* ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಗೆ ವೇಳಾಪಟ್ಟಿ ಪ್ರಕಟ* ಮುಂಬರುವ ಐಸಿಸಿ ಟಿ20 ವಿಶ್ವಕಪ್ ಬಳಿಕ ಆಸ್ಟ್ರೇಲಿಯಾದಿಂದಲೇ ಕಿವೀಸ್‌ನತ್ತ ಭಾರತ ಪ್ರಯಾಣ* ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನವೆಂಬರ್ 13ಕ್ಕೆ ಮುಕ್ತಾಯ
ವೆಲ್ಲಿಂಗ್ಟನ್(ಜೂ.29): ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಬಳಿಕ ಟೀಂ ಇಂಡಿಯಾ ಸೀಮಿತ ಓವರ್ ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ ಎಂದು ಮಂಗಳವಾರ ಕಿವೀಸ್ ಕ್ರಿಕೆಟ್(ಎನ್‌ಜೆಡ್‌ಸಿ) ಮಾಹಿತಿ ನೀಡಿದೆ. ಟಿ20 ವಿಶ್ವಕಪ್ ಟೂರ್ನಿಯು ನವೆಂಬರ್ 13ಕ್ಕೆ ಮುಕ್ತಾಯಗೊಳ್ಳಲಿದ್ದು, ಬಳಿಕ ಭಾರತ ತಂಡ ಅಲ್ಲಿಂದಲೇ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ.
ನವೆಂಬರ್ 18 ರಿಂದ 30ರ ವರೆಗೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ 3 ಟಿ20 ಹಾಗೂ 3 ಏಕದಿನ ಪಂದ್ಯಗಳು ನಡೆಯಲಿವೆ ಎಂದಿದೆ. ನವೆಂಬರ್ 18ಕ್ಕೆ ವೆಲ್ಲಿಂಗ್ಟನ್‌ನಲ್ಲಿ ಮೊದಲ ಟಿ20 ನಡೆಯಲಿದ್ದು, ನವೆಂಬರ್ 20 ಮತ್ತು 22ಕ್ಕೆ ಕ್ರಮವಾಗಿ ಮೌಂಟ್ ಮಾಂಗನುಯಿ, ನೇಪಿಯರ್‌ನಲ್ಲಿ ಉಳಿದೆರಡು ಪಂದ್ಯಗಳು ನಿಗದಿಯಾಗಿವೆ. ಬಳಿಕ ನವೆಂಬರ್ 25ಕ್ಕೆ ಆಕ್ಲಂಡ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ನವೆಂಬರ್ 27, ನವೆಂಬರ್ 20ಕ್ಕೆ ನಿಗದಿಯಾಗಿರುವ ಉಳಿದೆರಡು ಪಂದ್ಯಗಳಿಗೆ ಕ್ರಮವಾಗಿ ಹ್ಯಾಮಿಲ್ಟನ್, ಕ್ರೈಸ್ಟ್‌ಚರ್ಚ್ ಆತಿಥ್ಯ ವಹಿಸಲಿದೆ. ಇದಾದ ಬಳಿಕ 2023ರ ಜನವರಿಯಲ್ಲಿ ಕಿವೀಸ್ ತಂಡ ಸೀಮಿತ ಓವರ್ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ ಎಂದು ಎನ್‌ಜೆಡ್‌ಸಿ ಮಾಹಿತಿ ಒದಗಿಸಿದೆ.
ಕಳೆದ ಬಾರಿ ಟೀಂ ಇಂಡಿಯಾ(Team India), ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ರಿಕೆಟ್ ತಂಡವು ಕ್ಲೀನ್‌ಸ್ವೀಪ್ ಮಾಡಿತ್ತು. ಆದರೆ ಇದಾದ ಬಳಿಕ ನಡೆದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆತಿಥೇಯ ನ್ಯೂಜಿಲೆಂಡ್ ತಂಡವು ಜಯಿಸುವ ಮೂಲಕ ಟೀಂ ಇಂಡಿಯಾಗೆ ತಿರುಗೇಟು ನೀಡಿತ್ತು.
