ಧೋನಿ 2022ರವರೆಗೂ ಐಪಿಎಲ್ ಆಡ್ತಾರೆ: ಸಿಎಸ್‌ಕೆ
ಐಪಿಎಲ್ ಟೂರ್ನಿಯಲ್ಲಿ ಮೂರು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಮಹೇಂದ್ರ ಸಿಂಗ್ ಧೋನಿ 2022ರವರೆಗೂ ತಮ್ಮ ತಂಡದಲ್ಲೇ ಮುಂದುವರೆಯುವ ವಿಶ್ವಾಸವನ್ನು CSK ಬಾಸ್‌ಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಆ.13): ಎಂ.ಎಸ್. ಧೋನಿ 2022ರವರೆಗೂ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ.
ಧೋನಿ ನಿವೃತ್ತಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಶ್ವನಾಥನ್‌ರ ಹೇಳಿಕೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 2019ರ ಏಕದಿನ ವಿಶ್ವಕಪ್ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದು, ಮುಂದಿನ ತಿಂಗಳು 19ರಿಂದ ಆರಂಭಗೊಳ್ಳಲಿರುವ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಐಪಿಎಲ್‌ಗೆ ಭಾರತದಿಂದಲ್ಲೇ ನೆಟ್ ಬೌಲರ್ಸ್ ಕರೆದೊಯ್ಯಲು ಚಿಂತನೆ
ಕಳೆದ ಜನವರಿಯಲ್ಲಿ ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷ ಹಾಗೂ ಮ್ಯಾನೆಜಿಂಗ್ ಡೈರೆಕ್ಟರ್ ಆದಂತಹ ಎನ್. ಶ್ರೀನಿವಾಸನ್ 2021ರಲ್ಲಿ ನಡೆಯಲಿರುವ ಮೆಗಾ ಐಪಿಎಲ್ ಹರಾಜಿನಲ್ಲಿ ಎಂ. ಎಸ್. ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೇ ಉಳಿಸಿಕೊಳ್ಳಲಾಗುವುದು ಎಂದು ಹೇಳಿದ್ದರು.
ಯುಎಇಗೆ ತೆರಳುವ ಮುನ್ನ ಸಿಎಸ್‌ಕೆ 1 ವಾರ ಅಭ್ಯಾಸ ಶಿಬಿರ
ಚೆನ್ನೈ: 2020ರ ಐಪಿಎಲ್ 13ನೇ ಆವೃತ್ತಿ ಯುಎಇಯಲ್ಲಿ ನಡೆಯಲಿದ್ದು, ಎಲ್ಲಾ ಫ್ರಾಂಚೈಸಿಗಳು ತಿಂಗಳ ಮುಂಚೆಯೇ ತೆರಳಲಿವೆ. ಯುಎಇಗೆ ತೆರಳುವ ಮುಂಚಿತವಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ, ತವರಿನಲ್ಲಿ ಒಂದು ವಾರ ಅಭ್ಯಾಸ ಶಿಬಿರ ನಡೆಸಲಿದೆ.
ಇದಕ್ಕಾಗಿ ಸಿಎಸ್‌ಕೆ ಆಡಳಿತ, ತಮಿಳುನಾಡು ರಾಜ್ಯ ಸರ್ಕಾರದ ಅನುಮತಿ ಪಡೆಯಲು ಮುಂದಾಗಿದೆ. ಅಭ್ಯಾಸ ಶಿಬಿರದಲ್ಲಿ ನಾಯಕ ಧೋನಿ, ಸುರೇಶ್ ರೈನಾ ಸೇರಿದಂತೆ ಇತರೆ ಆಟಗಾರರು ಭಾಗವಹಿಸಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.