ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎ ಟೆಸ್ಟ್ ಪಂದ್ಯದ ವೇಳೆ ಅಚ್ಚರಿ ಘಟನೆ ನಡೆದಿದೆ. ತಾತನ ಸ್ಕೂಟರ್ ರೈಡ್ನಿಂದ ಕೆಲ ಹೊತ್ತು ಪಂದ್ಯ ಸ್ಥಗಿತಗೊಂಡ ಘಟನೆ ನಡೆದಿದೆ. ಇದೀಗ ತಾತನ ಸ್ಕೂಟರ್ ಘಟನೆ ವಿಡಿಯೋ ಭಾರಿ ವೈರಲ್ ಆಗಿದೆ.
ಕ್ರೈಸ್ಟ್ಚರ್ಚ್ (ನ.01) ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಟಿ20 ಪಂದ್ಯ ರೋಚಕ ಘಟ್ಟ ತಲುಪಿದೆ. ಇತ್ತ ಭಾರತ ಎ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯವೂ ನಡೆಯುತ್ತಿದೆ. ಕ್ರೈಸ್ಚ್ಚರ್ಚ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ಭಾರತದ ಮೊದಲ ಇನ್ನಿಂಗ್ಸ್ ಕೆಲ ಹೊತ್ತು ಸ್ಥಗಿತಗೊಂಡಿತ್ತು. ಕಾರಣ ತಾತನ ಸ್ಕೂಟರ್ ರೈಡ್. ಧ್ರುವ್ ಜುರೆಲ್ ಹಾಗೂ ಅಕ್ಷ ದೀಪ್ ಜೊತೆಯಾದ ನಡುವೆ ಈ ಘಟನೆ ನಡೆದಿದೆ. ತಾತನ ಸ್ಕೂಟರ್ ರೈಡ್ ನಿಲ್ಲಿಸಿದ ಬಳಿಕ ಪಂದ್ಯ ಮುಂದುವರಿದ ಘಟನೆ ನಡೆದಿದೆ.
ತಾತನ ಸ್ಕೂಟರ್ನಿಂದ ನಿಂತ ಪಂದ್ಯ
ಭಾರತ ಮೊದಲ ಇನ್ನಿಂಗ್ಸ್ ಹೋರಾಟ ನೀಡುತ್ತಿತ್ತು. ನಾಯಕ ಧ್ರುವ್ ಜುರೆಲ್ ದಿಟ್ಟ ಹೋರಾಟ ನೀಡಿದರೆ, ಇತರರಿಂದ ಸಾಥ್ ಸಿಗಲಿಲ್ಲ. ಇತ್ತ ಅಕಾಶ್ ದೀಪ್ ಜೊತೆಗಿನ ಉತ್ತಮ ಹೋರಾಟ ಟೀಂ ಇಂಡಿಯಾಗೂ ನೆರವಾಯಿತು. ಧ್ರುವ್ ಜುರೆಲ್ ಶತಕದ ಸನಿ ಬಂದಿದ್ದರು. ಅಜೇಯ 94 ರನ್ ಸಿಡಿಸಿ ಮುನ್ನುಗ್ಗಿದ್ದರು. ಇತ್ತ ಅಕಾಶ್ ದೀಪ್ 11 ರನ್ ಸಿಡಿಸಿ ಜುರೆಲ್ಗೆ ಸಾಥ್ ನೀಡಿದ್ದರು. ಬ್ರೆಟ್ ರಾಂಡೆಲ್ ಬೌಲಿಂಗ್ ಮಾಡುತ್ತಿದ್ದರು. ವೇಗವಾಗಿ ರನ್ ಅಪ್ ಮಾಡುತ್ತಾ ಬಂದ ಧ್ರುವ್ ಜುರೆಲ್ ಬೌಲಿಂಗ್ ಮಾಡಬೇಕು ಎನ್ನುಷ್ಟರಲ್ಲಿ ಅಂಪೈರ್ ನಿಲ್ಲಿಸಲು ಸೂಚಿಸಿದ್ದರು. ಕಾರಣ ಬ್ಯಾಟ್ಸಮನ್ ಸ್ಕ್ರೀನ್ ಮುಂಭಾಗದಿಂದ ತಾತ ಸ್ಕೂಟರ್ ಮೂಲಕ ತೆರಳಿದ್ದರು.
ಸ್ಕ್ರೀನ್ ಮುಂಭಾಗದಿಂದ ಸಾಗಿದ ಸ್ಕೂಟರ್
ಪ್ರೇಕ್ಷಕರ ಗ್ಯಾಲರಿಯಲ್ಲಿ ತನ್ನ ಸ್ಕೂಟರ್ ಮೇಲೆ ಕುಳಿತು ಪಂದ್ಯ ನೋಡುತ್ತಿದ್ದ ತಾತನಿಗೆ ಬಿಸಿಲು ತಡೆಯಲು ಸಾಧ್ಯವಾಗಲಿಲ್ಲ. ಆದರೆ ಈ ತಾತ ಬ್ಯಾಟರ್ ಫ್ರಂಟ್ ಸ್ಕ್ರೀನ್ ಪಕ್ಕದಲ್ಲಿ ಕುಳಿತಿದ್ದರು. ನೇರವಾಗಿ ಸ್ಕೂಟರ್ ಸ್ಟಾರ್ಟ್ ಮಾಡಿ ನೆರಳಿರುವ ಮತ್ತೊಂದು ಬಂದಿಗೆ ಸಾಗಿದ್ದಾರೆ. ಸಾಗುವಾಗ ಬ್ಯಾಟರ್ ಸ್ಕ್ರೀನ್ ಮುಂಭಾಗದಿಂದಲೇ ಸಾಗಿದ್ದಾರೆ. ಇದು ಬ್ಯಾಟರ್ಗೆ ಅಡ್ಡಿಯಾಗಿದೆ. ಹೀಗಾಗಿ ಬಾಲ್ ಎದುರಿಸಲು ತಯಾರಿಯಲ್ಲಿದ್ದ ಬ್ಯಾಟರ್ ಅಂಪೈರ್ಗೆ ಸೂಚನೆ ನೀಡಿದ್ದಾರೆ. ಅಂಪೈರ್ ತಕ್ಷಣವೇ ಬಾಲ್ ಹಾಕದಂತೆ ಸೂಚಿಸಿದ್ದಾರೆ.
ತಾತನ ಸ್ಕೂಟರ್ ರೈಡ್ ಮತ್ತೊಂದು ಬದಿಗೆ ಸಾಗಿ ನಿಲ್ಲಿಸುವವರೆಗೂ ಪಂದ್ಯ ನಡೆದಿಲ್ಲ. ಸ್ಕೂಟರ್ ರೈಡ್ನಿಂದ ಪಂದ್ಯ ಕೆಲ ಹೊತ್ತು ಸ್ಥಗಿತಗೊಂಡ ಘಟನೆ ನಡೆದಿದೆ. ನೇರ ಪ್ರಸಾರದಲ್ಲಿ ಈ ದೃಶ್ಯಗಳು ಪ್ರಸಾರಗೊಂಡಿದೆ. ಕೆಲ ಹೊತ್ತು ಪಂದ್ಯಕ್ಕೆ ಅಡ್ಡಿಯಾಗಿದೆ. ಇದೀಗ ತಾತ ಹಾಗೂ ಸ್ಕೂಟರ್ ವಿಡಿಯೋ ಭಾರಿ ವೈರಲ್ ಆಗಿದೆ.
ಸ್ಕೂಟರ್ ರೈಡ್ ನಿಂತ ಬಳಿಕ ಪಂದ್ಯ ಆರಂಭಗೊಂಡಿದೆ. ಇತ್ತ ನಾಯಕ ಧ್ರುವ್ ಜುರೆಲ್ ಶತಕ ಸಿಡಿಸಿ ಮಿಂಚಿದ್ದಾರೆ. ಧ್ರುವ್ ಜುರೆಲ್ 105 ರನ್ ಸಿಡಿಸಿದರೆ, ಅಕಾಶ್ ದೀಪ್ 68 ರನ್ ಕಾಣಿಕೆ ನೀಡಿದರು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 346 ರನ್ ಸಿಡಿಸಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಎ ತಂಡ ದಿಟ್ಟ ಹೋರಾಟ ನೀಡಿದೆ. ಮ್ಯಾಥ್ಯೂ ಬೊಯ್ಲೆ 107 ರನ್ ಸಿಡಿಸಿ ಮುಂಚಿದ್ದಾರೆ. ಡೀನ್ ಫಾಕ್ಸ್ಕ್ರಾಫ್ಟ್ ಶತಕದ ಸೂಚನೆ ನೀಡಿದ್ದಾರೆ.






