Asianet Suvarna News Asianet Suvarna News

ಭಾರತ-ಕೌಂಟಿ ಇಲೆವನ್‌ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ

* ಕೌಂಟಿ ಇಲೆವನ್-ಟೀಂ ಇಂಡಿಯಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ

* ಎರಡೂ ಇನಿಂಗ್ಸ್‌ನಲ್ಲೂ ಅರ್ಧಶತಕ ಚಚ್ಚಿದ ರವೀಂದ್ರ ಜಡೇಜಾ

* ಬೌಲಿಂಗ್‌ನಲ್ಲಿ ಮಿಂಚಿದ ಸಿರಾಜ್‌-ಉಮೇಶ್ ಯಾದವ್

India vs County XI Practice Match ends in Draw in Durham kvn
Author
Durham, First Published Jul 23, 2021, 10:52 AM IST

ಡರ್ಹಮ್‌(ಜು.23): ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ದತೆ ನಡೆಸುವ ಸಲುವಾಗಿ ಕೌಂಟಿ ಇಲೆವನ್ ವಿರುದ್ದ 3 ದಿನಗಳ ಅಭ್ಯಾಸ ಪಂದ್ಯವನ್ನಾಡಿದ ಭಾರತ, ಈ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಮೊದಲ ಇನಿಂಗ್ಸ್‌ನಲ್ಲಿ ಕೆ.ಎಲ್ ರಾಹುಲ್ ಆಕರ್ಷಕ ಶತಕ ಹಾಗೂ ರವೀಂದ್ರ ಜಡೇಜಾ ಅರ್ಧಶತಕದ ನೆರವಿನಿಂದ ಭಾರತ ತಂಡವು 311 ರನ್‌ ಬಾರಿಸಿ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಕೌಂಟಿ ಇಲೆವನ್‌, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ 220 ರನ್‌ಗಳಿಗೆ ಆಲೌಟ್ ಆಗಿತ್ತು.

ಅಭ್ಯಾಸ ಪಂದ್ಯ: ಉಮೇಶ್-ಸಿರಾಜ್ ಬೌಲಿಂಗ್‌ ಝಲಕ್‌ ಭಾರತ ಮೇಲುಗೈ

ಮೂರನೇ ಹಾಗೂ ಅಂತಿಮ ದಿನದಲ್ಲಿ ಮತ್ತೆ ಎರಡನೇ ಇನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು192 ರನ್‌ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಜಡೇಜಾ(51), ಮಯಾಂಕ್ ಅಗರ್‌ವಾಲ್(47) ಹಾಗೂ ಹನುಮ ವಿಹಾರಿ 43 ರನ್‌ ಬಾರಿಸುವ ಮೂಲಕ ಗಮನ ಸೆಳೆದರು. ಗೆಲ್ಲಲು 284 ರನ್‌ಗಳ ಗುರಿ ಪಡೆದ ಕೌಂಟಿ ಇಲೆವನ್‌ ವಿಕೆಟ್ ನಷ್ಟವಿಲ್ಲದೇ 31 ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 04ರಿಂದ ಆರಂಭವಾಗಲಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಿಂದಲೇ ಎರಡನೇ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭವಾಗಲಿದೆ.
 

Follow Us:
Download App:
  • android
  • ios