ನವದೆಹಲಿ(ನ.03): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಸೌತ್ ಆಫ್ರಿಕಾ ಸರಣಿ ಬಳಿಕ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ, ಎಂ.ಎಸ್.ಧೋನಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಬಿಸಿಸಿಐ ಕಂಗಾಲು, ಮೊದಲ ಪಂದ್ಯ ರದ್ದಾಗೋ ಭೀತಿ!

ರೋಹಿತ್ ಶರ್ಮಾ ಭಾರತದ ಪರ 98 ಟಿ20 ಪಂದ್ಯ ಆಡಿದ್ದಾರೆ. ಬಾಂಗ್ಲಾದೇಶ ವಿರುದ್ದದ ಮೊದಲ ಟಿ20 ಪಂದ್ಯ ನಡೆದರೆ ರೋಹಿತ್ ಶರ್ಮಾ ಪಾಲಿಗೆ 99 ಟಿ20 ಪಂದ್ಯವಾಗಲಿದೆ. ಈ ಮೂಲಕ 98 ಟಿ20 ಪಂದ್ಯ ಆಡಿರುವ ಧೋನಿ ದಾಖಲೆಯನ್ನು ಪುಡಿ ಮಾಡಲಿದ್ದಾರೆ.

ಇದನ್ನೂ ಓದಿ: ಭಾರತ-ಬಾಂಗ್ಲಾ ಟಿ20: ಕನ್ನಡಿಗರಿಗೆ ಸಿಗುತ್ತಾ ಚಾನ್ಸ್..?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ 1000ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿದೆ. ಈ ಐತಿಹಾಸಿಕ ಪಂದ್ಯದಲ್ಲಿ ರೋಹಿತ್ ಶರ್ಮಾ, ಕೊಹ್ಲಿ ದಾಖಲೆ ಮುರಿಯಲು ರೆಡಿಯಾಗಿದ್ದಾರೆ.  ಟಿ20ಯಲ್ಲಿ ರೋಹಿತ್ 2443 ರನ್ ಸಿಡಿಸಿದ್ದಾರೆ. ಕೊಹ್ಲಿ 2450 ರನ್ ಸಿಡಿಸಿದ್ದಾರೆ.