* ಸತತ ಬ್ಯಾಟಿಂಗ್ ವೈಪಲ್ಯದಿಂದ ಕಂಗಾಲಾಗಿರುವ ವಿರಾಟ್ ಕೊಹ್ಲಿ* ಕಳೆದ ಮೂರು ವರ್ಷಗಳಿಂದ ಶತಕ ಸಿಡಿಸಲು ವಿಫಲವಾಗಿರುವ ಕಿಂಗ್ ಕೊಹ್ಲಿ* ವಿರಾಟ್ ಕೊಹ್ಲಿಗೆ ಹಲವು ಯುವ ಕ್ರಿಕೆಟಿಗರಿಂದ ಪೈಪೋಟಿ

ಮುಂಬೈ(ಜು.09): ವಿರಾಟ್ ಕೊಹ್ಲಿ. ದಶಕಗಳ ಕಾಲ ಭಾರತೀಯ ಕ್ರಿಕೆಟ್​ ಆಳಿದ ಆಟಗಾರ. ಕೇವಲ ಭಾರತೀಯ ಕ್ರಿಕೆಟ್ ಮಾತ್ರವಲ್ಲ, ಆ ಟೈಮ್​ನಲ್ಲಿ ಕ್ರಿಕೆಟ್ ಜಗತ್ತನ್ನೂ ಆಳಿದ್ದು ಇದೇ ಕಿಂಗ್ ಕೊಹ್ಲಿ. 2008ರಿಂದ ಟೀಂ ಇಂಡಿಯಾ ಜರ್ನಿ ಆರಂಭಿಸಿದ ಕೊಹ್ಲಿ, 2019ರವರೆಗೆ ಎಲ್ಲೂ ಸ್ಟಾಪೇ ಕೊಡಲಿಲ್ಲ. ಆದರೆ ಕಳೆದೆರಡು ವರ್ಷದಿಂದ ಕೊಹ್ಲಿಗೆ ಯಾಕೋ ಗ್ರಹಣ ಬಡಿದಿದೆ. ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ್ಮೇಲೆ ಅಂತೂ ಮಂಕಾಗಿ ಬಿಟ್ಟಿದ್ದಾರೆ. ಅವರ ಬ್ಯಾಟ್​ನಿಂದ ಕೇವಲ ಸೆಂಚುರಿಗಳು ನಿಂತಿಲ್ಲ. ರನ್​ಗಳು ಸಹ ನಿಂತಿವೆ. ಹಾಗಾಗಿ ಈಗ ಕಿಂಗ್ ಕೊಹ್ಲಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅವರ ಇಂಟರ್ ನ್ಯಾಷನಲ್ ಕೆರಿಯರ್ ಡೋಲಾಯಮಾನವಾಗಿದೆ. ಟೀಂ ಇಂಡಿಯಾದಲ್ಲಿ ಅವರ ಸ್ಥಾನ ಅಲುಗಾಡುತ್ತಿದೆ. ಇದನ್ನ ನಾವ್ ಹೇಳ್ತಿಲ್ಲ. ಬಿಸಿಸಿಐ ಹೇಳ್ತಿದೆ.

ಇಂಗ್ಲೆಂಡ್​ನಲ್ಲಿ ರನ್ ಗಳಿಸಿದ್ರೆ ಮಾತ್ರ ಟಿ20 ವಿಶ್ವಕಪ್​ಗೆ ಆಯ್ಕೆನಾ..?

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಸೀನಿಯರ್ಸ್​ಗೆ ರೆಸ್ಟ್​ ನೀಡಿ ಜೂನಿಯರ್​ ಆಟಗಾರರನ್ನ ಸೆಲೆಕ್ಟ್ ಮಾಡಲಾಗಿದೆ. ಟಿ20 ಸಿರೀಸ್​ಗೆ ತಂಡವನ್ನ ಆಯ್ಕೆ ಮಾಡಿಲ್ಲ. ಹಿರಿಯ ಆಟಗಾರರು ವಿಂಡೀಸ್ ಟಿ20 ಸರಣಿ ಆಡಲಿದ್ದಾರೆ. ಅದಕ್ಕೂ ಮುಂಚೆ ವಿರಾಟ್ ಕೊಹ್ಲಿ (Virat Kohli) ಭವಿಷ್ಯ ಇಂಗ್ಲೆಂಡ್​ನಲ್ಲಿ ನಿರ್ಧಾರವಾಗಲಿದೆ. ಹೌದು, ಇಂಗ್ಲೆಂಡ್ ವಿರುದ್ಧದ ಎರಡು ಟಿ20 ಮತ್ತು ಮೂರು ಒನ್​ಡೇ ಮ್ಯಾಚ್​ಗಳಲ್ಲಿ ಹೇಗೆ ಆಡ್ತಾರೆ ಅನ್ನೋದರ ಮೇಲೆ ಕೊಹ್ಲಿ ಟಿ20 ಭವಿಷ್ಯ ಅಡಗಿದೆ.

