Asianet Suvarna News Asianet Suvarna News

ಪುರು​ಷರ ಏಕ​ದಿ​ನ ಕ್ರಿಕೆಟ್‌ಗೆ ಭಾರ​ತದ ಮಹಿಳಾ ರೆಫ್ರಿ!

ಯುಎ​ಇ​ನಲ್ಲಿ ನಡೆ​ಯ​ಲಿ​ರುವ ವಿಶ್ವ​ಕಪ್‌ ಲೀಗ್‌ 2 ಟೂರ್ನಿಯ ಯುಇಎ ಹಾಗೂ ಅಮೆ​ರಿಕ ನಡು​ವಿನ ಪಂದ್ಯ​ದಲ್ಲಿ ಭಾರತದ ಜಿ.ಎಸ್‌.ಲಕ್ಷ್ಮಿ ರೆಫ್ರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

India G S Lakshmi to become first woman to referee a men's ODI Cricket
Author
Dubai - United Arab Emirates, First Published Dec 6, 2019, 2:05 PM IST

ದುಬೈ(ಡಿ.06): ಪುರು​ಷರ ಅಂತಾ​ರಾಷ್ಟ್ರೀಯ ಏಕ​ದಿನ ಪಂದ್ಯ​ಗ​ಳಲ್ಲಿ ಕಾರ್ಯ​ನಿ​ರ್ವ​ಹಿ​ಸ​ಲಿ​ರುವ ಮೊದಲ ಮಹಿಳಾ ರೆಫ್ರಿ ಎನ್ನುವ ಹಿರಿಮೆಗೆ ಭಾರ​ತದ ಜಿ.ಎಸ್‌.ಲಕ್ಷ್ಮಿ ಪಾತ್ರ​ರಾ​ಗ​ಲಿ​ದ್ದಾರೆ. 

ಇಂಡೋ-ವಿಂಡೀಸ್‌ ಮೊದಲ ಟಿ20ಗೆ ಕ್ಷಣಗಣನೆ ಆರಂಭ

ಭಾನು​ವಾರ ಯುಎ​ಇ​ನಲ್ಲಿ ನಡೆ​ಯ​ಲಿ​ರುವ ವಿಶ್ವ​ಕಪ್‌ ಲೀಗ್‌ 2 ಟೂರ್ನಿಯ ಯುಇಎ ಹಾಗೂ ಅಮೆ​ರಿಕ ನಡು​ವಿನ ಪಂದ್ಯ​ದಲ್ಲಿ ಅವರು ಕಾರ್ಯ​ನಿ​ರ್ವ​ಹಿ​ಸ​ಲಿ​ರುವ ಮೂಲಕ ದಾಖಲೆ ಬರೆ​ಯ​ಲಿ​ದ್ದಾರೆ. ಇದೇ ವರ್ಷ ಮೇ ತಿಂಗ​ಳಲ್ಲಿ ಲಕ್ಷ್ಮಿ, ಐಸಿಸಿ ಮ್ಯಾಚ್‌ ರೆಫ್ರಿ​ಗಳ ಸಮಿ​ತಿಗೆ ಆಯ್ಕೆಯಾಗಿ​ದ್ದರು. 

ಟಿ20 ವಿಶ್ವ​ಕಪ್‌ಗೆ ಮೂವರು ವೇಗಿಗಳು ಫಿಕ್ಸ್, ಮತ್ತೊಬ್ಬ ಯಾರು..?

51 ವರ್ಷದ ಲಕ್ಷ್ಮಿ ಮೊದಲ ಬಾರಿಗೆ 2008-09ರಲ್ಲಿ ಮಹಿಳಾ ದೇಸಿ ಪಂದ್ಯ​ಗ​ಳಲ್ಲಿ ರೆಫ್ರಿ​ಯಾಗಿ ಕಾರ್ಯ​ನಿ​ರ್ವ​ಹಿ​ಸಿ​ದ್ದರು. ಅವರು ಈವರೆಗೂ 3 ಅಂತಾ​ರಾ​ಷ್ಟ್ರೀಯ ಮಹಿಳಾ ಏಕ​ದಿನ, 16 ಪುರು​ಷರ ಅಂತಾ​ರಾ​ಷ್ಟ್ರೀಯ ಟಿ20, 7 ಮಹಿಳಾ ಅಂತಾ​ರಾ​ಷ್ಟ್ರೀಯ ಟಿ20 ಪಂದ್ಯ​ಗ​ಳಲ್ಲಿ ಮ್ಯಾಚ್‌ ರೆಫ್ರಿ​ಯಾಗಿ ಕೆಲಸ ಮಾಡಿ​ದ್ದಾರೆ. ತಮ್ಮ ನೇಮಕಾತಿ ಬಗ್ಗೆ ಸಂತಸ ವ್ಯಕ್ತ​ಪ​ಡಿ​ಸಿ​ರುವ ಲಕ್ಷ್ಮಿ, ‘ಬ​ಹಳ ಹೆಮ್ಮೆ ಎನಿ​ಸು​ತ್ತದೆ. ಐಸಿ​ಸಿಯ ಮಹ​ತ್ವದ ಟೂರ್ನಿ​ಯಲ್ಲಿ ಕಾರ್ಯ​ನಿ​ರ್ವ​ಹಿ​ಸಲು ಉತ್ಸು​ಕ​ಳಾ​ಗಿ​ದ್ದೇನೆ’ ಎಂದರು. ಆಂಧ್ರದ ಗಂಡಿಕೋಟ ಮೂಲ​ದ​ವ​ರಾದ ಲಕ್ಷ್ಮಿ, ತಮ್ಮ ರಾಜ್ಯದ ಪರ 18 ವರ್ಷಗಳ ಕಾಲ ದೇಸಿ ಕ್ರಿಕೆಟ್‌ ಆಡಿ​ದ್ದರು.
 

Follow Us:
Download App:
  • android
  • ios