಿದಿ ಬೌಲಿಂಗ್ ದಾಳಿಯನ್ನು ಟೀಂ ಇಂಡಿಯಾ ಎದುರಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ನೀಡಿದ ಶಾಹೀನ್ ಆಫ್ರಿದಿ ಬೌಲಿಂಗ್ ದಾಳಿ ಕೊಂಡಾಡಿದ ಶೆಹಬಾಜ್ ಷರೀಫ್ ಟ್ವಿಟರ್ ಮೂಲಕ ಶಾಹೀನ್ ಎಂದು ಟ್ವೀಟ್ ಮಾಡಿದ್ದಾರೆ. ಬಳಿಕ ಟೀಂ ಇಂಡಿಯಾವನ್ನು ತಿವಿದಿದ್ದಾರೆ. ಮತ್ತೊಂದು ಟ್ವೀಟ್ ಮಾಡಿರುವ ಶಹಬಾಜ್ ಷರೀಪ್, ಅವನ ಬೌಲಿಂಗ್ ದಾಳಿಗೆ ಅವರಿಗೆ ಆಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಕೇವಲ ನಾಲ್ಕೇ ಪದದ ಮೂಲಕ ಟೀಂ ಇಂಡಿಯಾದ 4 ವಿಕೆಟ್ ಹಾಗೂ ಕಳಪೆ ಬ್ಯಾಟಿಂಗ್ ಟೀಕಿಸಿದ್ದಾರೆ. ಇಷ್ಟೇ ಅಲ್ಲ ಶಾಹೀನ್ ಆಫ್ರಿದಿ 4 ವಿಕೆಟ್‌ನ್ನು ಸಂಭ್ರಮಿಸಿದ್ದಾರೆ.
ASIA CUP 2023 ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ, ಪಾಕಿಸ್ತಾನ ಇನ್ನಿಂಗ್ಸ್ ವಿಳಂಬ!
ಶಹಬಾಜ್ ಷರೀಪ್ ಟ್ವೀಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಪಾಕಿಸ್ತಾನ ಅಭಿಮಾನಿಗಳು ಷರೀಫ್ ಟ್ವೀಟ್ ಬೆಂಬಲಿಸಿ ಕಮೆಂಟ್ ಮಾಡಿದ್ದಾರೆ. ಭಾರತ ತಂಡ ಮತ್ತೆ ಮುಖಾಮುಖಿಯಾದರೂ, ವಿಶ್ವಕಪ್ ಟೂರ್ನಿಯಲ್ಲೂ ಶಾಹೀನ್ ಆಫ್ರಿದಿ ಎಸೆತ ಎದುರಿಸಲು ಸಾಧ್ಯವಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇತ್ತ ಭಾರತೀಯ ಅಭಿಮಾನಿಗಳು, ಭಾರತ 4 ವಿಕೆಟ್ ಕೈಚೆಲ್ಲಿತ್ತು ನಿಜ. ಆದರೆ ಟೀಂ ಇಂಡಿಯಾ ಬೌಲಿಂಗ್ ದಾಳಿ ಎದುರಿಸಿ ಬಳಿಕ ಕಮೆಂಟ್ ಮಾಡಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಹೆಚ್ಚಾಗಿ ತನ್ನ ನಾಯಕ ಬಾಬರ್ ಆಜಂರನ್ನೇ ನೆಚ್ಚಿಕೊಂಡಿದೆ. ಆರಂಭಿಕರಾದ ಫಖರ್ ಜಮಾನ್ ಹಾಗೂ ಇಮಾಮ್ ಉಲ್-ಹಕ್ ಲಯದಲಿಲ್ಲ. ಪ್ರಮುಖವಾಗಿ ಫಖರ್, ಸತತ 3 ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಬಳಿಕ ಕಳೆದ 7 ಇನ್ನಿಂಗ್ಸಲ್ಲಿ ಕೇವಲ 139 ರನ್ ಕಲೆಹಾಕಿದ್ದಾರೆ. ಬ್ಯಾಟಿಂಗ್ ಸಮತೋಲನಕ್ಕಾಗಿ ಮೊಹಮದ್ ರಿಜ್ವಾನ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, 4, 5 ಹಾಗೂ 6ನೇ ಕ್ರಮಾಂಕದ ಸಮಸ್ಯೆ ಪಾಕಿಸ್ತಾನವನ್ನು ಹೆಚ್ಚುಕಾಡುತ್ತಿದೆ. ಇದರಿಂದಾಗಿ ಇಫ್ತಿಕಾರ್ ಅಹ್ಮದ್ ಹಾಗೂ ಶದಾಬ್ ಖಾನ್ ಮೇಲೆ ಅಧಿಕ ಒತ್ತಡ ಬೀಳುತ್ತಿದೆ. ಆದರೂ ಭಾರತಕ್ಕಿಂತ ಬಲಿಷ್ಠ ಬ್ಯಾಟಿಂಗ್ ಲೈನ್-ಅಪ್‌ನ ಬಲ ಪಾಕಿಸ್ತಾನಕ್ಕಿದೆ.
ಪಾಕ್ ವಿರುದ್ಧ ಭಾರತದ ಕಳಪೆ ಆಟ ಟ್ರೋಲ್ ನಡುವೆ ದಾಖಲೆ ಬರೆದ ಪಾಂಡ್ಯ-ಕಿಶನ್!