ನವದೆಹಲಿ(ನ.03): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸರಣಿ ಆಯೋಜನೆ ಬಿಸಿಸಿಐಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರಂಭದಲ್ಲಿ ಬಾಂಗ್ಲಾ ಕ್ರಿಕೆಟಿಗರ ಪ್ರತಿಭಟನೆಯಿಂದ ಟೂರ್ನಿ ನಡೆಯುವುದು ಅನುಮಾನವಾಗಿತ್ತು. ಇದೀಗ ಮೊದಲ ಟಿ20 ಪಂದ್ಯಕ್ಕೆ ಕೆಲ ಗಂಟೆಗಳು ಮಾತ್ರವ ಬಾಕಿ. ಆದರೆ ಪಂದ್ಯ ನಡೆಯುವು ಕುರಿತು ಬಿಸಿಸಿಐಗೇ ಸ್ಪಷ್ಟತೆ ಇಲ್ಲ.

ಇದನ್ನೂ ಓದಿ: ಭಾರತ-ಬಾಂಗ್ಲಾ ಟಿ20: ಕನ್ನಡಿಗರಿಗೆ ಸಿಗುತ್ತಾ ಚಾನ್ಸ್..?

ದೀಪಾವಳಿ ಹಬ್ಬದ ಬಳಿಕ ದೆಹಲಿ ಮಾಲಿನ್ಯ ಮೀತಿ ಮೀರಿದ್ದು, ಸಂಪೂರ್ಣ ದೆಹಲಿಯಲ್ಲಿ ದಟ್ಟ ಧೂಳು ಮಿಶ್ರಿತ ಹೊಗೆ ಆವರಿಸಿದೆ. ಪಂದ್ಯ ಬೇರೆಡೆಗೆ ಸ್ಥಳಾಂತರಿಸಲು ಒತ್ತಾಯಗಳು ಕೇಳಿಬಂದಿತ್ತು. ಆದರೆ ಅಂತಿಮ ಕ್ಷಣದಲ್ಲಿ ಬದಲಾವಣೆ ಮಾಡಲು ಬಿಸಿಸಿಐ ನಿರಾಕರಿಸಿತ್ತು. ಇದೀಗ ಮೊದಲ ಪಂದ್ಯಕ್ಕೆ ಭಾರತ ಹಾಗೂ ಬಾಂಗ್ಲಾದೇಶ ತಂಡ ಸಜ್ಜಾಗಿದೆ. ಆದರೆ ದೆಹಲಿ ಮಾಲಿನ್ಯದಿಂದ ಪಂದ್ಯ ನಡೆಯುವ ಕುರಿತು ಸ್ಪಷ್ಟತೆ ಇಲ್ಲ. ಧೂಳು ಮಿಶ್ರಿತ ಹೊಗೆ ಕಡಿಮೆಯಾದಲ್ಲಿ ಪಂದ್ಯ ನಡೆಲಿದೆ. ಆದರೆ ಈಗಲೇ ಪಂದ್ಯ ರದ್ದು ಕುರಿತು ಹೇಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.

 

ಇದನ್ನೂ ಓದಿ: ಭಾರತ vs ಬಾಂಗ್ಲಾದೇಶ ಟಿ20; ಸಂಭಾವ್ಯ ತಂಡ ಪ್ರಕಟ, ಯಾರಿಗಿದೆ ಚಾನ್ಸ್?

ಇಂದು(ನ.03) ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ವೇಳೆ ಹೊಗೆ ಪ್ರಮಾಣ ತಗ್ಗಿದ್ದಲ್ಲಿ ಪಂದ್ಯ ನಡೆಯಲಿದೆ. ಅಕ್ಟೋಬರ್ 30ಕ್ಕೆ ದೆಹಲಿಗೆ ಆಗಮಿಸಿದ ಬಾಂಗ್ಲಾದೇಶ, ಮಾಸ್ಕ್ ಧರಿಸಿ ಅಭ್ಯಾಸ ಮಾಡಿತ್ತು. ಇತ್ತ ಟೀಂ ಇಂಡಿಯಾ ಮಾಲಿನ್ಯ ಕಾರಣದಿಂದ ಮೈದಾನದಲ್ಲಿ ಅಭ್ಯಾಸ ಮಾಡಿಲ್ಲ. ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದೆ.

ನವೆಂಬರ್ 7 ರಂದು ರಾಜ್‌ಕೋಟ್ ಹಾಗೂ ನವೆಂಬರ್ 10 ರಂದು ನಾಗ್ಪುರದಲ್ಲಿ 2ನೇ ಹಾಗೂ 3ನೇ ಟಿ20 ಪಂದ್ಯ ನಡೆಯಲಿದೆ.

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: