ಬೆಂಗಳೂರು(ಫೆ.26): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಿದೆ. ನಾಳೆ(ಫೆ.27) ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವಿಗಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಇದೀಗ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗಾಗಿ ಬೆಂಗಳೂರು ಮೆಟ್ರೋ ಸಂಚಾರ ಸಮಯ ವಿಸ್ತರಿಸಿದೆ.

ಇದನ್ನೂ ಓದಿ: ಭದ್ರತಾ ಸಿಬ್ಬಂದಿ ಹುಟ್ಟು ಹಬ್ಬ ಆಚರಿಸಿದ ವಿರಾಟ್ ಕೊಹ್ಲಿ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ20 ಪಂದ್ಯದಿಂದ ಮೆಟ್ರೋ ಸಂಚಾರ ಟೈಂನ್ನು ಪ್ರಯಾಣಿಕರ ಅನೂಕೂಲಕ್ಕಾಗಿ ರಾತ್ರಿ 11.55 ವರೆಗೆ ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಬೈಯಪ್ಪನ ಹಳ್ಳಿ ಮೆಟ್ರೋ ನಿಲ್ದಾಣದಿಂದ ಮೈಸೂರು ರಸ್ತೆ ಹಾಗೂ ಯಲಚೇನಹಳ್ಳಿಯಿಂದ ನಾಗಸಂದ್ರ ದವರೆಗೆ ಗ್ರೀನ್ ಲೈನ್ ಹಾಗೂ ಪರ್ಪಲ್ ಲೈನ್ ಸಂಚಾರ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಇಂಡೋ-ಆಸಿಸ್ ಟಿ20: ಬೆಂಗಳೂರು ಪಂದ್ಯದಲ್ಲಿ ಭಾರತವೇ ಫೇವರಿಟ್!

ಪಂದ್ಯಾವಳಿ ಮುಗಿದ ನಂತರ ಪ್ರಯಾಣಿಕರು ತ್ವರಿತವಾಗಿ‌ ಪ್ರಯಾಣಿಸಲು ಪೇಪರ್ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ನಾಳೆ(ಫೆ.27) ಮೂರುಗಂಟೆಯಿಂದ ಏಳು‌ ಗಂಟೆಯವರೆಗೆ ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿ ಪೇಪರ್ ಟಿಕೆಟ್ ‌ಖರೀದಿಸ ಬಹುದು. ಪ್ರತಿ‌ ಟಿಕೆಟ್ ದರ 50 ರೂಪಾಯಿ. ಈ ಟಿಕೆಟ್ ಪಂದ್ಯಾವಳಿ ಮುಗಿದ ನಂತರ ಮಾತ್ರ ಈ ಪೇಪರ್ ಟಿಕೆಟ್ ಬಳಸಬಹುದು ಎಂದು BMRCL ಹೇಳಿದೆ.