ಟೆಸ್ಟ್: ಬಾಂಗ್ಲಾ ವಿರುದ್ಧ ವಿಂಡೀಸ್ 2-0 ಗೆಲುವು
ಕ್ಯಾಸ್ಟ್ರೀಸ್(ಸೇಂಟ್ ಲೂಸಿಯಾ): ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ 10 ವಿಕೆಟ್ ಭರ್ಜರಿ ಜಯಗಳಿಸಿದ್ದು, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಎರಡೂ ಪಂದ್ಯಗಳು 4 ದಿನಗಳಲ್ಲೇ ಕೊನೆಗೊಂಡಿತು. ಸೋಮವಾರದ ಮೊದಲೆರಡು ಅವಧಿಗಳು ಮಳೆಗೆ ಆಹುತಿಯಾದ ಬಳಿಕ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾ 186ಕ್ಕೆ ಸರ್ವಪತನ ಕಂಡಿತು. ಹೀಗಾಗಿ ಗೆಲುವಿಗೆ ಕೇವಲ 13 ರನ್ ಗುರಿ ಪಡೆದಿದ್ದ ವಿಂಡೀಸ್ 2.5 ಎಸೆತಗಳಲ್ಲಿ ಜಯ ಗಳಿಸಿತು. ಇದಕ್ಕೂ ಮೊದಲು ಬಾಂಗ್ಲಾದೇಶವನ್ನು ಮೊದಲ ಇನ್ನಿಂಗ್‌್ಸನಲ್ಲಿ 234ಕ್ಕೆ ನಿಯಂತ್ರಿಸಿದ್ದ ವಿಂಡೀಸ್, 408 ರನ್ ಗಳಿಸಿ ದೊಡ್ಡ ಮುನ್ನಡೆ ಪಡೆದಿತ್ತು.
2023ರ ಐಪಿಎಲ್‌ಗೆ ಮುಂಬೈ ಇಂಡಿಯನ್ಸ್ ಸಿದ್ಧತೆ ಆರಂಭ!
ನವದೆಹಲಿ: 15ನೇ ಆವೃತ್ತಿ ಐಪಿಎಲ್‌ನ ಕಳಪೆ ಪ್ರದರ್ಶನದ ಬಳಿಕ 2023ರ ಐಪಿಎಲ್‌ಗೆ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈಗಲೇ ಸಿದ್ಧತೆ ಆರಂಭಿಸಿದೆ. ತಂಡದಲ್ಲಿರುವ ಭಾರತೀಯ ಅನ್‌ಕ್ಯಾಪ್‌್ಡ(ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡದ) ಆಟಗಾರರು 3 ವಾರಗಳ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ದೇಶಗಳ ಅಗ್ರ ಕ್ಲಬ್‌ಗಳ ವಿರುದ್ಧ ಪಂದ್ಯಗಳನ್ನಾಡಲಿದೆ ಎಂದು ತಿಳಿದುಬಂದಿದೆ.
Ind vs Ire: ರನ್ ಮಳೆಯಲ್ಲಿ ಗೆದ್ದ ಭಾರತ, ಟಿ20 ಸರಣಿ ಟೀಂ ಇಂಡಿಯಾ ಪಾಲು..!
ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ದೇಸಿ ಕ್ರಿಕೆಟ್ ಕೂಡಾ ಇಲ್ಲದಿರುವ ಕಾರಣ ತಂಡದಲ್ಲಿರುವ ಕಿರಿಯ ಆಟಗಾರರಾದ ತಿಲಕ್ ವರ್ಮಾ, ಕುಮಾರ್ ಕಾರ್ತಿಕೇಯ, ಅರ್ಜುನ್ ತೆಂಡುಲ್ಕರ್ ಸೇರಿದಂತೆ ಹಲವರು ಇಂಗ್ಲೆಂಡ್‌ನಲ್ಲಿ ಕನಿಷ್ಠ 10 ಟಿ20 ಪಂದ್ಯಗಳನ್ನಾಡಲಿದ್ದಾರೆ. ದ.ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಕೂಡಾ ಇವರನ್ನು ಸೇರಿಕೊಳ್ಳಲಿದ್ದು, ಕೋಚ್ ಮಹೇಲಾ ಜಯವರ್ಧನೆ ತಂಡದ ಜೊತೆ ಇರಲಿದ್ದಾರೆ ಎಂದು ಗೊತ್ತಾಗಿದೆ.
