ಮ್ಯಾಂಚೆ​ಸ್ಟರ್(ಜು.16)‌: ಇಂಗ್ಲೆಂಡ್‌ ನೆಲ​ದಲ್ಲಿ ಐತಿ​ಹಾ​ಸಿಕ ಸರಣಿ ಗೆಲು​ವಿನ ಮೇಲೆ ಕಣ್ಣಿ​ಟ್ಟಿ​ರುವ ವೆಸ್ಟ್‌ಇಂಡೀಸ್‌, ಗುರು​ವಾರದಿಂದ ಇಲ್ಲಿ ಆರಂಭ​ಗೊ​ಳ್ಳ​ಲಿ​ರುವ 2ನೇ ಟೆಸ್ಟ್‌ನಲ್ಲಿ ಕಣ​ಕ್ಕಿ​ಳಿ​ಯ​ಲಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತು ಆಘಾತ ಅನುಭವಿಸಿರುವ ಆಂಗ್ಲರ ಪಡೆಗೆ ಮತ್ತೊಂದು ಶಾಕ್ ಎದುರಾಗಿದೆ.

ಹೌದು, ಇಂಗ್ಲೆಂಡ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಬಯೋ ಸೆಕ್ಯೂರ್ ಪ್ರೋಟೋಕಾಲ್ ನಿಯಮ ಉಲ್ಲಂಘಿಸಿದ ತಪ್ಪಿಗಾಗಿ ಆರ್ಚರ್ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಿಸ್ತು ಕ್ರಮ ತೆಗೆದುಕೊಂಡಿದ್ದು, ಎರಡನೇ ಪಂದ್ಯದಿಂದ ಕಿಕೌಟ್ ಮಾಡಿದೆ. ಇದೀಗ ಆರ್ಚರ್ ಐದು ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಬೇಕಿದ್ದು, ಈ ಅವಧಿಯಲ್ಲಿ ಎರಡು ಬಾರಿ ಕೊರೋನಾ ಟೆಸ್ಟ್‌ಗೆ ಒಳಪಡಬೇಕಾಗಿದೆ. ತಾನು ಮಾಡಿದ ತಪ್ಪಿಗಾಗಿ ಆರ್ಚರ್ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ. 

ಕೊರೋನಾ ಭೀತಿಯ ನಡುವೆ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆರಂಭವಾಗಿದೆ. ಇದರ ಜತೆಗೆ  ಬಯೋ ಸೆಕ್ಯೂರ್ ಝೋನ್ ನಿರ್ಮಾಣ ಮಾಡಲಾಗಿದ್ದು, ಈ ವ್ಯಾಪ್ತಿ ಮೀರಿ ಆಟಗಾರರು ಹೊರ ಹೋಗುವಂತಿಲ್ಲ.  

ಮೊದಲ ಟೆಸ್ಟ್‌ನಲ್ಲಿ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿ​ಸಿದ್ದ ವಿಂಡೀಸ್‌, ಈ ಪಂದ್ಯ​ದಲ್ಲೂ ಜಯಗಳಿ​ಸುವ ವಿಶ್ವಾಸದಲ್ಲಿದೆ. 2014ರ ಬಳಿಕ ಇಂಗ್ಲೆಂಡ್‌ ತವ​ರಿ​ನಲ್ಲಿ ಸರಣಿ ಸೋತಿಲ್ಲ. ಈ ಪಂದ್ಯಕ್ಕೆ ಜೋ ರೂಟ್‌ ವಾಪ​ಸಾ​ಗಲಿದ್ದು, ಇಂಗ್ಲೆಂಡ್‌ ತಂಡ​ವನ್ನು ಮುನ್ನ​ಡೆಸಲಿ​ದ್ದಾರೆ. 

ಕಳೆದ 32 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡವು ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿಲ್ಲ. ಹೀಗಾಗಿ ಈ ಪಂದ್ಯವನ್ನು ಜಯಿಸಿದರೆ ಟೆಸ್ಟ್ ಸರಣಿ ಗೆಲ್ಲುವುದರ ಜತೆಗೆ ಮ್ಯಾಂಚೆಸ್ಟರ್‌ನಲ್ಲಿ ಮೂರು ದಶಕಗಳ ಬಳಿಕ ವಿಂಡೀಸ್ ಗೆಲುವಿನ ಸಿಹಿ ಉಂಡಂತಾಗಲಿದೆ. 3 ಪಂದ್ಯ​ಗಳ ಸರ​ಣಿಯ ಕೊನೆ ಪಂದ್ಯ ಜು.24ರಿಂದ ಮ್ಯಾಂಚೆ​ಸ್ಟರ್‌ನಲ್ಲೇ ನಡೆ​ಯ​ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್