Asianet Suvarna News Asianet Suvarna News

2021ರ ಫೆಬ್ರ​ವ​ರಿ​ಯ​ಲ್ಲಿ ಭಾರತ-ಇಂಗ್ಲೆಂಡ್‌ ಸರ​ಣಿ

ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಇದಾದ ಬಳಿಕ 2021ರ ಫೆಬ್ರವರಿ ವೇಳೆಗೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಇದೇ ವೇಳೆ ಐಪಿಎಲ್ ಟೂರ್ನಿ ನಡೆಯುವುದು ಯಾವಾಗ ಎನ್ನುವ ಸುಳಿವನ್ನು ದಾದಾ ಬಿಟ್ಟುಕೊಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

India To Host England In February 2021 Confirms BCCI President Sourav Ganguly
Author
New Delhi, First Published Aug 24, 2020, 8:30 AM IST

ನವ​ದೆ​ಹ​ಲಿ(ಆ.24): ಮುಂದಿನ ವರ್ಷ ಫೆಬ್ರ​ವ​ರಿ​ಯಲ್ಲಿ ಇಂಗ್ಲೆಂಡ್‌ ತಂಡ ಭಾರತ ಪ್ರವಾಸ ಕೈಗೊ​ಳ್ಳ​ಲಿದೆ ಎಂದು ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಮಾಹಿತಿ ನೀಡಿ​ದ್ದಾರೆ. ಜೊತೆಗೆ ಏಪ್ರಿಲ್‌ನಲ್ಲಿ ಐಪಿಎಲ್‌ ನಡೆ​ಯು​ವು​ದಾಗಿಯೂ ತಿಳಿ​ಸಿ​ದ್ದಾರೆ. 

ಈ ವರ್ಷ ಸೆಪ್ಟೆಂಬರ್‌-ಅಕ್ಟೋ​ಬರ್‌ನಲ್ಲಿ ಇಂಗ್ಲೆಂಡ್‌ ತಂಡ ಭಾರ​ತಕ್ಕೆ ಆಗ​ಮಿ​ಸ​ಬೇ​ಕಿತ್ತು. ಆದರೆ ಕೊರೋನಾ ಭೀತಿ​ಯಿಂದಾಗಿ ಸರ​ಣಿ​ಯನ್ನು ಮುಂದೂ​ಡ​ಲಾ​ಗಿದೆ. ಪ್ರವಾಸದಲ್ಲಿ ಇಂಗ್ಲೆಂಡ್‌ 5 ಟೆಸ್ಟ್‌, 3 ಏಕ​ದಿನ ಹಾಗೂ 3 ಟಿ20 ಸರ​ಣಿ​ಗ​ಳನ್ನು ಆಡ​ಲಿದೆ. 

IPL ಹಲವರ ಜೀವನದ ದಾರಿ; ಟೀಕೆಗೆ ತಿರುಗೇಟು ನೀಡಿದ ಗವಾಸ್ಕರ್!

‘ಬಿ​ಸಿ​ಸಿಐ ಹಾಗೂ ಭಾರತ ತಂಡ ದ್ವಿಪ​ಕ್ಷೀಯ ಸರ​ಣಿ​ಗ​ಳ​ನ್ನು ಆಡಲು ಬದ್ಧ​ವಿದೆ. ಈ ವರ್ಷ ಡಿಸೆಂಬರ್‌ನಲ್ಲಿ ತಂಡ ಆಸ್ಪ್ರೇ​ಲಿ​ಯಾಗೆ ತೆರ​ಳ​ಲಿದ್ದು, 2021ರ ಫೆಬ್ರ​ವ​ರಿ​ಯಲ್ಲಿ ಇಂಗ್ಲೆಂಡ್‌ ವಿರುದ್ಧ ಸರಣಿ ಆಡ​ಲಿದೆ. ಏಪ್ರಿಲ್‌ನಲ್ಲಿ ಐಪಿ​ಎಲ್‌ ನಡೆ​ಯ​ಲಿದೆ. 2021ರ ಟಿ20 ವಿಶ್ವ​ಕಪ್‌, 2023ರ ಏಕ​ದಿನ ವಿಶ್ವ​ಕಪ್‌ಗೂ ಸಿದ್ಧತೆ ಆರಂಭಿ​ಸ​ಬೇ​ಕಿದೆ’ ಎಂದು ಗಂಗೂಲಿ, ರಾಜ್ಯ ಸಂಸ್ಥೆಗಳಿಗೆ ಬರೆ​ದಿ​ರುವ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಬರೋಬ್ಬರಿ ಒಂದು ವರ್ಷಗಳ ಬಳಿಕ ಭಾರತದಲ್ಲಿ ಏಕದಿನ ಸರಣಿಗೆ ಆತಿಥ್ಯ ವಹಿಸಿದಂತಾಗುತ್ತದೆ. ಈ ಹಿಂದೆ 2020ರ ಜನವರಿಯಲ್ಲಿ ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೂರ್ಣ ಪ್ರಮಾಣದ ಏಕದಿನ ಸರಣಿ ಆಡಿತ್ತು. 
 

 

Follow Us:
Download App:
  • android
  • ios