Asianet Suvarna News Asianet Suvarna News

ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ - ಪಾರ್ಕಿಂಗ್ ಎಲ್ಲೆಲ್ಲಿ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಿದೆ. ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಯಾವುದೇ ಸಮಸ್ಯೆ ಆಗದಿರಲು ವಾಹನ ಪಾರ್ಕಿಂಗ್ ಸ್ಥಳಗಳನ್ನು ಪೊಲೀಸರು ಪ್ರಕಟಿಸಿದ್ದಾರೆ. ಈ ಸ್ಥಳ ಹೊರತು ಪಡಿಸಿ ಇನ್ಯಾವುದೇ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ.

India vs Australia t20 cricket Bangalore police announces parking places for public
Author
Bengaluru, First Published Feb 27, 2019, 5:09 PM IST

ಬೆಂಗಳೂರು(ಫೆ.27): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವೇ ಹೊತ್ತಲ್ಲಿ ಇಂಡೋ-ಆಸಿಸಿ ಚುಟುಕು ಸಮರ ಆರಂಭವಾಗಲಿದೆ. ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಯಾವುದೇ ಸಮಸ್ಯೆ ಆಗದ ರೀತಿ ಬೆಂಗಳೂರು ಪೊಲೀಸ್ ಹಲವು ಕ್ರಮಗಳನ್ನ ಕೈಗೊಂಡಿದೆ. ವಾಹನಗಳನ್ನ ಪಾರ್ಕಿಂಗ್ ಮಾಡೋ ಸ್ಥಳಗಳನ್ನು ಪೊಲೀಸರು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಇಂಡೋ-ಆಸಿಸ್ ಬೆಂಗಳೂರು ಪಂದ್ಯ- ಮೆಟ್ರೋ ಸಂಚಾರ ಸಮಯ ವಿಸ್ತರಣೆ!

ಪಾರ್ಕಿಂಗ್ ನಿಷೇಧಿಸಿದ ಸ್ಥಳ:  
ಟ್ರಾಫಿಕ್ & ಸೆಕ್ಯೂರಿಟಿ ಅಡೀಶನಲ್ ಕಮೀಶನರ್ ಪಿ ಹರಿಶೇಕರನ್ ಪ್ರಕಾರ ಕೆಲವು ಸ್ಥಳಗಳಲ್ಲಿ ವಾಹನಗಳನ್ನ ಪಾರ್ಕಿಂಗ್ ನಿಷೇಧಿಸಲಾಗಿದೆ. ಇಂದು(ಫೆ.27) ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11.30 ವರೆಗೆ ಕ್ವೀನ್ಸ್ ರೋಡ್(ಬಾಳೆಕುಂದ್ರಿ ಸರ್ಕಲ್ - ಕ್ವೀನ್ಸ್ ಸರ್ಕಲ್) ಎಂ.ಜಿ.ರೋಡ್(ಅನಿಲ್ ಕುಂಬ್ಳೆ ಸರ್ಕಲ್- ಕ್ವೀನ್ಸ್ ಸರ್ಕಲ್), ಲಿಂಕ್ ರೋಡ್(ಎಂ.ಜಿ ರೋಡ್- ಕಬ್ಬನ್ ರೋಡ್), ರಾಜಭವನ್ ರಸ್ತೆ, ಟಿ ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ(CTO ಸರ್ಕಲ್ -ಡಿಕನ್ಸನ್ ರೋಡ್), ಸೈಂಟ್ ಮಾರ್ಕ್ಸ್ ರೋಡ್(ಕ್ಯಾಶ್ ಫಾರ್ಮಸಿ- ಅನಿಲ್ ಕುಂಬ್ಳೆ ಸರ್ಕಲ್), ಮ್ಯೂಸಿಯಂ ರೋಡ್(ಎಂ.ಜಿ.ರಸ್ತೆ - ಸೈಂಟ್ ಮಾರ್ಕ್ಸ್ ರೋಡ್ ಹಾಗೂ ಆರ್ಶಿವಾದಂ ಸರ್ಕಲ್) ಕಸ್ತೂರ್ಬಾ ರೋಡ್(ಕ್ವೀನ್ಸ್ ರೋಡ್- ಹಡ್ಸನ್ ಸರ್ಕಲ್), ಮಲ್ಯ ಆಸ್ಪತ್ರೆ ರಸ್ತೆ(ಸಿದ್ಧಗಂಗ ಸರ್ಕಲ್ - RRMR ಸರ್ಕಲ್)ನಲ್ಲಿ ವಾಹನಗಳನ್ನ ಪಾರ್ಕಿಂಗ್ ಮಾಡುವುದು ನಿಷೇಧಿಸಲಾಗಿದೆ.]

ಇದನ್ನೂ ಓದಿ: ಇಂಡೋ-ಆಸಿಸ್ ಟಿ20: ಮೂವರು RCB ಆಟಗಾರರಿಂದು ಆಡ್ತಾರಾ..?

ಇಷ್ಟೇ ಅಲ್ಲ, ಕಬ್ಬನ್ ಪಾರ್ಕ್, ಪ್ಲೆಸ್ ಕ್ಲಬ್ ಮುಂಭಾಗ ಹಾಗೂ ಬದಿಗಳಲ್ಲಿ, ಬಾಲ ಭವನ ರಸ್ತೆ, ಲ್ಯಾವಲ್ಲಿ ರಸ್ತೆ, ವಿಠಲ ಮಲ್ಯ ರಸ್ತೆ(ಸಿದ್ಧಲಿಂಗ ಸರ್ಕಲ್ - ಬಿಶಪ್ ಕಾಟನ್ ಗರ್ಲ್ಸ್ ಸ್ಕೂಲ್)ಗಳಲ್ಲೂ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ.

ಪಾರ್ಕಿಂಗ್ ಇಲ್ಲಿ ಮಾಡಿ:
ಇಂದು(ಫೆ.27) ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11.30 ವರೆಗೆ ವಾಹನಗಳನ್ನು ಇಂಡಿಯನ್ ಸ್ಕೂಲ್ ಗ್ರೌಂಡ್, ಯುಬಿ ಸಿಟಿ ಪಾರ್ಕಿಂಗ್, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿ, ಸೈಂಟ್ ಜೋಸೆಫ್ ಯುರೂಪಿಯನ್ ಸ್ಕೂಲ್(KSCA ಸದಸ್ಯರಿಗೆ ಮಾತ್ರ)

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳು ಸಾರ್ವಜನಿಕ ವಾಹನಗಳನ್ನ ಬಳಸಲು ಪೊಲೀಸರು ಮನವಿ ಮಾಡಿದ್ದಾರೆ. BMTC ಹಾಗೂ ಮೆಟ್ರೋ ಉಪಯೋಗಿಸಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸಹಕರಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. 

Follow Us:
Download App:
  • android
  • ios