ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವು ಗೆಲುವಿನ ನಗೆ ಬೀರಿದೆ. ಇಂದು ಕೂಡಾ ಇಂಗ್ಲೆಂಡ್ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಹೀಗಿದ್ದೂ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಪ್ರಬಲ ಪೈಪೋಟಿ ನೀಡಲು ಆಪ್ಘಾನಿಸ್ತಾನ ಸಜ್ಜಾಗಿದೆ.

ನವದೆಹಲಿ: ಹೀನಾಯ ಸೋಲಿನೊಂದಿಗೆ ವಿಶ್ವಕಪ್‌ ಅಭಿಯಾನವನ್ನು ಆರಂಭಿಸಿದ್ದ ಇಂಗ್ಲೆಂಡ್‌, ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಭಾನುವಾರ ಇಲ್ಲಿನ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಮತ್ತೊಂದು ದೊಡ್ಡ ಗೆಲುವಿನೊಂದಿಗೆ ನೆಟ್‌ ರನ್‌ ರೇಟ್‌ ಉತ್ತಮಗೊಳಿಸಿಕೊಳ್ಳಲು ಬಟ್ಲರ್‌ ಪಡೆ ಎದುರು ನೋಡುತ್ತಿದೆ.

ಇಲ್ಲಿನ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಇಂಗ್ಲೆಂಡ್‌ನ ಆಟದ ಶೈಲಿಗೆ ಹೇಳಿ ಮಾಡಿಸಿದಂತಿದೆ. ಬೇರ್‌ಸ್ಟೋವ್‌, ಮಲಾನ್‌, ಬ್ರೂಕ್‌, ಬಟ್ಲರ್‌, ಲಿವಿಂಗ್‌ಸ್ಟೋನ್ ಹೀಗೆ ಸ್ಫೋಟಕ ಬ್ಯಾಟರ್‌ಗಳ ದಂಡೇ ತಂಡದಲ್ಲಿದ್ದು, ಬೃಹತ್‌ ಗೆಲುವಿನ ಮೇಲೆ ಇಂಗ್ಲೆಂಡ್‌ ಕಣ್ಣಿಟ್ಟಿದೆ. ಆಫ್ಘನ್‌ನ ಸ್ಪಿನ್ನರ್‌ಗಳು ಇಂಗ್ಲೆಂಡ್‌ ಬ್ಯಾಟಿಂಗ್‌ ಅಬ್ಬರವನ್ನು ತಡೆಯಬಲ್ಲರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಮತ್ತೊಂದೆಡೆ ಆಡಿರುವ ಎರಡು ಪಂದ್ಯಗಳಲ್ಲೂ ಆಫ್ಘನ್‌ ಹೇಳಿ ಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ತಾನು ನಂಬಿರುವ ಬ್ಯಾಟರ್‌ಗಳಿಂದಲೂ ಅಬ್ಬರದ ಆಟ ಕಂಡುಬಂದಿಲ್ಲ. ಈ ಪಂದ್ಯದಲ್ಲೂ ಆಫ್ಘನ್‌ಗೆ ಸೋಲು ಎದುರಾದರೆ ಅಚ್ಚರಿಯಿಲ್ಲ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವು ಗೆಲುವಿನ ನಗೆ ಬೀರಿದೆ. ಇಂದು ಕೂಡಾ ಇಂಗ್ಲೆಂಡ್ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಹೀಗಿದ್ದೂ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಪ್ರಬಲ ಪೈಪೋಟಿ ನೀಡಲು ಆಪ್ಘಾನಿಸ್ತಾನ ಸಜ್ಜಾಗಿದೆ.

ಸಂಭವನೀಯರ ಪಟ್ಟಿ

ಇಂಗ್ಲೆಂಡ್‌: ಜಾನಿ ಬೇರ್‌ಸ್ಟೋವ್‌, ಡೇವಿಡ್ ಮಲಾನ್‌,ಜೋ ರೂಟ್‌, ಹ್ಯಾರಿ ಬ್ರೂಕ್‌, ಜೋಸ್ ಬಟ್ಲರ್‌(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಸ್ಯಾಮ್ ಕರ್ರನ್‌, ಕ್ರಿಸ್ ವೋಕ್ಸ್‌, ಆದಿಲ್ ರಶೀದ್‌, ಮಾರ್ಕ್ ವುಡ್‌, ರೀಸ್‌ ಟಾಪ್ಲಿ.

ಅಫ್ಘಾನಿಸ್ತಾನ: ರೆಹಮಾನ್ ಗುರ್ಬಾಜ್‌, ಜದ್ರಾನ್‌, ರಹ್ಮತ್‌, ಹಶ್ಮತುಲ್ಲಾ(ನಾಯಕ), ನಜೀಬುಲ್ಲಾ, ಮೊಹಮ್ಮದ್ ನಬಿ, ಅಜ್ಮತುಲ್ಲಾ, ರಶೀದ್‌ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್‌ ಉಲ್ ಹಕ್, ಫಜಲ್ ಹಕ್ ಫಾರೂಕಿ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ, 
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಡಿಸ್ನಿ+ಹಾಟ್‌ಸ್ಟಾರ್‌.