Asianet Suvarna News Asianet Suvarna News

India tour of Ireland ಟಿ20 ಸರಣಿಯನ್ನಾಡಲು ಐರ್ಲೆಂಡ್‌ಗೆ ಹಾರಿದ ಟೀಂ ಇಂಡಿಯಾ..!

ಐರ್ಲೆಂಡ್‌ನಲ್ಲೂ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರತಿಭಾನ್ವೇಷಣೆ
ಚೊಚ್ಚಲ ಅವಕಾಶದಲ್ಲಿ ಮಿಂಚಲು ರಿಂಕು ಸಿಂಗ್, ಜಿತೇಶ್ ಶರ್ಮಾ ರೆಡಿ
ತಿಲಕ್ ವರ್ಮಾ, ಜಸ್ಪ್ರೀತ್ ಬುಮ್ರಾ ಮೇಲೆ ಎಲ್ಲರ ಕಣ್ಣು

India tour of Ireland Jasprit Bumrah Led Team India Squad Departs For Ireland kvn
Author
First Published Aug 16, 2023, 9:46 AM IST

ಬೆಂಗಳೂರು(ಆ.16): 2024ರ ಟಿ20 ವಿಶ್ವಕಪ್‌ಗೆ ಇನ್ನು 10 ತಿಂಗಳಷ್ಟೇ ಬಾಕಿ ಇದ್ದು, ಬಿಸಿಸಿಐ ಯುವ ತಂಡವನ್ನು ಸಿದ್ಧಗೊಳಿಸಲು ಹಲವು ಪ್ರಯೋಗಗಳಿಗೆ ಕೈ ಹಾಕುತ್ತಿದೆ. ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಭಾರತ ಸೋತರೂ, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮಾರಂತಹ ಪ್ರತಿಭೆಗಳು ಭಾರತ ತಂಡದಲ್ಲಿ ಮುಂದಿನ ಕೆಲ ವರ್ಷಗಳ ಕಾಲ ನಿರಂತರವಾಗಿ ಆಡುವ ಸುಳಿವು ನೀಡಿದ್ದಾರೆ.

ಇದೀಗ ಆಗಸ್ಟ್ 18ರಿಂದ ಐರ್ಲೆಂಡ್‌ ವಿರುದ್ಧ ಭಾರತ 3 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಹೊಸದಾಗಿ ತಂಡ ಸೇರಿರುವ ಕೆಲ ಯುವ ಆಟಗಾರರ ಜೊತೆಗೆ ಈಗಾಗಲೇ ಭರವಸೆ ಮೂಡಿಸಿರುವ ಕೆಲವರ ಮೇಲೆ ಎಲ್ಲರ ಕಣ್ಣಿದೆ.

ಇವರೇ ನೋಡಿ ಲಂಕಾ ದಿಗ್ಗಜ ಕ್ರಿಕೆಟಿಗನ ಬ್ಯೂಟಿಫುಲ್ ಪತ್ನಿ..! ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್

ಸರಣಿಯಲ್ಲಿ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಆಡುವುದು ಬಹುತೇಕ ಖಚಿತ. ಜೈಸ್ವಾಲ್‌ ಸ್ಥಿರತೆ ಕಾಯ್ದುಕೊಳ್ಳಬೇಕಿದ್ದು, ಗಾಯಕ್ವಾಡ್‌ ಸಿಗಲಿರುವ ಅವಕಾಶ ಬಳಸಿಕೊಳ್ಳಬೇಕಿದೆ. ಇನ್ನು ತಿಲಕ್‌ ವರ್ಮಾ ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧರಿರುವುದಾಗಿ ಸಾಬೀತು ಮಾಡಿದ್ದಾರೆ. ತಂಡ ಅವರನ್ನು ಆಲ್ರೌಂಡರ್‌ ಆಗಿ ಬಳಸಲು ಯೋಜನೆ ರೂಪಿಸಿದೆ. ಏಷ್ಯಾಕಪ್‌, ಏಕದಿನ ವಿಶ್ವಕಪ್‌ನ ತಂಡಗಳಿಗೂ ತಿಲಕ್‌ರನ್ನು ಆಯ್ಕೆ ಮಾಡಬೇಕು ಎನ್ನುವ ಅಭಿಪ್ರಾಯಗಳು ಹಲವರಿಂದ ವ್ಯಕ್ತವಾಗುತ್ತಿವೆ. ತಿಲಕ್‌ ಪಾಲಿಗೆ ಐರ್ಲೆಂಡ್‌ ವಿರುದ್ಧದ ಸರಣಿ ಮಹತ್ವದಾಗಲಿದೆ.

ರಿಂಕುಗೆ ಫಿನಿಶರ್‌ ಸ್ಥಾನ?: ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ರಿಂಕು ಸಿಂಗ್‌, ಸರಣಿಯಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದಾರೆ. ಟಿ20ಯಲ್ಲಿ 140+ ಸ್ಟ್ರೈಕ್‌ರೇಟ್‌ ಹೊಂದಿರುವ ರಿಂಕುಗೆ ತಂಡ ಫಿನಿಶರ್‌ ಜವಾಬ್ದಾರಿ ನೀಡಬಹುದು.

ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ ಹಾರ್ದಿಕ್‌ ಪಾಂಡ್ಯ ಮಾಡಿದ 5 ಎಡವಟ್ಟುಗಳಿವು..!

ಕೀಪರ್‌ ಸ್ಥಾನಕ್ಕೆ ಜಿತೇಶ್‌?: ಸಂಜು ಸ್ಯಾಮ್ಸನ್‌ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿಲ್ಲ. ಇಶಾನ್‌ ಕಿಶನ್‌ರ ಆಟದಲ್ಲಿ ಸ್ಥಿರತೆ ಇಲ್ಲ. ಹೀಗಾಗಿ ಭಾರತ ತಂಡ ಹೊಸ ವಿಕೆಟ್‌ ಕೀಪರ್‌-ಬ್ಯಾಟರ್‌ನನ್ನು ಹುಡುಕುತ್ತಿದೆ. ಐಪಿಎಲ್‌ನಲ್ಲಿ ಪಂಜಾಬ್‌ ತಂಡದಲ್ಲಿ ಆಡುವ ವಿದರ್ಭದ ಜಿತೇಶ್‌ ಶರ್ಮಾ ಟಿ20ಯಲ್ಲಿ 150ರ ಆಸುಪಾಸಿನ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಅವರ ಬ್ಯಾಟಿಂಗ್‌ ಸರಾಸರಿ 30 ಇದ್ದು, ಟಿ20ಯಲ್ಲಿ ಇದು ಉತ್ತಮ ಎನಿಸಿದೆ.

ಬುಮ್ರಾ, ಪ್ರಸಿದ್ಧ್‌ ಆಕರ್ಷಣೆ: ಗಾಯದ ಸಮಸ್ಯೆಯಿಂದ ಹೊರಬಂದಿರುವ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಹಾಗೂ ಪ್ರಸಿದ್ಧ್‌ ಕೃಷ್ಣ ಮೇಲೆ ಎಲ್ಲರ ಕಣ್ಣಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ಮಾತ್ರವಲ್ಲ, ಈ ವರ್ಷದ ಏಷ್ಯಾಕಪ್‌ ಹಾಗೂ ಏಕದಿನ ವಿಶ್ವಕಪ್‌ ದೃಷ್ಟಿಯಿಂದ ಇಬ್ಬರೂ ಲಯ ಕಂಡುಕೊಳ್ಳುವುದು ಬಹಳ ಮುಖ್ಯ ಎನಿಸಿದೆ.

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ನಾಯಕ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್‌ಗೂ ವಿಶ್ರಾಂತಿ ನೀಡಲಾಗಿದೆ. ಏಷ್ಯಾಕಪ್ ಟೂರ್ನಿ ಕಾರಣದಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. 2023ರ ಏಷ್ಯನ್ ಗೇಮ್ಸ್‌ಗೆ ತೆರಳಲಿರುವ ಬಹುತೇಕ ತಂಡವೇ ಐರ್ಲೆಂಡ್ ಪ್ರವಾಸ ಮಾಡುತ್ತಿದೆ. ಋತುರಾಜ್ ಗಾಯಕ್ವಾಡ್‌ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. 

ಆಗಸ್ಟ್ 18 ರಿಂದ ಐರ್ಲೆಂಡ್ ವಿರುದ್ದದ ಟಿ20 ಸರಣಿ ಆರಂಭಗೊಳ್ಳಲಿದೆ. ಮೂರು ಪಂದ್ಯಗಳ ಸರಣಿಯನ್ನು ಡಬ್ಲಿನ್‌ನಲ್ಲಿ ಆಯೋಜಿಸಲಾಗಿದೆ. ಆಗಸ್ಟ್ 20 ರಂದು 2ನೇ ಟಿ20 ಹಾಗೂ ಆಗಸ್ಟ್ 23 ರಂದು ಮೂರನೇ ಟಿ20 ಪಂದ್ಯ ನಡೆಯಲಿದೆ. ಇದೀಗ ಸತತ 2ನೇ ವರ್ಷ ಭಾರತ ತಂಡ ಐರ್ಲೆಂಡ್ ಪ್ರವಾಸ ಮಾಡುತ್ತಿದೆ. 

ಐರ್ಲೆಂಡ್ ಪ್ರವಾಸಕ್ಕೆ ಭಾರತ ತಂಡ

ಜಸ್ಪ್ರೀತ್ ಬುಮ್ರಾ(ನಾಯಕ), ಋತುರಾತ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಶಹಬಾಜ್ ಅಹಮ್ಮದ್, ರವಿ ಬಿಶ್ನೋಯ್, ಪ್ರಸಿದ್ಧ್ ಕೃಷ್ಣ, ಅರ್ಶದೀ್ಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್.

Follow Us:
Download App:
  • android
  • ios