5 ಪಂದ್ಯಗಳಲ್ಲಿ ನಿರ್ಧಾರವಾಗುತ್ತಾ ಕೊಹ್ಲಿ ಭವಿಷ್ಯ..?

ಮೊದಲ ಟಿ20 ಪಂದ್ಯ ಆಡದ ವಿರಾಟ್ ಕೊಹ್ಲಿ ಉಳಿದ ಎರಡು ಟಿ20 ಮತ್ತು ಮೂರು ಒನ್​ಡೇ ಮ್ಯಾಚ್​ಗಳನ್ನಾಡಲಿದ್ದಾರೆ. ಈ ಐದು ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ರೆ ವೆಸ್ಟ್ ಇಂಡೀಸ್ ಟಿ20 ಸಿರೀಸ್​ಗೆ ಸೆಲೆಕ್ಟ್ ಆಗ್ತಾರೆ. ಇಲ್ಲದಿದ್ದರೆ ವಿಂಡೀಸ್​ಗೆ ಮಾತ್ರವಲ್ಲ, ಟಿ20 ವಿಶ್ವಕಪ್​ಗೂ ಆಯ್ಕೆಯಾಗಲ್ಲ ಅಂತ ಬಿಸಿಸಿಐ (BCCI) ಮೂಲಗಳು ತಿಳಿಸಿವೆ. ಎಂತ ಆಟಗಾರನಿಗೆ ಇದೆಂಥ ಸ್ಥಿತಿ ಬಂತಪ್ಪ ಅಂತ ನೀವು ಅಂದುಕೊಳ್ಳಬಹುದು. ಎಲ್ಲವೂ ಕಾಲದ ಮಹಿಮೆ.

ICC Test Rankings: ಟಾಪ್ 10 ಪಟ್ಟಿಯಿಂದ ವಿರಾಟ್ ಕೊಹ್ಲಿ ಔಟ್..!

ಮಧ್ಯಮ ಕ್ರಮಾಂಕದಲ್ಲಿ ಆಡಲು ಟೀಂ ಇಂಡಿಯಾದಲ್ಲಿ ಕಾಂಪಿಟೇಶನ್ ಹೆಚ್ಚಾಗಿದೆ. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಹೀಗೆ ಅರ್ಧಡಜನ್​ಗೂ ಹೆಚ್ಚು ಆಟಗಾರರು ಮಿಡ್ಲ್ ಆರ್ಡರ್​ನಲ್ಲಿ ಆಡಲು ರೇಸ್​ನಲ್ಲಿದ್ದಾರೆ. ಇದೇ ಕೊಹ್ಲಿಗೆ ಕಂಟಕವಾಗಿರೋದು. ಒಟ್ನಲ್ಲಿ ಇಂಗ್ಲೆಂಡ್ ಸಿರೀಸ್ ವಿರಾಟ್ ಕೊಹ್ಲಿ ಪಾಲಿಗೆ ಡು ಆರ್ ಡೈ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಟೆಸ್ಟ್ ಶ್ರೇಯಾಂಕದಲ್ಲಿ 6 ವರ್ಷಗಳ ಬಳಿಕ ಟಾಪ್ 10 ಪಟ್ಟಿಯಿಂದ ಹೊರಬಿದ್ದ ಕೊಹ್ಲಿ:

ತಮ್ಮ ಕ್ರಿಕೆಟ್ ಜೀವನದ ಅತ್ಯಂತ ಕೆಟ್ಟ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್‌ ಬಾರಿಸಿದರೆ, 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್‌ ಸಿಡಿಸಿದರು. ಇದರಿಂದಾಗಿ 2016ರ ಬಳಿಕ ಮೊದಲ ಬಾರಿಗೆ ಟಾಪ್‌ 10 ಪಟ್ಟಿಯಿಂದ ಹೊರಬೀಳುವ ಮೂಲಕ 13ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಆರು ವರ್ಷಗಳ ಬಳಿಕ ಟಾಪ್‌ 10ನಿಂದ ಹೊರಬಿದ್ದಿದ್ದಾರೆ.