ಟಿ20 ವಿಶ್ವಕಪ್‌ನಲ್ಲಿ 7 ಓವರ್‌ಗೆ ಹಲವು ದಾಖಲೆ, ಸಂಜು ಫಿಫ್ಟಿ ಮೂಲಕ ಬೃಹತ್ ಮೊತ್ತದತ್ತ ಭಾರತ, ಫೈನಲ್ ಪಂದ್ಯದಲ್ಲಿ ಭಾರತ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದು ಮಾತ್ರವಲ್ಲ ಹಲವು ಮೈಲಿಗಲ್ಲು ನಿರ್ಮಿಸಿದೆ.
ಅಹಮ್ಮದಾಬಾದ್ (ಮಾ.08) ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಅಬ್ಬರದ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಹಲವು ದಾಖಲೆ ಬರೆದಿದೆ. ಕೇವಲ 7 ಓವರ್‌ಗೆ ಎರಡೆರಡು ದಾಖಲೆ ನಿರ್ಮಿಸಿದೆರೆ, ಇತ್ತ ಸಂಜು ಸ್ಯಾಮ್ಸನ್ , ಅಭಿಷೇಕ್ ಶರ್ಮಾಕೂಡ ದಾಖಲೆ ಬರೆದಿದ್ದಾರೆ. ಟ20 ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ಫಾಸ್ಟೆಸ್ಟ್ ಶತಕ ಸಿಡಿಸಿದ ದಾಖಲೆಯನ್ನು ಭಾರತ ಬರೆದಿದೆ. ಇಷ್ಟೇ ಅಲ್ಲ ಪವರ್‌ಪ್ಲೇನಲ್ಲಿ ಗರಿಷ್ಠ ಸ್ಕೋರ್ ದಾಖಲೆ ಬೆರದಿದೆ.
ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಫಾಸ್ಟೆಸ್ಟ್ ಟೀಂ ಶತಕ
- 7.2 ಓವರ್, ಭಾರತ -ನ್ಯೂಜಿಲೆಂಡ್, 2026
- 7.5 ಓವರ್, ನ್ಯೂಜಿಲೆಂಡ್-ಸೌತ್ ಆಫ್ರಿಕಾ, 2026
- 8.1 ಓವರ್, ಇಂಗ್ಲೆಂಡ್-ಭಾರತ, 2026
- 8.3 ಓವರ್, ಭಾರತ ಇಂಗ್ಲೆಂಡ್, 2026
ಟಿ20 ವಿಶ್ವಕಪ್ ಪವರ್‌ಪ್ಲೇನನಲ್ಲಿ ಗರಿಷ್ಠ ಸ್ಕೋರ್
- 92/0, ಭಾರತ-ನ್ಯೂಜಿಲೆಂಜ್ , 2026 ಫೈನಲ್
- 92/1, ವೆಸ್ಟ್ ಇಂಡೀಸ್-ಆಫ್ಘಾನಿಸ್ತಾನ, 2024
- 91/1, ನೆದರ್ಲೆಂಡ್-ಐರ್ಲೆಂಡ್, 2014
- 89/3, ಇಂಗ್ಲೆಂಡ್ -ಸೌತ್ ಆಫ್ರಿಕಾ, 2016
- 86/1, ಭಾರತ-ನಮೀಬಿಯಾ, 2026
ಇತ್ತ ಸಂಜು ಸ್ಯಾಮ್ಸನ್ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸತತ 50 ಪ್ಲಸ್ ಸ್ಕೋರ್ ಮಾಡಿದ 7ನೇ ಆಟಗಾರ ಹಾಗೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಮೂರನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.
ಟಿ20 ವಿಶ್ವಕಪ್‌ನ ಸೆಮಿಫೈನಲ್-ಫೈನಲ್‌ನಲ್ಲಿ 50 ಪ್ಲಸ್ ಸಾಧನೆ
- 200ರಲ್ಲಿ ಶಾಹೀದ್ ಆಫ್ರಿದಿ
- 2014ರಲ್ಲಿ ವಿರಾಟ್ ಕೊಹ್ಲಿ
- 2026ರಲ್ಲಿ ಸಂಜು ಸ್ಯಾಮ್ಸನ್
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ 50 ಪ್ಲಸ್ ಸ್ಕೋರ್
- ಮಹೇಲಾ ಜಯವರ್ದನೆ (3 ಅರ್ಧಶತಕ) 2010
- ವಿರಾಟ್ ಕೊಹ್ಲಿ (3 ಅರ್ಧಶತಕ) 2026 ಹಾಗೂ 2021
- ಬಾಬರ್ ಅಜಮ್ (3 ಅರ್ಧಶತಕ) 2021
- ಕೆಎಲ್ ರಾಹುಲ್(3 ಅರ್ಧಶತಕ) 2021
- ಕುಶಾಲ್ ಮೆಂಡೀಸ್ (3 ಅರ್ಧಶತಕ) 2026
- ಶಾಹೀಬಜ್ದಾ ಫರ್ಹಾನ್ (3 ಅರ್ಧಶತಕ) 2026
- ಸಂಜು ಸ್ಯಾಮ್ಸನ್ (3 ಅರ್ಧಶತಕ) 2026


